ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ : ನಾಗರಾಜ್ ಬೇದ್ರೇ ಅಕ್ರೋಶ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಡಿ. 20 :
ಬೆಳಗಾವಿ ಸುವರ್ಣಸೌಧದಲ್ಲಿ ಬಿಜೆಪಿ ಮುಖಂಡ ವಿಧಾನ ಪರಿಷತ್ ಸದಸ್ಯರಾದ ಸಿ. ಟಿ ರವಿ ರವರ ಮೇಲೆ ಕಾಂಗ್ರೆಸ್ ಗುಂಡಾಗಳು ಹಲ್ಲೆಗೆ ಯತ್ನ ನಡೆಸಿ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಇದು ಹೇಡಿಗಳ ಕೃತ್ಯ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ತೀವ್ರವಾಗಿ ಖಂಡಿಸಿದ್ದಾರೆ.
ಲಕ್ಕಿ ಹೆಬ್ಬಾಳ್ಕೆರ್ ಬೆಂಬಲಿಗರ ಗುಂಡಾ ವರ್ತನೆ ಬಿಜೆಪಿ ಪಕ್ಷ ಸಹಿಸಲ್ಲ ಅಂಥವರನ್ನು ಒದ್ದು ಒಳಗೆ ಹಾಕಿ ಕಾನೂನು ಪ್ರಕಾರ ಕ್ರಮ ಪ್ರಕರಣವನ್ನು ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ನಾಗರಾಜ್ ಬೇದ್ರೇ ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸಂಪೂರ್ಣ ಹದಗೆಟ್ಟು ಹೋಗಿದೆ ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದ ಮೇಲೆ ಸಾರ್ವಜನಿಕರಿಗೆ ಎಲ್ಲಿ ರಕ್ಷಣೆ ಈ ಸರ್ಕಾರ ನೀಡುತ್ತದೆ. ನಿನ್ನೆ ರಾತ್ರಿ ಬಂಧಿಸಿ ಖಾನಾಪುರ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ನ್ಯಾಯಾಧೀಶರ ಮುಂದೆ ಆದರೂ ಪಡಿಸುವುದನ್ನು ಬಿಟ್ಟು ತದನಂತರ ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ ಪೊಲೀಸರು ಸಿಟಿ ರವಿಯವರು ಏನು ಭಯೋತ್ಪಾದಕರ ಬಂಧಿಸಿದ ರೀತಿ ಪೊಲೀಸರು ವರ್ತಿಸಿದ್ದಾರೆ ಅದನ್ನು ಬಿಟ್ಟು ಮೂರ್ನಾಲ್ಕು ಜಿಲ್ಲೆಗಳ ಠಾಣೆಗಳನ್ನು ರಾತ್ರಿ ಇಡಿ ಸುತ್ತಾಡಿಸಿ ಪೊಲೀಸರು ಮಾನಸಿಕ ಹಿಂಸೆ ನೀಡಿ ಹಲ್ಲೆ ಮಾಡಿದ್ದು ಅಕ್ಷಮ್ಯ ಅಪರಾಧ ಸಿನಿಮೆಯ ರೀತಿ ಪೊಲೀಸರು ವರ್ತಿಸಿದ್ದಾರೆ ಎಂದು ನಾಗರಾಜ್ ಬೇದ್ರೇ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸರ್ಕಾರದ ಆಣತಿಯಂತೆ ಪೊಲೀಸರು ಕಾರ್ಯನಿರ್ವಹಿಸಿದ್ದು ಈ ಸರ್ಕಾರವನ್ನು ನಾವು ಯಾವ ದೇಶದಲ್ಲಿದ್ದೇವೆ ಎಂದು ಪ್ರಶ್ನಿಸಬೇಕಾಗುತ್ತದೆ ಒಬ್ಬ ಜನಪ್ರತಿನಿಧಿಯೊಂದಿಗೆ ನಡೆದುಕೊಂಡರೆ ಪೊಲೀಸರು ಸರ್ಕಾರ ಅಧಿಕಾರದ ದುರ್ಬಳಕೆಯನ್ನು ಮಾಡಿಕೊಳ್ಳುತ್ತಿದೆ ಇದರ ವಿರುದ್ದ ರಾಜಾದ್ಯಂತ ಭಾರತೀಯ ಜನತಾ ಪಾರ್ಟಿ ಸರ್ಕಾರದ ಧೋರಣೆಯನ್ನು ಖಂಡಿಸಿ ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ.