ರಂಭಾಪುರಿ ಶ್ರೀಗಳಿಂದ ರೇಣುಕಾಸ್ವಾಮಿ ಮನೆಯಲ್ಲಿ ಆತ್ಮಶಾಂತಿ ಪೂಜೆ..!
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆಯಾಗಿ ಆರೇಳು ತಿಂಗಳು ಕಳೆದುದ್ದು, ಇದೀಗ ಮನೆಯಲ್ಲಿ ಶಾಂತಿ ಪೂಜೆಯನ್ನು ನೆರವೇರಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯಲ್ಲಿ ರಂಭಾಪುರಿ ಶ್ರೀಗಳಿಂದ ಆತ್ಮಶಾಂತಿ ಹಾಗೂ ವಾಸ್ತು ಪೂಜೆ ನೆರವೇರಿದೆ. ರೇಣುಕಾಸ್ವಾಮಿ ಮನೆಯಲ್ಲಿಯೇ ವಾಸ್ತವ್ಯ ಹೂಡೊದ್ದ ರಂಭಾಪುರಿ ಶ್ರೀಗಳು ಪೂಜೆಯನ್ನು ಸುಸೂತ್ರವಾಗಿ ಮುಗಿಸಿದ್ದಾರೆ. ಕುಟುಂಬಸ್ಥರಿಗೆ ಆಶೀರ್ವಾದ ಮಾಡಿ ಮಗನ ಸಾವಿಗೆ ನ್ಯಾಯ ಸಿಗುವುದಾಗಿಯೂ ಭರವಸೆ ನೀಡಿದ್ದಾರೆ.
ಪೂಜೆ ಬಳಿಕ ಮಾತನಾಡಿರುವ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ, ನಮ್ಮ ಮೊಮ್ಮಗ ಹಾಗೂ ಸೊಸೆ ಕೂಡ ಈ ಪೂಜೆಯಲ್ಲಿ ಭಾಗಿಯಾಗಿದ್ದರೆ ಚೆನ್ನಾಗಿರುತ್ತಾ ಇತ್ತು. ಆದರೆ ಇಉಗ ಅವರು ತವರು ಮನೆಯಲ್ಲಿದ್ದಾರೆ. ಹೀಗಾಗಿ ಅವರು ಪೂಜೆಯಲ್ಲಿ ಭಾಗಿಯಾಗಲು ಆಗಿಲ್ಲ. ಅವರಿಗೂ ಗುರುಗಳು ಆಶಿಉರ್ವಾದ ಮಾಡಿದ್ದಾರೆ ಎಂದಿದ್ದಾರೆ.
ಗುರುಗಳು ಈ ಕಡೆ ಬಂದಾಗ ಪೂಜೆ ಮಾಡಿಸುವ ಭರವಸೆ ನೀಡಿದ್ದರು. ಅದರಂತೆ ಮನೆಗೆ ಬಂದು ಪೂಜೆ ಮಾಡಿಸಿ ಕೊಟ್ಟಿದ್ದಾರೆ. ವಾಸ್ತು ಶಾಂತಿ, ಮಗನಿಗೆ ಆತ್ಮಶಾಂತಿಯ ಪೂಜೆಯನ್ನು ಮಾಡಲಾಗಿದೆ. ಗುರುಗಳ ದಯೆಯಿಂದ ನಮಗೆ ಎಲ್ಲಾ ಒಳ್ಳೆಯದೆ ಆಗುತ್ತದೆ. ಮಗನ ಸಾವಿನ ವಿಚಾರದಲ್ಲಿ ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ. ನಾವೂ ಆಗಾಗ ಗುರುಗಳನ್ನು ಭೇಟಿಯಾಗಿ, ಅವರ ಬಳಿ ನಮ್ಮ ಕಷ್ಟ ಸುಖಗಳನ್ನೆಲ್ಲಾ ಹಂಚಿಕೊಳ್ಳಯತ್ತೇವೆ. ಆ ಒಂದು ಶಕ್ತಿಯೇ ನಮ್ಮನ್ನು ಕಾಪಾಡುತ್ತಿರುವುದು. ಗುರುಗಳು ನಮ್ಮ ಮಗನ ಆತ್ಮ ಶಾಂತಿ ಪೂಜೆ ಮಾಡಿ, ನಮಗೆ ಆಶೀರ್ವಾದ ಮಾಡಿ ಹೋಗಿದ್ದಾರೆ. ಅವರು ನಮಗೆ ಧೈರ್ಯ ಕೊಟ್ಟು ಹೋಗಿದ್ದಾರೆ. ಮಗನ ಸಾವಿನಲ್ಲಿ ಕಾನೂನು ಏನೇ ಆಗಲಿ ಭಗವಂತ ನಮ್ಮ ಜೊತೆಗಿದ್ದಾನೆ ಎಂದು ಹೇಳಿದ್ದಾರೆ.