Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಡಲೆ ಬೆಳೆಗೆ ಆಸ್ಕೋ ಕೈಟಾ ಅಂಗಮಾರಿ ರೋಗ: ಹತೋಟಿಗೆ ಕೃಷಿ ಇಲಾಖೆ ಸಲಹೆ

02:32 PM Jan 19, 2024 IST | suddionenews
Advertisement

Asco kaita disease for chickpea crop: Agriculture department advice for control

Advertisement

ಕಡಲೆ ಬೆಳೆಗೆ ಆಸ್ಕೋ ಕೈಟಾ ಅಂಗಮಾರಿ ರೋಗ: ಹತೋಟಿಗೆ ಕೃಷಿ ಇಲಾಖೆ ಸಲಹೆ

ಚಿತ್ರದುರ್ಗ. ಜ.19: ಚಿತ್ರದುರ್ಗ ತಾಲ್ಲೂಕು ಗುಡ್ಡದರಂಗವ್ವನಹಳ್ಳಿ ಗ್ರಾಮಕ್ಕೆ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ-ರೈತ ಸಂಜೀವಿನಿ ವಾಹನವು ಈಚೆಗೆ ಭೇಟಿ ನೀಡಿ ಕಡಲೆ ಬೆಳೆಯನ್ನು ಪರೀಕ್ಷಿಸಿದ ಸಂದರ್ಭದಲ್ಲಿ ಆಸ್ಕೋ ಕೈಟಾ ಅಂಗಮಾರಿ ರೋಗ ಕಂಡುಬಂದಿರುತ್ತದೆ.

Advertisement

ಜಿಲ್ಲೆಯಲ್ಲಿ ಪ್ರಸ್ತುತ ಕಡಲೆ ಬೆಳೆ ಬೆಳವಣಿಗೆಯಿಂದ ಹೂವಾಡುವ ಹಂತದಲ್ಲಿರುತ್ತದೆ. ಕಡಲೆ ಬೆಳೆಗೆ ಆಸ್ಕೋ ಕೈಟಾ ಅಂಗಮಾರಿ ರೋಗವು ಗುಡ್ಡದ ರಂಗವ್ವನಹಳ್ಳಿ ಗ್ರಾಮ, ಸುತ್ತಮುತ್ತ ಪ್ರದೇಶದಲ್ಲಿ ಹಾಗೂ ಕಡಲೆ ಬೆಳೆದಂತಹ ಚಿತ್ರದುರ್ಗ ತಾಲ್ಲೂಕಿನಲ್ಲಿ ಕೂಡ ಈ ಸಂದರ್ಭದಲ್ಲಿ ಕಂಡುಬರುವ ಸಾಧ್ಯತೆ ಇರುತ್ತದೆ.

ಆಸ್ಕೋ ಕೈಟಾ ಅಂಗಮಾರಿ ರೋಗದ ಹತೋಟಿಗೆ ಮ್ಯಾಂಕೋಜೆಬ್ 2 ಗ್ರಾಂ  ಪ್ರತಿ ಲೀಟರ್‍ಗೆ ಅಥವಾ  ಸಾಫ್ 2 ಗ್ರಾಂ ಪ್ರತಿ ಲೀಟರ್‍ಗೆ ಅಥವಾ ಕಾರ್ಬನ್‍ಡೈಜಿಯಂ 2 ಗ್ರಾಂ ಪ್ರತಿ ಲೀಟರ್‍ಗೆ ಬೆರೆಸಿ ಸಂಪಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕರು (ವಿಷಯ ತಜ್ಞರು) ರೈತರಿಗೆ ಸಲಹೆ ನೀಡಿದ್ದಾರೆ.

Advertisement
Tags :
adviceAgriculture DepartmentAsco kaita diseasechickpea cropchitradurgacontrolsuddioneಆಸ್ಕೋ ಕೈಟಾ ಅಂಗಮಾರಿ ರೋಗಕಡಲೆ ಬೆಳೆಕೃಷಿ ಇಲಾಖೆಚಿತ್ರದುರ್ಗಸಲಹೆಸುದ್ದಿಒನ್ಹತೋಟಿ
Advertisement
Next Article