Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶ್ರೀಕಾಂತ್ ಪೂಜಾರಿ ಬಂಧನ : ಬಿಜೆಪಿ ಪ್ರತಿಭಟನೆ.. ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ಏನು..?

01:15 PM Jan 03, 2024 IST | suddionenews
Advertisement

 

Advertisement

ಬೆಂಗಳೂರು: ರಾಮ ಮಂದಿರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಇಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಪ್ರತಿಭಟನೆ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್, ಪ್ರತಿಕ್ರಿಯೆ ನೀಡಿದ್ದಾರೆ. ಮಾಡಲಿ. ಅವರೆಲ್ಲಾ ಹೋಂ ಮಿನಿಸ್ಟರ್ ಗಳಾಗಿದ್ದಾಗ ಏನು ಮಾಡಿದ್ರು. ಕೇಸರಿ ಬಟ್ಟೆಗಳನ್ನ ಹಾಕಿಕೊಂಡು ಆಫೀಸರ್ಸ್ ಗಳಿಗೆಲ್ಲಾ ನಿಲ್ಲಿಸಿದ್ದರು. ಆ ಕೆಲಸ ನಾವೇನು ಮಾಡುವುದಕ್ಕೆ ಹೋಗಿಲ್ಲ ಎಂದಿದ್ದಾರೆ.

ಹೋಂ ಮಿನಿಸ್ಟರ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾವೂ ಯಾರಿಗೂ ತೊಂದರೆ ಕೊಡುವಂತ ಸಂಧರ್ಭ ಇಲ್ಲ. ಪೆಂಡಿಂಗ್ ಇದ್ದಂತ ಪ್ರಕರಣಗಳನ್ನ, ಯಾರ್ಯಾರು ದೇಶಕ್ಕೆ, ರಾಜ್ಯಕ್ಕೆ ಅಗೌರವ ಕೊಡುತ್ತಾ ಇದ್ದಾರೆ, ಅಶಾಂತಿ ಉಂಟು ಮಾಡುವವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತಾ ಇದ್ದಾರೆ. ಎಲಕ್ಷನ್ ಹತ್ತಿರ ಬಂದಿದೆ. ಏಳು ತಿಂಗಳು ಅವರಿಗೆ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದಕ್ಕೆ ಆಗಿರಲಿಲ್ಲ. ಈಗ ಪಾಪ, ನಾವೂ ಬದುಕಿದ್ದೀವಿ ಅಂತ ತೋರಿಸಿಕೊಳ್ಳುವುದಕ್ಕೆ ಏನೋ ಮಾಡುವುದಕ್ಕೆ ಹೊರಟಿದ್ದಾರೆ. ಪಾಪ ತೋರಿಸಿಕೊಳ್ಳಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆಲ್ಲ ಜನರು ಉತ್ತರ ಕೊಡುತ್ತಾರೆ, ನಾವೂ ಉತ್ತರ ಕೊಡುತ್ತೀವಿ.

Advertisement

ನಾವೂ ಯಾರು ಕೂಡ ಅವರ ತರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಹುಬ್ಬಳ್ಳಿಯಲ್ಲಿ ಎಷ್ಟು ಕೇಸ್ ಹಾಕಿದ್ದಾರೆ..?ಅಮಾಯಕರ ಮೇಲೆಲ್ಲ ಕೇಸ್ ಹಾಕಿದ್ದಾರೆ. ಆ ರೀತಿ ನಾವೂ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Advertisement
Tags :
arrestedbengaluruBjpCongressDcm dk shivakumarSrikanth poojarisuddioneಡಿಸಿಎಂ ಡಿಕೆಶಿಪ್ರತಿಭಟನೆಬಂಧನಬಿಜೆಪಿಬೆಂಗಳೂರುಶ್ರೀಕಾಂತ್ ಪೂಜಾರಿ‌ಸುದ್ದಿಒನ್
Advertisement
Next Article