Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ರೇವಣ್ಣ ಅವರನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ : ಚಿತ್ರದುರ್ಗದಲ್ಲಿ ಕರುನಾಡ ವಿಜಯಸೇನೆ ಒತ್ತಾಯ

06:08 PM Apr 29, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 29 : ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದಲ್ಲಿ ಭಾಗಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ರೇವಣ್ಣ ಇವರುಗಳನ್ನು ಕೂಡಲೆ ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರುನಾಡ ವಿಜಯಸೇನೆಯಿಂದ ಜಾತ್ಯಾತೀತ ಜನತಾದಳದ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಧಿಕ್ಕಾರಗಳನ್ನು ಕೂಗಲಾಯಿತು.

Advertisement

 

ಮನವಿ ಸ್ವೀಕರಿಸಲು ಬಾರದ ಜೆಡಿಎಸ್.ಮುಖಂಡರುಗಳ ವಿರುದ್ದವೂ ಧಿಕ್ಕಾರಗಳನ್ನು ಕೂಗಿದ ಪ್ರತಿಭಟನಾಕಾರರು ಮನವಿ ಪತ್ರವನ್ನು ಜೆಡಿಎಸ್ ಕಚೇರಿಯ ಗೋಡೆಗೆ ಅಂಟಿಸಿದರು.

Advertisement

ಎರಡು ಸಾವಿರಕ್ಕೂ ಹೆಚ್ಚು ಲೈಂಗಿಕ ಪ್ರಕರಣದಲ್ಲಿ ತೊಡಗಿರುವ ಪ್ರಜ್ವಲ್ ರೇವಣ್ಣ ಜರ್ಮನ್‍ಗೆ ಫಲಾಯನಗೊಂಡಿದ್ದು. ಕೂಡಲೆ ಅಲ್ಲಿಂದ ಬಂಧಿಸಿ ಕರೆತರಬೇಕು. ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇವರುಗಳು ಲೈಂಗಿಕ ಹಗರಣಕ್ಕೆ ಯಾವುದೇ ರಾಜಕೀಯ ಬಣ್ಣ ಬೆರೆಸದೆ ಕೂಡಲೆ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಇವರುಗಳನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಯನ್ನು ಎಸ್.ಐ.ಟಿ.ಗೆ ವಹಿಸಿದೆ. ಏನು ತಪ್ಪು ಮಾಡಿಲ್ಲವೆಂದ ಮೇಲೆ ಪ್ರಜ್ವಲ್‍ರೇವಣ್ಣ ಏಕೆ ಜರ್ಮನಿಗೆ ಪಲಾಯನಗೊಂಡು ತಲೆ ಮೆರೆಸಿಕೊಳ್ಳಬೇಕು ಎಂದು ಪ್ರಶ್ನಿಸಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಹಗರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಕಾಮುಕರಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಗೋಪಿನಾಥ್, ಕಾರ್ಯದರ್ಶಿ ಅಣ್ಣಪ್ಪ, ಉಪಾಧ್ಯಕ್ಷೆ ರತ್ನಮ್ಮ, ಸಂಚಾಲಕ ಹರೀಶ್‍ಕುಮಾರ್, ನಗರಾಧ್ಯಕ್ಷ ಅವಿನಾಶ್, ಯುವ ಘಟಕದ ಅಧ್ಯಕ್ಷ ನಾಗರಾಜ್‍ಮುತ್ತು, ರಾಜಣ್ಣ, ಕಮಲಮ್ಮ, ಸುರೇಶ್, ನಿಸಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Tags :
arrestbengaluruchitradurgaKarunada Vijaya SenaMLA RevannaMP Prajwal Revannasuddionesuddione newsTake legal actionಕರುನಾಡ ವಿಜಯಸೇನೆಕಾನೂನು ಕ್ರಮ ಕೈಗೊಳ್ಳಿಚಿತ್ರದುರ್ಗಬಂಧಿಸಿಬೆಂಗಳೂರುಶಾಸಕ ರೇವಣ್ಣಸಂಸದ ಪ್ರಜ್ವಲ್ ರೇವಣ್ಣಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article