ಚಿತ್ರದುರ್ಗದಲ್ಲಿ ಮಾಜಿ ಸಚಿವ ಹಾಗೂ ಮಾದಿಗ ಸಮುದಾಯದ ಮುಖಂಡರ ನಡುವೆ ವಾಗ್ವಾದ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.18 :
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ವೇಳೆ ಮಾದಿಗ ಸಮಾಜದ ಮುಖಂಡರು ಮಾಜಿ ಸಚಿವ ಗೋವಿಂದ ಕಾರಜೋಳ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಸರ್ಕಾರದ ವೈಫಲ್ಯದ ಕುರಿತು ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಒಳ ನುಗ್ಗಿದ ಭ್ರಷ್ಠಾಚಾರ ನಿರ್ಮೂಲನ ಸಮಿತಿ ಹಾಗೂ ಮಾದಿಗ ಹೋರಾಟ ಸಮಿತಿ ಮುಖಂಡರು ಗೋವಿಂದ ಕಾರಜೋಳ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ದಲಿತರಿಗೆ ಬಿಜೆಪಿ ಹಾಗೂ ಮಾಜಿ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರಿಂದ ಅನ್ಯಾಯವಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಪತ್ರಿಕಾ ಗೋಷ್ಠಿ ಮಧ್ಯೆಯೇ ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತು ಮುಖಂಡರ ನಡುವೆ ವಾಗ್ವಾದ ಸಹ ನಡೆದಿದ್ದು ಮೊದಲು ಹೊರಗೆ ಹೋಗುವಂತೆ ಗೋವಿಂದ ಕಾರಜೋಳ ಬೈದು ರೇಗಾಡಿದ್ದು ನಿಮಗೆ ಅನ್ಯಾಯವಾಗಿದ್ದರೆ ಆಮೇಲೆ ಬಂದು ಕೇಳಿ ಎಂದು ಹೇಳಿದ ಬೈದು ಕಳುಹಿಸಿದ್ದಾರೆ.
ಅಷ್ಟೇ ಅಲ್ಲದೆ ಗೂಂಡಾಗಿರಿ ಮಾಡುತ್ತಿದ್ದೀರಾ ಎಂದು ಕೂಗಾಡಿದ ಗೋವಿಂದ ಕಾರಜೋಳ ಅವರು ಇಂದೊಂದು ಗೂಂಡಾ ರಾಜ್ಯವಾಗಿದ್ದು ಸಿದ್ದರಾಮಯ್ಯ ಅವರು ಕೂಡಲೇ ಗಲಾಟೆ ಮಾಡಿದವರನ್ನು ಸಂಜೆಯೊಳಗೆ ಬಂಧಿಸಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದು ಈ ಬಗ್ಗೆ ಡಿಜಿಪಿಗೂ ಸಹ ಸ್ಥಳದಲ್ಲೆ ಕರೆ ಮಾಡಿದ ಗೋವಿಂದ ಕಾರಜೋಳ ಅವರು ನಿಮ್ಮ ಎಸ್ಪಿ ಅವರು ಕರೆ ಸ್ಬೀಕರಿಸುತ್ತಿಲ್ಲ ಪತ್ರಿಕಾಗೋಷ್ಠಿ ವೇಳೆ ಗೂಂಡಾಗಳು ದಾಂದಲೆ ಮಾಡಿದ್ದಾರೆ ಹಾಗಾಗಿ ಈ ಕೂಡಲೇ ದಾಂದಲೆ ಮಾಡಿದವರನ್ನ ಬಂದಿಸಬೇಕು ಇಲ್ಲದಿದ್ದಲ್ಲಿ ಡಿಸಿ ಕಚೇರಿ ಬಳಿ ನಾನು ಧರಣಿ ಕೂರುತ್ತೇನೆ ಎಂದು ಡಿಜಿಪಿಗೆ ಗೋವಿಂದ ಕಾರಜೋಳ ಹೇಳಿದರು.