For the best experience, open
https://m.suddione.com
on your mobile browser.
Advertisement

40 ದಾಟಿದ ಪುರುಷರಲ್ಲಿ ವಿಟಮಿನ್ ಬಿ12 ಕೊರತೆಯಿಂದ ಈ ಲಕ್ಷಣಗಳು ಕಾಣಿಸುತ್ತಿವೆಯಾ..? ಹಾಗಾದ್ರೆ ಎಚ್ಚರ..!

06:20 AM Feb 07, 2024 IST | suddionenews
40 ದಾಟಿದ ಪುರುಷರಲ್ಲಿ ವಿಟಮಿನ್ ಬಿ12 ಕೊರತೆಯಿಂದ ಈ ಲಕ್ಷಣಗಳು ಕಾಣಿಸುತ್ತಿವೆಯಾ    ಹಾಗಾದ್ರೆ ಎಚ್ಚರ
Advertisement

Advertisement
Advertisement

ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ವಯೋಸಹಜ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾದಂತೆ ದೇಹದಲ್ಲಿ ಹಲವು ರೋಗಲಕ್ಷಣಗಳು ಗಮನಕ್ಕೆ ಬರುತ್ತವೆ. ಅದರಲ್ಲೂ 40 ದಾಟಿದ ಗಂಡಸರಲ್ಲಿ ವಿಟಿಮಿನ್ ಗಳ ಕೊರತೆ ಎದುರಾಗಬಹುದು. ಆದ್ದರಿಂದ ಏನೆಲ್ಲಾ ಸಮಸ್ಯೆಗಳು ಕಾಡುತ್ತವೆ ಎಂಬುದನ್ನು ನೋಡೋಣಾ.

Advertisement

* ಪುರುಷರಲ್ಲಿ 40 ವಯಸ್ಸು ದಾಟಿದ ಮೇಲೆ ಸಾಮಾನ್ಯವಾಗಿ ಬಿ12 ವಿಟಮಿನ್ ಗಳ ಕೊರತೆ ಕಾಣಿಸಬಹುದು. ಇದನ್ನು ರಿಕವರಿ‌ ಮಾಡಿಕೊಳ್ಳಲು ಮೊಟ್ಟೆ, ಮಾಂಸ, ಮೀನು ಹಾಗೂ ಹಾಲಿನ ಉತ್ಪನ್ನಗಳನ್ನು ತಿನ್ನುವುದು ಮುಖ್ಯವಾಗುತ್ತದೆ.

Advertisement

* ದೇಹದಲ್ಲಿ ವಿಟಮಿನ್ B12 ಕಡಿಮೆಯಾಗಿದ್ದರೆ ಕಾಲು, ಕೈ ಜೋಮು ಹಿಡಿಯುತ್ತದೆ. ಇದರಿಂದ ನರಗಳಿಗೆ ಹಾನಿಯಾಗುತ್ತದೆ.

* ಮಧ್ಯ ವಯಸ್ಕ ಪುರುಷರಲ್ಲಿ ನಿಶ್ಯಕ್ತಿ ಮತ್ತು ಬಳಲಿಕೆ ಕಂಡುಬಂದರೆ ಆಗ ಇದು ವಿಟಮಿನ್ ಬಿ12 ಕೊರೆಯಿಂದ ಎಂದು ಹೇಳಬಹುದು. ವಿಟಮಿನ್ ಬಿ12 ಶಕ್ತಿ ಉತ್ಪಾದಿಸುತ್ತದೆ. ಇದರ ಕೊರತೆಯಿಂದ ಕೈ ಮತ್ತು ಇತರ ಅಂಗಾಂಗಗಳಲ್ಲಿ ನಿಶ್ಯಕ್ತಿ ಕಾಣಿಸಬಹುದು.

* ದೇಹದಲ್ಲಿ ವಿಟಮಿನ್ ಬಿ12 ಕೊರತೆಯಾದರೆ ಆಗ ಇದರಿಂದ ಕೈಗಳಲ್ಲಿ ಊತ ಕಂಡುಬರಬಹುದು. ಕೈಗಳು ಕೆಂಪಾಗಿ ಊದಿಕೊಂಡು ನೋವು ಉಂಟು ಮಾಡಬಹುದು.

* ದೇಹದ ಸಮತೋಲನಕ್ಕೆ ತೊಂದರೆಯಾಗಿ ನಡೆಯಲು ಕಷ್ಟವಾಗಬಹುದು. ಕೈಗಳು ಸರಿಯಾಗಿ ಚಲಿಸದೆ ಇರುವುದು ಕೂಡ ವಿಟಮಿನ್ ಬಿ12 ಕೊರತೆಯ ಲಕ್ಷಣಗಳು. ಹೀಗಾಗಿ 40 ದಾಟಿದ ಪುರುಷರು ಆದಷ್ಟು ವಿಟಮಿನ್ B12 ಇರುವಂತ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯವಾಗುತ್ತದೆ. ದಿನ ನಿತ್ಯದ ಆಹಾರ ಪದಾರ್ಥಗಳಲ್ಲೂ ಆ ರೀತಿಯಾದಂತ ಆಹಾರವನ್ನೇ ಸೇವಿಸುವ ಮೂಲಕ ವಿಟಮಿನ್ ಗಳನ್ನು ಪಡೆಯಿರಿ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Advertisement
Tags :
Advertisement