Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

02:42 PM Jun 17, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಜೂನ್ 17 :  ಶ್ರೀ ಎಚ್.ಆಂಜನೇಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾದಿಗ ಸಮುದಾಯದ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಾದಿಗ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಚಿತ್ರದುರ್ಗ ಜಿಲ್ಲೆಯ ನಿವಾಸಿ ಆಗಿರಬೇಕು, ಚಿತ್ರದುರ್ಗ ಜಿಲ್ಲೆಯ ಶಾಲಾ-ಕಾಲೇಜ್ ಗಳಲ್ಲಿ ಓದಿರಬೇಕು.
ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಆಕರ್ಷಕ ಫಲಕ, ಶಾಲು, ಹಾರ, ಸನ್ಮಾನ ಪತ್ರದ ಜೊತೆಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುವುದು.
ಸಮಾರಂಭದ ದಿನಾಂಕ ಹಾಗೂ ಸ್ಥಳವನ್ನು ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ತಿಳಿಸಲಾಗುವುದು.

Advertisement

ಸ್ವವಿವರದ ಜೊತೆ ಪಾಸ್ ಫೋಟೋ, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬೇಕು.
ಆಸ್ಕರ್ ಫರ್ನಾಂಡೀಸ್ ಸ್ಕೂಲ್, ಐಯುಡಿಪಿ ಲೇಔಟ್, ಚಿತ್ರದುರ್ಗ-577501 ಅಥವಾ hanjaneyacharitabletrust@gmail.com ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಅಥವಾ ವಾಟ್ಸ್ ಆಪ್ ನಂ: 9743048006 ಅಥವಾ 8073050019 ಸಂಪರ್ಕಿಸಬಹುದು ಎಂದು ಕಾರ್ಯಕ್ರಮ ಸಂಘಟಕರಾದ ಸಿ.ಎನ್.ಕುಮಾರ್, ಎ.ನಂದೀಶ್ ತಿಳಿಸಿದ್ದಾರೆ.

Advertisement
Tags :
Application InvitationbengaluruchitradurgaMadiga CommunityPratibha Puraskarastudentssuddionesuddione newsಅರ್ಜಿ ಅಹ್ವಾನಚಿತ್ರದುರ್ಗಪ್ರತಿಭಾ ಪುರಸ್ಕಾರಬೆಂಗಳೂರುಮಾದಿಗ ಸಮುದಾಯವಿದ್ಯಾರ್ಥಿಗಳುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article