For the best experience, open
https://m.suddione.com
on your mobile browser.
Advertisement

ನಾಲ್ಕು ವರ್ಷದ ಮಗನನ್ನು ಕೊಂದ ಬೆಂಗಳೂರು ಸ್ಟಾರ್ಟಪ್ ಸಿಇಒ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

05:47 PM Jan 12, 2024 IST | suddionenews
ನಾಲ್ಕು ವರ್ಷದ ಮಗನನ್ನು ಕೊಂದ ಬೆಂಗಳೂರು ಸ್ಟಾರ್ಟಪ್ ಸಿಇಒ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್
Advertisement

ಸುದ್ದಿಒನ್,ಬೆಂಗಳೂರು : ಸ್ಟಾರ್ಟಪ್ ಕಂಪನಿಯ ಸಿಇಒ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಪ್ರಕರಣದಲ್ಲಿ ಮತ್ತಷ್ಟು ವಿಷಯಗಳು ಬೆಳಕಿಗೆ ಬರುತ್ತಿವೆ. ಮೃತ ದೇಹವನ್ನು ಬಚ್ಚಿಟ್ಟಿದ್ದ ಸೂಟ್‌ಕೇಸ್‌ನಲ್ಲಿ ಸುಚನಾ ಸೇಠ್ ಬರೆದಿದ್ದ ಪತ್ರವನ್ನು ಗೋವಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೇಪರ್ ಬದಲು ಟಿಶ್ಯೂ ಪೇಪರ್ ನಲ್ಲಿ ಬರೆದಿದ್ದ ಸುಜನಾ ಸೇಠ್, ಪೆನ್ ಬದಲಿಗೆ ಐಲೈನರ್ ಬಳಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪತ್ರವನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ತಂಡಕ್ಕೆ ಕಳುಹಿಸಲಾಗಿದೆ. ಐಲೈನರ್‌ನಿಂದ ಬರೆದ ಆರು ಸಾಲಿನ ಪತ್ರವನ್ನು ವಿಧಿವಿಜ್ಞಾನ ತಂಡದ ಕೈಬರಹ ತಜ್ಞರು ಪರಿಶೀಲಿಸುತ್ತಿದ್ದಾರೆ.

Advertisement
Advertisement

ಆದರೆ, 'ಕೋರ್ಟ್, ನನ್ನ ಮಾಜಿ ಪತಿ ನನ್ನ ಮಗನನ್ನು ಕಸ್ಟಡಿಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.. ಇನ್ನು ಮುಂದೆ ನಾನು ಅದನ್ನು ಸಹಿಸಲಾರೆ.. ಮಾಜಿ ಪತಿ ತುಂಬಾ ಕ್ರೂರಿ,... ಅವನು (ನನ್ನ) ಮಗನಿಗೆ ಕೆಟ್ಟ ಅಭ್ಯಾಸಗಳನ್ನು ಕಲಿಸುತ್ತಾನೆ. ಅವನು ನನ್ನ ಮಗುವನ್ನು ನೋಡುವುದು ನನಗೆ ಇಷ್ಟವಿಲ್ಲ' ಎಂದು ಅದರಲ್ಲಿ ಬರೆದಿರುವಂತಿದೆ. ಆದರೆ, ಆಕೆ ತನ್ನ ಮಗನನ್ನು ಕೊಲ್ಲುವ ಮುನ್ನ ಲಾಲಿ ಹಾಡುವ ಮೂಲಕ ಮಗನನ್ನು ಮಲಗಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮನಸ್ಥಿತಿಯನ್ನು ಈ ಪತ್ರದ ಸಾಲುಗಳು ನಿರ್ಣಾಯಕ ಸಾಕ್ಷ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮಗನನ್ನು ಪತಿ ಭೇಟಿಯಾಗುವುದು ಆಕೆಗೆ ಇಷ್ಟವಿರಲಿಲ್ಲ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಇದೇ ಕಾರಣದಿಂದ ಆಕೆ ಈ ಹಂತಕ್ಕೆ ಹೋಗಲು ಕಾರಣವಾಗಿತ್ತು. 'ಕೊಲೆಗೂ ಮುನ್ನ ಆಕೆ ತನ್ನ ವೈದ್ಯರಾದ ಪೇರೆಂಟಲ್ ಥೆರಪಿಸ್ಟ್ ಜೊತೆ ಸಂಪರ್ಕದಲ್ಲಿದ್ದಳು. ಬಾಲಕನ ಸಾವಿನ ನಂತರ ಆಕೆ ಯಾರಿಗೆ ಕರೆ ಮಾಡಿದ್ದಾಳೆ ಎಂದು ತಿಳಿಯಲು ನಾವು ಕರೆ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ,'' ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement
Advertisement

ಸುಚನಾ ಸೇಠ್-ವೆಂಕಟ್ ರಾಮನ್ ದಂಪತಿಯ ಭಿನ್ನಾಭಿಪ್ರಾಯದಿಂದ ವಿಚ್ಛೇದನ ಪಡೆದಿದ್ದರು. ಕೋರ್ಟ್ ಕೂಡ ದಂಪತಿಗೆ ವಿಚ್ಛೇದನ ನೀಡಿದೆ. ಆದರೆ ವಾರಕ್ಕೊಮ್ಮೆ ಮಗನನ್ನು ಭೇಟಿಯಾಗಲು ತಂದೆಗೆ ನ್ಯಾಯಾಲಯ ಅನುಮತಿ ನೀಡಿದೆ. ಸುಚನಾಗೆ ಇದು ಅಷ್ಟಾಗಿ ಇಷ್ಟವಾಗಲಿಲ್ಲ. ಭಾನುವಾರ ತನ್ನ ಮಗನನ್ನು ತಂದೆಯ ಬಳಿಗೆ ಕಳುಹಿಸಲು ಆಕೆಗೆ ಸುತರಾಂ ಇಷ್ಟವಿರಲಿಲ್ಲ. ಅದಕ್ಕಾಗಿಯೇ ಆಕೆ ತನ್ನ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Tags :
Advertisement