Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ | ಚಾಲಕ ಸಾವು...!

11:23 AM Feb 23, 2024 IST | suddionenews
Advertisement

 

Advertisement

ವರದಿ ಕೃಪೆ : ಸುರೇಶ್ ಬೆಳಗೆರೆ,
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 23 : ತಾಲೂಕಿನ ಸಾಣಿಕೆರೆ ಹಾಗೂ ಹೆಗ್ಗೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 150 ಎ  ರಲ್ಲಿ ಗ್ರಾನೈಟ್ಸ್ ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಹಿಂಬದಿಯಿಂದ ಈಚರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಅಶೋಕ್  ಸಾವನಪ್ಪಿದ್ದಾನೆ.

Advertisement

ಚಳ್ಳಕೆರೆ ನಗರದಿಂದ ಬೆಂಗಳೂರು ಕಡೆಗೆ ತೆರಳುತ್ತಿದ ಲಾರಿಗೆ ಹಿಂಬದಿಯಿಂದ ಬಂದ ಈಚರ್ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಈಚರ್ ಲಾರಿ ಚಾಲಕ  ಕಾಲು ಮುರಿದು ಗಂಭೀರ ಗಾಯಗೊಂಡಿರುತ್ತಾನೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕರಿಯಾಗದೆ ಸಾವನಪ್ಪಿದ್ದಾನೆ.

ಈ ಘಟನೆಯಲ್ಲಿ ಈಚರ್ ಲಾರಿ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಚಳ್ಳಕೆರೆ  ಪೋಲೀಸ್ ಇನ್ಸ್ ಪೆಕ್ಟರ್ ಕೆ .ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Tags :
bengaluruchallakerechitradurgacollideddiesdriverLorrysuddionesuddione newsಚಳ್ಳಕೆರೆಚಾಲಕಚಿತ್ರದುರ್ಗಬೆಂಗಳೂರುಲಾರಿಲಾರಿ ಡಿಕ್ಕಿಸಾವುಸುದ್ದಿಒನ್ಸುದ್ದಿಒನ್ ನ್ಯೂಸ್ಹಿಂಬದಿ
Advertisement
Next Article