For the best experience, open
https://m.suddione.com
on your mobile browser.
Advertisement

ಮೇ 26 ರಂದು ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಸಮಾರಂಭ

04:26 PM May 13, 2024 IST | suddionenews
ಮೇ 26 ರಂದು ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ  ಪ್ರತಿಭಾ ಪುರಸ್ಕಾರ ಸಮಾರಂಭ
Advertisement

ಚಿತ್ರದುರ್ಗ ಮೇ. 13 : ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘ (ರಿ.) ಇವರ ವತಿಯಿಂದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ 2023-24 ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ (ಶೇ. 85ಕ್ಕೂ ಹೆಚ್ಚು ಅಂಕಗಳಿಸಿ) ಉತ್ತೀರ್ಣರಾದ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಮಕ್ಕಳಿಗೆ ಮಾತ್ರ ಈ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ  ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ಶಿವರಾಂ ತಿಳಿಸಿದ್ದಾರೆ.

Advertisement
Advertisement

ಅರ್ಹ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್, ಪಾಸ್ ಪೋರ್ಟ್ ಆಳತೆಯ ಪೋಟೋ, ದೂರವಾಣಿ ಸಂಖ್ಯೆ ಹಾಗೂ ಅಂಕಪಟ್ಟಿಯನ್ನು 15-05-2024 ಸಂಪರ್ಕಿಸಿ, ವಿವರಗಳನ್ನು ತಲುಪಿಸಬೇಕಾಗಿ ಕೋರಿದೆ. ಯಾವುದೇ ವಿಷಯದಲ್ಲಿ ಶೇಕಡ 100 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು.

Advertisement

ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರಾದ ಜೆ. ಪರಶುರಾಮ ಇವರ ಉಪಸ್ಥಿತಿಯಲ್ಲಿ ಹಾಗೂ ಸಂಘದ ಅಧ್ಯಕ್ಷರಾದ ಜಿ.ಆರ್. ಪ್ರತಾಪರೆಡ್ಡಿ ಇವರ ಅಧ್ಯಕ್ಷತೆಯಲ್ಲಿ 26-05-2024 ವಿದ್ಯಾನಗರದ ವೀರಸಾವರ್ಕರ್ ಪಾರ್ಕ್‍ನ ಶ್ರೀ ವಿದ್ಯಾಗಣಪತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಸಕಾಲಕ್ಕೆ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿಸಿದ್ದಾರೆ.

Advertisement
Advertisement

ಹೆಚ್ಚಿನ ಮಾಹಿತಿಗಾಗಿ ಟಿ.ಪಿ ಜ್ಞಾನಮೂರ್ತಿ : 9449974004 ಟಿ.ವಿರೇಶ್ 9845264652 ಡಾ.ಹರಿಣಿ 9449202240 ಡಾ.ಗೌರಮ್ಮ 9481721444 ಇವರನ್ನು ಸಂಪರ್ಕಿಸಬಹುದಾಗಿದೆ.

Advertisement
Tags :
Advertisement