Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಕ್ಕಳ ಸಂತೆ ನಮ್ಮ ಜೊತೆ : ಎಸ್‍ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿ ಮಕ್ಕಳಿಗೆ ವ್ಯವಹಾರಿಕ ಜೀವನ ನಿರ್ವಹಣೆಯ ಮಹತ್ವ ತಿಳಿಸುವ ವಿನೂತನ ಕಾರ್ಯಕ್ರಮ

12:53 PM Jan 18, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.18 : ಮಕ್ಕಳಲ್ಲಿ ವ್ಯಾಪಾರ ಮನೋಭಾವನೆ ಮತ್ತು ವ್ಯವಹಾರಿಕ ಜೀವನ ನಿರ್ವಹಣೆಯ ಮಹತ್ವ ತಿಳಿಸುವ ಉದ್ದೇಶದಿಂದ ಮಕ್ಕಳ ಸಂತೆ ನಮ್ಮ ಜೊತೆ ಎಂಬ ಕಾರ್ಯಕ್ರಮ ಆಯೋಜಿಸಿದ್ದೇವೆ. ವ್ಯವಹಾರಿಕ ಗಣಿತ ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ. ವ್ಯವಹಾರ ಗಣಿತವನ್ನು ವಿದಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ ಈ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಪ್ರಭಾಕರ್ ಎಂ ಎಸ್ ಹೇಳಿದರು.

ನಗರದ ಹೊರವಲಯದ ಎಸ್‍ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿ 1ನೇ ತರಗತಿಯ 150 ವಿದ್ಯಾರ್ಥಿಗಳು ಈ ದಿನ ಶಾಲೆಯ ಆವರಣದಲ್ಲಿ ಹಣ್ಣಿನ ಅಂಗಡಿ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಣ್ಣುಗಳನ್ನು ಖರೀದಿ ಮಾಡುವ ಮೂಲಕ ಮುಖ್ಯಾತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಸುಜಾತಲಿಂಗಾರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Advertisement

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾರುಕಟ್ಟೆಯಿಂದ ಬಗೆಬಗೆಯ ಹಣ್ಣುಗಳಾದ ಬಾಳೆಹಣ್ಣು, ಸೇಬು, ಸಿತಾಫಲ,ಕಿತ್ತಳೆ, ಪಪ್ಪಾಯ, ದ್ರಾಕ್ಷಿ, ಸ್ಟ್ರಾಬೆರ್ರಿ, ಕಲ್ಲಂಗಡಿ, ಮೋಸಂಬಿ, ಅನಾನಸ್ ಇನ್ನಿತರೆ ಬಗೆಬಗೆಯ ಮತ್ತು ತಾಜಾ ಹಣ್ಣು ಮಾರಾಟ ಮಾಡುವುದರೊಂದಿಗೆ ದೈನಂದಿನ ಬದುಕಿನ ಪ್ರಾಯೋಗಿಕ ಕಲಿಕೆಯನ್ನು ಬೆಳಸಿಕೊಳ್ಳಲು ಹಾಗೂ ಮಕ್ಕಳಲ್ಲಿ ಲಾಭ-ನಷ್ಟದ ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿಯುವ ಆಶಯದೊಂದಿಗೆ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯು 1 ನೇ ತರಗತಿಯ ಮಕ್ಕಳಿಗೆ ಹಣ್ಣಿನ ಅಂಗಡಿ ಸಂತೆಯನ್ನು ಆಯೋಜಿಸಿದೆ. “ಮಕ್ಕಳ ಸಂತೆ ನಮ್ಮ ಜೊತೆ” ಎಂದು ಮಕ್ಕಳು ಗ್ರಾಹಕರನ್ನು ತನ್ನತ್ತ ಸೆಳೆದು ಪ್ರೀತಿ ಪೂರ್ವಕವಾಗಿ ವ್ಯವಹರಿಸಿದರು.

ಈ ಮೇಳದಲ್ಲಿ ಪೋಷಕರು, ಶಿಕ್ಷಕರು, ಸಾರ್ವಜನಿಕರು, ಗ್ರಾಹಕರು ಉತ್ಸಾಹದಿಂದ ತಮಗಿಷ್ಟವಾದ ಹಣ್ಣುಗಳನ್ನು ವಿದ್ಯಾರ್ಥಿಗಳು ನಿಗದಿಪಡಿಸಿದ ದರಕ್ಕೆ ತರಕಾರಿಗಳನ್ನು ಖರೀದಿಸಿದರು.

ವ್ಯವಹಾರಿಕ ಗಣಿತ ತಮ್ಮೇಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ. ವ್ಯವಹಾರ ಗಣಿತವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಚಿಸಿದೆ. ಕಾರ್ಯಕ್ರಮದಲ್ಲಿ ಎಸ್ ಆರ್ ಎಸ್ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ|| ರವಿ ಟಿ ಎಸ್ ಹಾಗೂ ಎಲ್ಲಾ ವಿಭಾಗದ ಶೈಕ್ಷಣಿಕ ಸಂಯೋಜಕರು ಮತ್ತು ಶಿಕ್ಷಕವೃಂದದವರು ಪಾಲ್ಗೊಂಡಿದ್ದರು.

Advertisement
Tags :
businesschildrenchitradurgaimportanceinnovative programlife managementSRS Heritage SCHOOLsuddioneಎಸ್‍ ಆರ್ ಎಸ್ ಹೆರಿಟೇಜ್ ಶಾಲೆಚಿತ್ರದುರ್ಗಜೀವನನಿರ್ವಹಣೆಮಕ್ಕಳ ಸಂತೆ ನಮ್ಮ ಜೊತೆಮಹತ್ವವಿನೂತನ ಕಾರ್ಯಕ್ರಮವ್ಯವಹಾರಿಕಸುದ್ದಿಒನ್
Advertisement
Next Article