For the best experience, open
https://m.suddione.com
on your mobile browser.
Advertisement

ಪೊಲೀಸರ ಬೊಜ್ಜಿನ ಸಮಸ್ಯೆ ನಿವಾರಣಗೆ ವಿನೂತನ ಪ್ರಯತ್ನ : ರಾಜ್ಯದಲ್ಲೇ ಮೊದಲ ಪ್ರಯತ್ನ

01:23 PM Apr 02, 2024 IST | suddionenews
ಪೊಲೀಸರ ಬೊಜ್ಜಿನ ಸಮಸ್ಯೆ ನಿವಾರಣಗೆ ವಿನೂತನ ಪ್ರಯತ್ನ   ರಾಜ್ಯದಲ್ಲೇ ಮೊದಲ ಪ್ರಯತ್ನ
Advertisement

ಚಿತ್ರದುರ್ಗ. ಏಪ್ರಿಲ್.2: ಕೆಲಸದ ಒತ್ತಡ, ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು ಹಾಗೂ ವ್ಯಾಯಾಮದ ಕೊರತೆಯಿಂದ ಪೊಲೀಸರ ಆರೋಗ್ಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದರಿಂದ ಬಹಳ ಜನರಲ್ಲಿ ತೂಕ ಹೆಚ್ಚಾಗುವುದು, ಸಕ್ಕರೆ ಕಾಯಿಲೆ ಸೇರಿದಂತೆ ಜೀವನ ಅಭ್ಯಾಸಕ್ಕೆ ಸಂಬಂದಿಸಿದ ಹಲವು ರೋಗಗಳು ಬರುತ್ತವೆ.

Advertisement
Advertisement

ಬಹಳಷ್ಟು ಜನ ಪೊಲೀಸರಲ್ಲಿ ಬೊಜ್ಜಿನ ಸಮಸ್ಯೆ ಕಂಡುಬರುತ್ತಿದೆ. ಪೊಲೀಸರಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ ನಿವಾರಣೆಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ವಿನೂತನ ಪ್ರಯತ್ನ ಕೈಗೊಳ್ಳಲಾಗಿದೆ. ಇಸ್ರೇಲ್ ಮೂಲದ ಹೈಗೇರ್ ಕಂಪನಿ ಸಹಯೋಗದಲ್ಲಿ ಪೊಲೀಸರ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ವ್ಯಾಯಮ ಪರಿಕರಗಳನ್ನು ನೀಡಲಾಗಿದೆ.

Advertisement

ಮಂಗಳವಾರ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಉಪಾಧೀಕ್ಷಕರ ಕಚೇರಿಯಲ್ಲಿ, ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ 60 ಜನ ಪೊಲೀಸ್ ಸಿಬ್ಬಂದಿಗೆ ಉಚಿತವಾಗಿ ಪರಿಕರಗಳನ್ನು ವಿತರಿಸಿದರು.

Advertisement
Advertisement

ರಾಜ್ಯದಲ್ಲೇ ಮೊದಲ ಪ್ರಯತ್ನ:

ಚಿತ್ರದುರ್ಗ ಜಿಲ್ಲಾ ಪೊಲೀಸ್ ಹಾಗೂ ಇಸ್ರೇಲ್ ಮೂಲದ ಹೈಗೇರ್ ಕಂಪನಿಯ ಸಹಯೋಗದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಪೊಲೀಸರಿಗೆ ವ್ಯಾಯಾಮದ ಪರಿಕರ ನೀಡಲಾಗುತ್ತಿದೆ. ಹೈಗೇರ್ ಒಂದು ಬಹುರಾಷ್ಟ್ರೀಯ ಕಂಪನಿಯಾಗಿದ್ದು, ದೈಹಿಕ ಸಧೃಡತೆ ಕಾಪಾಡಿಕೊಳ್ಳುವ ಪರಿಕರಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಇಸ್ರೇಲ್ ಪೊಲೀಸರಿಗೆ ಈ ಕಂಪನಿ ವ್ಯಾಯಾಮ ಪರಿಕರ ನೀಡಿ ಯಶಸ್ವಿಯಾಗಿದೆ. ನೆರೆಯ ತೆಲಂಗಾಣ ಪೊಲೀಸರೊಂದಿಗೂ ಹೈಗೇರ್ ಕಂಪನಿ ಪೊಲೀಸರ ಬೊಜ್ಜು ನಿವಾರಣೆಗೆ ಕೈ ಜೋಡಿಸಿದೆ.

ಆರೋಗ್ಯ ಕಾಳಜಿಗೆ ಸ್ಮಾರ್ಟ್ ತಂತ್ರಜ್ಞಾನ:

ಹೈಗೇರ್ ಕಂಪನಿಯ ಎಲಾಸ್ಟಿಕ್ ಬೆಲ್ಟ್ ದೈಹಿಕ ವ್ಯಾಯಾಮ ಮಾಡಲು ಅನುಕೂಲವಾಗಿದೆ. ಇದಕ್ಕೆ ಬ್ಲೂಟೂತ್ ಅಳವಡಿಸಲಾಗಿದ್ದು, ನಿಮ್ಮ ಸ್ಮಾರ್ಟ್ ಫೋನ್ ಸಂಪರ್ಕದಲ್ಲಿ ಇರುತ್ತದೆ. ಇದರೊಂದಿಗೆ ಕೈಗೆ ಧರಿಸಲು ಸ್ಮಾರ್ಟ್ ವಾಚ್ ಸಹಿತ ನೀಡಲಾಗಿದೆ. ಸ್ಮಾರ್ಟ್ ‌ ವಾಚ್ ದೈನಂದಿನ ನಡಿಗೆ, ಹೃದಯ ಬಡಿತ, ಕ್ಯಾಲೋರಿಗಳ ವ್ಯಯದ ಬಗ್ಗೆ ಮಾಹಿತಿ ಲೆಕ್ಕ ಇಡುತ್ತದೆ. ನಿಮ್ಮ ಸ್ಮಾರ್ಟ್ ಪೋನ್‌ನಲ್ಲಿ ಹೈಗೇರ್ ತಂತ್ರಾಶ ಅಳವಡಿಸಿಕೊಂಡರೆ ನಿಮ್ಮ ದೈನದಿಂನ ಚಟುವಟಿಕೆಗಳ ಸಕಲ ಮಾಹಿತಿ ಇದರಲ್ಲಿ ಶೇಖರಣೆಯಾಗಲಿದೆ. ಜಿಮ್ ಹಾಗೂ ದೈಹಿಕ ವ್ಯಾಯಾಮಗಳನ್ನು ಮಾಡಲು ಹೊರಗಡೆ ಹೊಗುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಅಥವಾ ಕೆಲಸದ ಸ್ಥಳಗಳಲ್ಲಿಯೇ ವ್ಯಾಯಾಮದ ಎಲಾಸ್ಟಿಕ್ ಬೆಲ್ಟ್ಅನ್ನು ಮರ, ಕಂಬ, ಕಿಟಕಿಗಳಿಗೆ ನೇತು ವ್ಯಾಯಾಮ ಮಾಡಬಹುದು. ಸುಮಾರು 410ಕ್ಕೂ ವಿವಿಧ ವ್ಯಾಯಾಮಗಳಿಗೆ ಎಲಾಸ್ಟಿಕ್ ಬೆಲ್ಟ್ ಅನುಕೂಲವಾಗಿದೆ.

120 ಜನ ಪೊಲೀಸರಿಗೆ ವಿತರಣೆ:‌

ಜಿಲ್ಲೆಯ ಪೊಲೀಸರ ವೈದ್ಯಕೀಯ ತಪಾಸಣೆ ಒಳಪಡಿಸಿದ ನಂತರ 134 ಪೊಲೀಸರ ದೈಹಿಕ ತೂಕ ಸೂಚ್ಯಂಕ ಪ್ರಮಾಣ 29ಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ. ಇವರಲ್ಲಾ ಬೊಜ್ಜಿನ ಸಮಸ್ಯೆಗೆ ಒಳಗಾಗಿದಾರೆ. ಇದರಿಂದಾಗಿ ನಾನಾ ಕಾಯಿಲೆಗಳಿಗೆ ತುತ್ತಾಗುವ ಸಂಭವವಿದೆ. ಬೊಜ್ಜು ಇರುವ ಪೊಲೀಸ್ ಸಿಬ್ಬಂದಿಗೆ ಈಗಾಗಲೇ ಹೃದಯ ತ್ಞಜರು, ಫಿಜಿಯೋ ತೆರಪಿಸ್ಟ್ ಸೇರಿದಂತೆ ಅಗತ್ಯ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಅವರ ಆಹಾರ ಕ್ರಮ, ದೈಹಿಕ ಸಾಮರ್ಥ್ಯ ಅರಿತು, ವ್ಯಾಯಾಮದ ಗುರಿ ನಿಗದಿ ಮಾಡಲಾಗಿದೆ. ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ಪರಿಕರಗಳನ್ನು 120 ಪೊಲೀಸರಿಗೆ ಉಚಿತವಾಗಿ ನೀಡಲಾಗುತ್ತಿದೆ.ಇವರಿಗೆ ವ್ಯಾಯಮ ಪರಿಕರಗಳನ್ನು ಉಪಯೋಗಿಸುವ ಕುರಿತು ಮಾಹಿತಿ ನೀಡಲಾಗುವುದು. ತಂತ್ರಾಶದಲ್ಲಿ ವ್ಯಾಯಾಮ ಮಾಡುವ ಕ್ರಮಗಳ ವಿಡಿಯೋಗಳು ಇವೆ. ಇದರಿಂದ ವೈಯಕ್ತಿಕ ತರಬೇತುದಾರರ ಅವಶ್ಯಕತೆ ಇರುವುದಿಲ್ಲ.
ಪ್ರತಿದಿನ ಪೊಲೀಸ್ ಸಿಬ್ಬಂದಿ ಮಾಡುವ ವ್ಯಾಯಮಗಳ ಮಾಹಿತಿ ತಂತ್ರಾಶದಲ್ಲಿ ದಾಖಲು ಆಗಲಿದೆ. ಇದು ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಲುಪಲಿದೆ. ಬೊಜ್ಜು ಇರುವ ಪೊಲೀಸರಲ್ಲಿ 3 ತಿಂಗಳ ಈ ಅವಧಿಯಲ್ಲಿ ಉಂಟಾಗುವ ಬದಲಾವಣೆ ಹಾಗೂ ಫಲಶೃತಿ ಮೌಲ್ಯಮಾಪನ ಮಾಡಲಾಗುವದು. ಇದರೊಂದಿಗೆ ಪರಿಕರ ನೀಡದೆ ಇರುವ ಬೊಜ್ಜು ಹೊಂದಿರುವ ಪೊಲೀಸ್ ಸಿಬ್ಬಂದಿಯ ಆರೋಗ್ಯ ಸಹ ಮೌಲ್ಯಮಾಪನ ಮಾಡಿ, ತಾಳೆ ನೋಡಲಾಗುವುದು. ಪರಿಣಾಮಕಾರಿ ಎನಿಸಿದರೆ, ಮುಂದಿನ ದಿನಮಾನಗಳಲ್ಲಿ ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಉಳಿದ ಪೊಲೀಸರಿಗೂ ವ್ಯಾಯಾಮ ಪರಿಕರವನ್ನು ವಿತರಣೆ ಮಾಡುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಸ್ವಾಸ್ಥ್ಯ ಕನಸಿನ ಮಾರ್ಗದ ಕಡೆಗೆ ಮುಂದಡಿ:

ಹೈಗೇರ್ ಕಂಪನಿ ಜನರ ಜೀವನದಲ್ಲಿ ಬದಲಾವಣೆ ತರುವುದರಲ್ಲಿ ಸಹಾಯ ಮಾಡುತ್ತಿದೆ. ಪೊಲೀಸರು ಸಹ ಸಮಾಜ ಸ್ವಾಸ್ಥ್ಯ ಕಾಪಾಡುತ್ತಾರೆ. ಇನ್ನೊಬ್ಬರಿಗೆ ನೆರವು ನೀಡುತ್ತಾರೆ. ಇಂತಹ ಪೊಲೀಸರು ಆರೋಗ್ಯದ ಕಾಳಜಿಯೂ ಮುಖ್ಯವಾದದು. ಈ ನಿಟ್ಟಿನಲ್ಲಿ ಚಿತ್ರದುರ್ಗ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸ್ಮಾರ್ಟ್ ತಂತ್ರಾಶ ಆಧಾರಿತ ದೈಹಿಕ ವ್ಯಾಯಾಮ ಪರಿಕರಗಳನ್ನು ಪೊಲೀಸ್ ಸಿಬ್ಬಂದಿ ನೀಡಲಾಗಿದೆ. ಪೊಲೀಸರ ಸ್ವಾಸ್ಥ್ಯದ ಕನಸಿನ ಮಾರ್ಗದ ಕಡೆಗೆ ಮುಂದಡಿ ಇಡಲಾಗಿದೆ ಎಂದು ಹೈಗೇರ್ ಕಂಪನಿ ಎಲಿ ಪಾಂಪ್‌ಲಿಂಗರ್ ಈ ಸಂದರ್ಭದಲ್ಲಿ ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement
Tags :
Advertisement