For the best experience, open
https://m.suddione.com
on your mobile browser.
Advertisement

ಕನ್ನಡದ ಕಾರ್ಯಗಳಿಗೆ ಸದಾ ಬದ್ಧ : ಶಾಸಕ ಕೆ.ಸಿ. ವೀರೇಂದ್ರ

05:10 PM Jul 10, 2024 IST | suddionenews
ಕನ್ನಡದ ಕಾರ್ಯಗಳಿಗೆ ಸದಾ ಬದ್ಧ   ಶಾಸಕ ಕೆ ಸಿ  ವೀರೇಂದ್ರ
Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ.10 :ಸುವರ್ಣ ಸಂಭ್ರಮ 50 ರಥ ಯಾತ್ರೆ ಕನ್ನಡದ ಕಾರ್ಯಗಳಿಗೆ ಸದಾ ಬದ್ಧನಾಗಿದ್ದೇನೆ ಎಂದು ಶಾಸಕ ಕೆ.ಸಿ. ವೀರೇಂದ್ರಕುಮಾರ್(ಪಪ್ಪಿ) ಹೇಳಿದ್ದಾರೆ.

Advertisement
Advertisement

ಅವರು ಬುಧವಾರ ಚಿತ್ರದುರ್ಗ ನಗರದಲ್ಲಿ ಏರ್ಪಡಿಸಿದ್ದ ಸುವರ್ಣ ಸಂಭ್ರಮ ರಥ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಳೆದ ವರ್ಷ ನವಂಬರ್ 2,2023 ರಲ್ಲಿ ವಿಜಯ ನಗರ ಜಿಲ್ಲೆಯ ಹಂಪಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ರಥ ಯಾತ್ರೆಗೆ ಚಾಲನೆ ನೀಡಿದ್ದರು. ಈ ರಥವು ರಾಜ್ಯದ ಎಲ್ಲ ಜಿಲ್ಲೆಗಳ ಮೂಲಕ ಸಂಚರಿಸಲಿದೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ಕನ್ನಡಕ್ಕೆ ಸಮಸ್ಯೆ ಅಥವ ಸಂಕಷ್ಟ ಎದುರಾದಾಗ ಒಗ್ಗಟ್ಟಾಗಿ ಹೋರಾಡುವುದು ಎಲ್ಲರ ಕರ್ತವ್ಯವಾಗಿದೆ. ರಾಜ್ಯದಲ್ಲಿನ ಎಲ್ಲ ಅಂಗಡಿ,ಮುಂಗಟ್ಟು, ಸಂಸ್ಥೆಗಳು ಮತ್ತು ಇಲಾಖೆಗಳ ಬೋರ್ಡಗಳಲ್ಲಿ ಶೇ. 60 ರಷ್ಟು ಕನ್ನಡದಲ್ಲಿ ಇರಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ಇಲ್ಲಿ ವಾಸಮಾಡುತ್ತಿರುವ ಎಲ್ಲರೂ ಇದಕ್ಕೆ ಬದ್ಧರಾಗಿರಬೇಕು. ಇದಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳು ಇದರ ಬಗ್ಗೆ ಗಮನ ಹರಿಸಬೇಕು ಇದರಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತ, ನಗರಸಭೆ ಮತ್ತು ಶಾಸಕನಾಗಿ ನನ್ನ ಕರ್ತವ್ಯವೂ ಆಗಿದೆ ಎಂದು ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ರಥವು ಕನ್ನಡ ಭಾಷೆಯ ಸಮಗ್ರತೆ, ಇತಿಹಾಸವನ್ನು ಬಿಂಬಿಸುತ್ತಿದೆ. ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳ ಪೂರ್ಣಗೊಂಡ ಅಂಗವಾಗಿ ರಥ ಯಾತ್ರೆಯು ಜಿಲ್ಲೆಯಲ್ಲಿ ಸಂಚರಿಸುತ್ತಿದೆ. ಗುರುವಾರ ನಾಯಕನಹಟ್ಟಿ, ಶುಕ್ರವಾರ ಚಳ್ಳಕೆರೆ, ಶನಿವಾರ ಹಿರಿಯೂರು ಹಾಗೂ ಭಾನುವಾರ ಹೊಸದುರ್ಗದಲ್ಲಿ ರಥಯಾತ್ರೆ ಸಂಚರಿಸಲಿದೆ.

Advertisement

ರಥವು ರಾಜ್ಯದ ಅಖಂಡತೆ ಮತ್ತು ಸಮಗ್ರತೆಯ ಸಂದೇಶವನ್ನು ಹರಡುತ್ತಿದೆ. ರಥ ಸಂಚರಿಸುವ ಸ್ಥಳಗಳಲ್ಲಿ ಕನ್ನಡಿಗಳು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಸ್ವಾಗತಿಸುತ್ತಿದ್ದಾರೆ ಎಂದರು. ಕನಕ ವೃತ್ತದಿಂದ ಆರಂಭವಾದ ಮೆರವಣಿಗೆ ಒನಕೆ ಓಬವ್ವ ವೃತ್ತದಲ್ಲಿ ಮುಕ್ತಾಯಗೊಂಡಿತು. ಶಾಲಾ ವಿದ್ಯಾರ್ಥಿಗಳು, ನಾನಾ ಕಲಾತಂಡಗಳು ಮೆರವಣಿಗೆಯಲ್ಲಿದ್ದವು. ಶಾಸಕ ಕೆ.ಸಿ.ವೀರೇಂದ್ರಕುಮಾರ್ ಮತ್ತು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಡೊಳ್ಳು ಬಡಿಯುವುದರ ಮೂಲಕ ಕನಕ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.

ಸಂಸದ ಗೋವಿಂದ ಕಾರಜೋಳ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ,  ತಹಸೀಲ್ದಾರ್ ನಾಗವೇಣಿ, ಆಹಾರ ಇಲಾಖೆಯ ಎಸ್.ಕೆ.ಮಲ್ಲಿಕಾರ್ಜುನ, ಬಿಇಒ ನಾಗಭೂಷಣ್, ಮ್ಯಾನೇಜರ್ ಮಂಜುಳ ಕಂದಾಯ ಅಧಿಕಾರಿ ಜಯಪ್ಪ, ಆರೋಗ್ಯಾಧಿಕಾರಿ ನಾಗರಾಜ, ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ್, ಕರುನಾಡ ವಿಜಯ ಸೇನೆ ಅಧ್ಯಕ್ಷ ಎಸ್.ಕೆ.ಶಿವಕುಮಾರ್, ಶಿಕ್ಷಣಾಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ, ವೈಶ್ಯ ಸಂಘದ ರಾಮಲಿಂಗಶೆಟ್ಟಿ ಸೇರಿದಂತೆ ನಾನಾ ಇಲಾಖೆ ಮತ್ತು ಸಂಘಸಂಸ್ಥೆಗಳ ಪದಾಧಿಕಾರಿಗಳಿದ್ದರು.

Tags :
Advertisement