For the best experience, open
https://m.suddione.com
on your mobile browser.
Advertisement

ಗುರು ಸೇವೆ ಮಾಡಿದವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೂರೆಯುತ್ತವೆ : ಶ್ರೀ ಶಿವಲಿಂಗಾನಂದ ಸ್ವಾಮೀಜಿ

06:16 PM Dec 07, 2023 IST | suddionenews
ಗುರು ಸೇವೆ ಮಾಡಿದವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೂರೆಯುತ್ತವೆ   ಶ್ರೀ ಶಿವಲಿಂಗಾನಂದ ಸ್ವಾಮೀಜಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 07 :  ಕಾವಿ ಹಾಕಿದವರೆಲ್ಲ ಸ್ವಾಮೀಗಳಾಗುವುದಿಲ್ಲ, ಕಬೀರಾನಂದ ಶ್ರೀಗಳು ಗುರುಪಾದಕ್ಕೆ ಸಮರ್ಥನೀಯವಾಗಿದ್ದರು, ದುಃಖವನ್ನು ಕಳೆಯುವಂತ ಶಕ್ತಿ ಅವರಲ್ಲಿ ಇತ್ತು, ಅವರ ನುಡಿಯೇ ವೇದ ವಾಕ್ಯವಾಗಿತ್ತು. ಗುರು ಭಕ್ತಿಯಲ್ಲಿ ಶ್ರದ್ದೆ ಉಳ್ಳವರಾಗಿದ್ದರು, ಅವರ ವಾಕ್ಯ ಪರಿಪಾಲನೆಯಿಂದ ಇಷ್ಠಲ್ಲಾ ಆಗಲಿಕ್ಕೆ ಕಾರಣವಾಯಿತೆಂದು ಶ್ರೀ ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

Advertisement

ನಗರದ ಕಬೀರಾನಂದಾಶ್ರಮದವತಿಯಿಂದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳು 67ನೇ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಶ್ರೀಗಳ 57ನೇ ಪುಣ್ಯಾರಾಧನೆಯ ಸಮಾರೋಪ ಸಮಾರಂಭವೂ ಶ್ರೀ ಸದ್ಗುರು ಕಬೀರಾನಂದಾಶ್ರಮ ಆವರಣದಲ್ಲಿ ಡಿ.6ರ ಸಂಜೆ ಹಮ್ಮಿಕೊಂಡಿದ್ದು ಅದರ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಸನ್ಯಾಸಿಯಾದವನಿಗೆ ಪೂರ್ವಾಶ್ರಮದ ಸಂಬಂಧ ಇರಬಾರದು. ಎಲ್ಲವನ್ನು ತೊರೆದವನು ಸನ್ಯಾಸಿಯಾಗಲು ಸಾಧ್ಯವಿದೆ.

ಆತನಿಗೆ ಯಾವುದೇ ರೀತಿ ಸಂಬಂಧಗಳು ಇರಬಾರದು ಇದ್ದರೆ ಆತ ಸನ್ಯಾಸಿಯಾಗಲಾರ, ಇಂದು ಈ ಇಬ್ಬರು ಮಹಾನ್ ಪುರುಷರ ಸ್ಮರಣೆಯ ದಿನವಾಗಿದೆ, ಕಬೀರಾನಂದ ಶ್ರೀಗಳು ಪ್ರಾರಂಭದಲ್ಲಿ ಇಲ್ಲಿಗೆ ಆಗಮಿಸಿದಾಗ ಗೋಶಾಲೆಯನ್ನು ಪ್ರಾರಂಭ ಮಾಡಬೇಕೆಂದು ಬಂದವರು ಅವರು ಮಠವನ್ನು ನಿರ್ಮಾಣ ಮಾಡಬೇಕೆಂದು ಬಂದವರಲ್ಲ. ಆದರೆ ಈಗ ಗುರು ವಾಕ್ಯದಿಂದ ಎಲ್ಲವು ನಡೆಯುತ್ತಿದೆ. ಎಂದರು.

ಗುರು ಸೇವೆಯನ್ನು ಮಾಡಿದವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೂರಕಲು ಸಾಧ್ಯವಿದೆ, ಗುರುವಿನ ಗುಲಾಮನಾಗುದ ಹೊರೆತು ದೂರೆದಣ್ಣ ಮುಕುತಿ ಎನ್ನುವಂತೆ ಗುರು ಕಾರಣ್ಯದಿಂದ ಎಲ್ಲವನ್ನು ಪಡೆಯಬಹುದಾಗಿದೆ ಎಂದು ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠದ ಶ್ರೀ ಸಚ್ಚಿದಾನಂದ ಶ್ರೀಗಳು ತಮ್ಮ ಆರ್ಶಿರ್ವಚನದಲ್ಲಿ ಮಹಾತ್ಮರಿಂದ ಹಲವಾರು ಗುಣಗಳನ್ನು ಕಲಿಯಬೇಕಿದೆ. ಮಾನವನ ತಾಪವನ್ನು ಕಳೆಯುವ ಸಾಮಥ್ಯ ಇರುವುದು ಗುರುವಿಗೆ ಮಾತ್ರ, ಎಲ್ಲಿ ಪರಿಪೂರ್ಣವಾದ ವಿದ್ಯೆ ಇರುತ್ತದೆಯೂ ಅಲ್ಲಿ ಭಕ್ತಿ ಇರುತ್ತದೆ. ಜ್ಞಾನದ ಹಸಿವನ್ನು ನೀಗಿಸಲು ಗುರುವಿನ ಕಾರುಣ್ಯ ಬೇಕಿದೆ. ಸಿದ್ದರೂಢ ಮಠದಲ್ಲಿ ಯಾವಾಗ ಬೇಕಾದರೂ ಬಂದರೂ ಸಹಾ ಪ್ರಸಾದ ಸಿಗುತ್ತದೆ.

ಅದಕ್ಕೆ ಲೋಪ ಇಲ್ಲ, ಮಾನವ ತನ್ನ ಮನಸ್ಸುನ್ನು ನಿಯಂತ್ರಣದಲ್ಲಿ ಇಡುವುದನ್ನು ಕಲಿಯಬೇಕಿದೆ ಮನಸ್ಸು ನಿಯಂತ್ರಣದಲ್ಲಿದ್ದರೆ ಏನು ಬೇಕಾದರೂ ಸಾದನೆ ಮಾಡಬಹುದಾಗಿದೆ. ಗುರುವಿನಲ್ಲಿ ಭಕ್ತನಾದವನು ನಿಷ್ಠೆ, ಭಕ್ತಿ, ಶ್ರದ್ದೆಯನ್ನು ಹೊಂದಿರಬೇಕಿದೆ. ಪ್ರೀತಿಯಿಂದ ಗುರುವನ್ನು ನೆನಯಬೇಕಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಚಳ್ಳಕೆರೆ ನಗರಸಭೆಯ ಸದಸ್ಯರಾದ ಕೆ.ಸಿ.ನಾಗರಾಜ್ ಮಾತನಾಡಿ, ಭಕ್ತ ಕೆಟ್ಟ ಮಾರ್ಗದಲ್ಲಿ ಹೋಗುತ್ತಿದ್ದರೆ ಗುರುವಾದವನು ಅದನ್ನು ತಿದ್ದುವ ಕೆಲಸವನ್ನು ಮಾಡುತ್ತಾನೆ, ಅಂತಹ ಮಾಹಾನ್ ಶಕ್ತಿ ಅತನಿಗೆ ಇದೆ. ಮಾನವನ ಸಾಧನೆಗೆ ಮುಂದೆ ಗುರಿ ಇದ್ದು ಹಿಂದೆ ಗುರು ಇದ್ಧಾಗ ಅದು ಪೂರ್ಣವಾಗುತ್ತದೆ. ಗುರುವಿನ ಸ್ಮರಣೆಯನ್ನು ಮಾಡುವುದು ಅಗತ್ಯವಾಗಿದೆ ಎಂದರು.

ನಗರಸಭೆಯ ಸದಸ್ಯರಾದ ವೆಂಕಟೇಶ್, ನಗರಾಬಿವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯರಾದ ಶ್ರೀಮತಿ ಎ.ರೇಖಾ ಸಾಹಿತಿಗಳಾದ ಬಿ.ಆರ್.ಪುಟ್ಟಪ್ಪ ಹಾಗೂ ಮಾತೃಶ್ರೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ವಿ.ಎಲ್.ಪ್ರಶಾಂತ್ ಮತ್ತು ಬುಡೇನ್‍ಸಾಬ್, ಗಣಪತಿ ಶಾಸ್ತ್ರಿ, ನಿರಂಜನ, ತಿಪ್ಪೇಸ್ವಾಮಿ, ಭಾಗವಹಿಸಿದ್ದರು.

ಕಳೆದ ನ.30 ರಿಂದ ಡಿ.6ರವರೆಗೆ ಪ್ರತಿ ದಿನ ಸಂಜೆ ಆರೂಢ ಮೇರು ಜೀವನ ಚರಿತ್ರೆ ಪಾರಾಯಣ ಪ್ರವಚನ ನಡೆದಿದ್ದು, ಡಿ.6ರ ಬೆಳಿಗ್ಗೆ ಕಾರ್ತಿಕ ಬಹುಳ ನವಮಿಯಂದು ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ಕರ್ತೃ ಗದ್ದುಗೆಗೆ ರುದ್ರಾಭೀಷೇಕ ನಡೆಸಲಾಯಿತು.

Tags :
Advertisement