ಚಿತ್ರದುರ್ಗದಲ್ಲಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ 99ನೇ ಜನ್ಮ ದಿನಾಚರಣೆ : ಕಾರ್ಯಕರ್ತರಿಂದ ಸ್ಮರಣೆ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 25 : ಅಟಲ್ ಬಿಹಾರಿ ವಾಜಪೇಯಿರವರು ತಮ್ಮ ಅಧಿಕಾರದ ಸಮಯದಲ್ಲಿ ಉತ್ತಮವಾದ ಆಡಳಿತವನ್ನು ನೀಡಿದ್ದಲ್ಲದೆ, ದೇಶಕ್ಕೆ ಉತ್ತಮವಾದ ರಸ್ತೆಗಳನ್ನು ನೀಡುವುದರ ಮೂಲಕ ಸುಗಮ ಸಂಚಾರಕ್ಕೆ ದಾರಿಯನ್ನು ಮಾಡಿಕೊಟ್ಟಿದ್ದಾರೆ ಇಂದು ಅವರನ್ನು ನೆನೆಯುವುದು ಅಗತ್ಯವಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಮಾಜಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್ ತಿಳಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ 99ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನಗರದಲ್ಲಿನ ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಲ್ಲದೆ ಗ್ರಾಮಾಂತರ ಪ್ರದೇಶದಲ್ಲಿಯೂ ಸಹಾ ಉತ್ತಮವಾದ ಸಂಪರ್ಕ ರಸ್ತೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಗ್ರಾಮ ಮತ್ತು ನಗರವನ್ನು ಕೂಡಿಸುವ ಸಂಪರ್ಕವನ್ನು ನಿರ್ಮಾಣ ಮಾಡಿದರು, ಇದಲ್ಲದೆ ಸರ್ವ ಶಿಕ್ಷಾ ಅಭೀಯಾನದಡಿಯಲ್ಲಿ ಉತ್ತಮವಾದ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುವುದರ ಮೂಲಕ ಮಕ್ಕಳ ಕಲಿಕೆಗೆ ನರವಾದರು ಎಂದರು.
ರಸ್ತೆಗಳ ನಿರ್ಮಾಣದಲ್ಲಿ ಕ್ರಾಂತಿಯನ್ನು ಮಾಡಿದ ವಾಜಪೇಯಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ದೇಶದ ಹಲವಾರು ಕಡೆಯಲ್ಲಿ ಉತ್ತಮವಾದ ರಸ್ತೆಗಳನ್ನು ನಿರ್ಮಾಣಕ್ಕೆ ಮುಂದಾದರು, ಒಂದು ಕಾಲದಲ್ಲಿ ಹದಗೆಟ್ಟಿದ್ದ ರಸ್ತೆಗಳನ್ನು ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ವಾಜಪೇಯಿಯವರು ಎಂದ ಅವರು, ಆಡಳಿತದಲ್ಲಿಯೂ ಸಹಾ ಹಲವಾರು ಸುಧಾರಣೆಗಳನ್ನು ತರುವುದರ ಮೂಲಕ ಉತ್ತಮ ಆಡಳಿತಗಾರ ಎಂದು ಹೆಸರನ್ನು ಪಡೆದಿದ್ದರು. ಸಂಸತ್ ಸದಸ್ಯರಾಗಿ ಆಜಾತ ಶತೃವಾಗಿ ಕೆಲಸವನ್ನು ಮಾಡಿದರು. ಬಿಜೆಪಿ ದೇಶದಲ್ಲಿ ಇಷ್ಟರ ಮಟ್ಟಿಗೆ ಬೆಳೆಯಲು ಹಲವಾರು ಜನರಲ್ಲಿ ಇವರು ಸಹಾ ಕಾರಣರಾಗಿದ್ದಾರೆ ಎಂದು ಮಲ್ಲಿಕಾರ್ಜನ್ ತಿಳಿಸಿದರು.
ವಾಜೀಪೇಯಿಯವರ ತತ್ವ ಸಿದ್ದಾಂತವನ್ನು ಇಂದು ನಾವುಗಳು ಅಳವಡಿಸಿಕೊಳ್ಳಬೇಕಿದೆ ಬಿಜೆಪಿ ಎಂದು ಸಹಾ ಆಧಿಕಾರಕ್ಕಾಗಿ ಮುಂದಾಗಿಲ್ಲ ಜನ ಸೇವೆಯನ್ನು ತನ್ನ ಗುರಿಯನ್ನಾಗಿ ಮಾಡಿಕೊಂಡಿದೆ. ವಾಜಪೇಯಿಯವರು ಯಾವುದೇ ಉಚಿತ ಗ್ಯಾರೆಂಟಿಯನ್ನು ನೀಡುವು ಬದಲು ಪ್ರಜೆಗಳಿಗೆ ಉಚಿತವಾಗಿ ಶಿಕ್ಷಣ ಮತ್ತು ಆರೋಗ್ಯವನ್ನು ನೀಡುವಂತೆ ತಿಳಿಸಿದ್ದರು. ಅದನ್ನು ನೀಡಿದಾಗ ಉಳಿದವನ್ನು ಜನರೆ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಅವರಲ್ಲಿ ಇತ್ತು ಎಂದರು.
ಬಿಜೆಪಿ ಮುಖಂಡರಾದ ಡಾ.ಸಿದ್ದಾರ್ಥ ಮಾತನಾಡಿ, ವಾಜಪೇಯಿಯವರು ದೇಶದ ಪ್ರಧಾನ ಮಂತ್ರಿಯಾಗುವುದಕ್ಕಿಂತ ಮುಂಚೆ ನಮ್ಮ ದೇಶದ ರಸ್ತೆಗಳು ಸರಿಯಿರಲಿಲ್ಲ, ಅವರು ಪ್ರಧಾನ ಮಂತ್ರಿಗಳಾದ ಮೇಲೆ ಉತ್ತಮವಾದ ರಸ್ತೆಯನ್ನು ನೀಡುವುದರ ಮೂಲಕ ಸಾರಿಗೆ ಸಂಪರ್ಕದಲ್ಲಿ ಸಾಧನೆಯನ್ನು ಮಾಡಿದರು. ದೇಶದ ಬದಲಾವಣೆಯಲ್ಲಿ ಶಕ್ತಿಯನ್ನು ತುಂಬಿದವರು ವಾಜಪೇಯಿಯಾಗಿದ್ದಾರೆ ಎಂದರು.
ನಗರಾಧ್ಯಕ್ಷ ನವೀನ್ ಚಾಲುಕ್ಯ ಮಾತನಾಡಿ, ವಾಜೀಪೇಯಿಯವರು ಅಜಾತ ಶತೃಗಳಾಗಿದ್ದರು ಯಾರನ್ನು ಸಹಾ ಕೀಳಾಗಿ ಕಾಣುತಿರಲಲ್ಲ, ಎಲ್ಲರನ್ನು ಸಮಾನರಾಗಿ ಕಂಡು ಆತ್ಮೀಯವಾಗಿ ಮಾತನಾಡುಸುತ್ತಿದ್ದರು. ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗಿ ಬರಬೇಕಾದರೆ ಹರ ಸಾಹಸವನ್ನು ಮಾಡಬೇಕಿತ್ತು ಆದರೆ ಇಂದು ವಾಜಿಪೇಯಿರವರು ನೀಡಿದ ಉತ್ತಮವಾದ ರಸ್ತೆಯಿಂದಾಗಿ ಯಾವುದೇ ಅಫಘಾತ ಇಲ್ಲದೆ ಸುಗಮವಾಗಿ ಹೋಗಿ ಬರಲಾಗುತ್ತಿದೆ ಎಂದರು.
ವಾಜಿಪೇಯಿರವರ ಬಗ್ಗೆ ಸಂಪತ್ ಕುಮಾರ್ ಶಿವಣ್ಣಚಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮಾಂತರ ಘಟಕದ ಅಧ್ಯಕ್ಷ ಕಲ್ಲೇಶಯ್ಯ, ಕಾರ್ಯದರ್ಶಿ ಮೋಹನ್, ವಕ್ತಾರರಾದ ದಗ್ಗೆ ಶಿವಪ್ರಕಾಶ್, ಕಿರಣ್ ಕುಮಾರ್, ಭರತ್, ಸಂಜು, ಅರುಣಾ ಪರಶುರಾಮ್, ವಿರೂಪಾಕ್ಷಿ, ತಿಮ್ಮಣ್ಣ, ಅನೂಪ್ ಮಹಾಂತೇಶ್, ಪಾಪಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು ವಕ್ತಾರರಾದ ನಾಗರಾಜ್ ಬೇದ್ರೇ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ತಿಪ್ಪೇಸ್ವಾಮಿ ವಂದಿಸಿದರು.