Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಐಜೂರು ಪಿಎಸ್‌ಐ ಅಮಾನತಿಗೆ ಪಟ್ಟು : ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ

07:30 PM Feb 19, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 19 : ಸುಳ್ಳು ದೂರಿನ ಮೇರೆಗೆ ರಾಮನಗರ ಐಜೂರು ಪೊಲೀಸರು ವಕೀಲರ ಸಂಘದ 45 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿರುವುದನ್ನು ಖಂಡಿಸಿ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದಿಂದ ಇಂದು ಪ್ರತಿಭಟನೆಯನ್ನು ನಡೆಸಿ ಕೇಸು ದಾಖಲು ಮಾಡಿರುವ ಐಜೂರು ಪೊಲೀಸ್ ಠಾಣಾಧಿಕಾರಿ ಸೈಯದ್ ತನೀರ್ ಹುಸೇನ್ ರವರನ್ನು ತಕ್ಷಣದಿಂದ ಅಮಾನತ್ತು ಮಾಡಬೇಕೆಂದು ಒತ್ತಾಯಿಸಲಾಯಿತು.

Advertisement

ದಿನಾಂಕ 19-2-2024 ರಂದು ಸೋಮವಾರ ರಾಮನಗರ ಜಿಲ್ಲಾ ವಕೀಲರ ಸಂಘದ 40 ಜನ ವಕೀಲರ ಮೇಲೆ ಎಫ್.ಐ.ಆರ್. ನಂ:9/2024ನ್ನು ದಾಖಲುಮಾಡಿರುವ ಐಜೂರು ಪೊಲೀಸ್ ಠಾಣಾಧಿಕಾರಿ ಯಾದ ಸೈಯದ್ ತನೀರ್ ಹುಸೇನ್ ರವರನ್ನು ತಕ್ಷಣದಿಂದ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿ ಈ ದಿನ ಚಿತ್ರದುರ್ಗ ವಕೀಲರ ಸಂಘದಲ್ಲಿ ಸರ್ವ ಸದಸ್ಯರ ಸಭೆಯನ್ನು ಕರೆದು ಸಂಘದ ಹಿರಿಯ ಕಿರಿಯ ಮಹಿಳಾ ವಕೀಲರುಗಳಿಂದ ಅವಹಾಲನ್ನು ಪಡೆದು ಸಂಘವು ಸದರಿ ಐಜೂರು ಪೊಲೀಸ್ ಠಾಣಾಧಿಕಾರಿಯಾದ ಸೈಯದ್ ತನ್ನೀರ್ ಹುಸೇನ್ ರವರ ವಿರುದ್ಧವಾಗಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ದಿನಾಂಕ 12-2-2024ರಂದು 40 ವಕೀಲರ ಮೇಲೆ ಸುಳ್ಳು ಪ್ರಥಮ ವರ್ತಮಾನ ವರದಿಯ ಸಂಖ್ಯೆ 9/2024 ರ ವಿರುದ್ಧ ಐಜೂರು ಪೊಲೀಸ್ ರಾಣೆಯ ಠಾಣಾಧಿಕಾರಿಯಾದ ಸೈಯದ್ ತನ್ವಿರ್ ಹುಸೇನ್ ರವರನ್ನು ಅಮಾನತ್ತು ಮಾಡುವಂತೆ ರಾಮನಗರ ಜಿಲ್ಲಾ ವಕೀಲರ ಸಂಘವು ನಿರಂತರವಾಗಿ ನ್ಯಾಯಾಲಯದ ಕಾರ್ಯ ಕಲಾಪಗಳಿಗೆ ತೊಂದರೆ ನೀಡದಂತೆ ಶಾಂತಿಯುತವಾಗಿ ಸಂಘದ ಆವರಣದಲ್ಲಿ ಧರಣಿ ನಡೆಸಿದ್ದು ಮತ್ತು ರಾಮನಗರ ವಕೀಲರ ಸಂಘದ ಹೋರಾಟಕ್ಕೆ 193 ರಾಜ್ಯದ ವಕೀಲರ ಸಂಘಗಳು ಮನವಿಯನ್ನು ಸಲ್ಲಿಸಿ ಸದರಿ ಘಟನೆಗೆ ಕಾರಣರಾದ ಠಾಣಾಧಿಕಾರಿಯ ವಿರುದ್ಧ ತನಿಖೆ ನಡೆಸಿ ಅಮಾನತ್ತುಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದರೂ ಸಹ ಮತ್ತು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಈ ದಿನ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘವು ಸದರಿ ತಪ್ಪಿತಸ್ಥ ಐಜೂರು ಪೊಲೀಸ್ ಠಾಣಾಧಿಕಾರಿಯಾದ ಸೈಯದ್ ತನ್ನೀರ್ ಹುಸೇನ್ ರವರನ್ನು ಈ ತಕ್ಷಣದಿಂದಲೇ ಜಾರಿ ಬರುವಂತೆ ಅಮಾನತ್ತು ಪಡಿಸಲು ಮತ್ತು ರಾಮನಗರ ವಕೀಲರ ಸಂಘಕ್ಕೆ ಅಕ್ರಮವಾಗಿ ಪ್ರವೇಶಿಸಿ ದಬ್ಬಾಳಿಕೆ ನಡೆಸಿದ ಇತರೆ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳಲು ಒತ್ತಾಯಿಸಿ ಪ್ರತಿಭಟನೆ ಮೂಲಕ ಜಿಲ್ಲಾ ವಕೀಲರ ಸಂಘವು ಮನವಿ, ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ನಗರದ ನ್ಯಾಯಾಲಯದ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆಯನ್ನು ನೆಡೆಸಿದ ನ್ಯಾಯವಾದಿಗಳು ತದ ನಂತರ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ಟಿ. ತಿಪ್ಪೇಸ್ವಾಮಿ. ಉಪಾಧ್ಯಕ್ಷ ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ,  ಖಂಜಾಚಿ ಪ್ರದೀಪ್, ಜಂಟಿ ಕಾರ್ಯದರ್ಶಿ ಗೀರೀಶ್, ಸದಸ್ಯರಾದ ದಾಸಪ್ಪ, ಸುರೇಶ್, ಮಹಮ್ಮದ್ ಇಮ್ರಾನ್, ಹರೀಶ್ ರಾಜೀವ್, ಧನಂಜಯ, ವರುಣ ರವಿ, ಮಾಲತೇಶ್ ಅರಸ್ ಸೇರಿದಂತೆ ಮಹಿಳಾ ನ್ಯಾಯಾವಾದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Tags :
AizurchitradurgaChitradurga District Advocates AssociationincidentProtestPsisuddionesuddione newsಅಮಾನತುಐಜೂರುಚಿತ್ರದುರ್ಗಚಿತ್ರದುರ್ಗ ಜಿಲ್ಲಾ ವಕೀಲರ ಸಂಘಪಟ್ಟುಪಿಎಸ್ಐಪ್ರತಿಭಟನೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article