ಉದ್ಯಮಿ ರತನ್ ಟಾಟಾರವರ ನಿಧನಕ್ಕೆ ಅಹಿಂದ ಮುಖಂಡರಿಂದ ಶ್ರದ್ದಾಂಜಲಿ
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 10 : ಭಾರತದ ಉದ್ಯಮಿ ರತನ್ ಟಾಟಾರವರ ನಿಧನಕ್ಕೆ ಅಹಿಂದಾ ವತಿಯಿಂದ ಪ್ರವಾಸಿ ಮಂದಿರದಲ್ಲಿ ಗುರುವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ ರತನ್‍ಟಾಟಾರವರ ನಿಧನದಿಂದ ಕಾರ್ಮಿಕರು, ಬಡವರು, ಕೆಳವರ್ಗದವರಿಗೆ ನಷ್ಠವುಂಟಾಗಿದೆ. ಶಿಸ್ತು, ಬದ್ದತೆ, ಪ್ರಾಮಾಣಿಕತೆ ಅವರಲ್ಲಿತ್ತು. ತಮ್ಮ ಕಂಪನಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ಸಿಂಹಪಾಲು ಕೊಡುತ್ತಿದ್ದರು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುಸ್ತಕಗಳನ್ನು ಚೆನ್ನಾಗಿ ಓದಿಕೊಂಡಿದ್ದ ರತನ್‍ಟಾಟಾ ತಮ್ಮ ದುಡಿಮೆಯಲ್ಲಿ ಶೇ.60 ರಷ್ಟು ಹಣವನ್ನು ಬಡವರಿಗಾಗಿ ದಾನ ಮಾಡುತ್ತಿದ್ದರು. ಸದಾ ಕೆಳವರ್ಗದವರ ಕುರಿತು ಚಿಂತಿಸುತ್ತಿದ್ದರು. ಅವರ ಆತ್ಮಕ್ಕೆ ಭಗವಂತ ನೆಮ್ಮದಿ ಕೊಡಲಿ ಎಂದು ಪ್ರಾರ್ಥಿಸಿದರು.
ಅಹಿಂದಾ ಸಂಚಾಲಕ ಕೆಂಚಪ್ಪ, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಹರೀಶ್, ರಾಜು, ಮಲ್ಲಿಕಾರ್ಜುನಪ್ಪ, ಜಗ್ಗಣ್ಣ, ನಾಗಣ್ಣ, ಸತ್ಯಪ್ಪ ಮಲ್ಲಾಪುರ, ಪಾಲಯ್ಯ ಇನ್ನು ಅನೇಕರು ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.