Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೃಷಿ ವಾರ್ತೆ | ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಖರೀದಿ

06:30 PM Aug 26, 2024 IST | suddionenews
Advertisement

ಚಿತ್ರದುರ್ಗ. ಆ.26: ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷರು ಸಭೆ ನಡೆಸಿ, ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಖರೀದಿಯನ್ನು ಕರ್ನಾಟಕ ಸಹಕಾರ ಮಾರಾಟ ಮಂಡಳಿ ವತಿಯಿಂದ ಕ್ವಿಂಟಲ್‌ಗೆ ರೂ.8,682/-ರಂತೆ ಖರೀದಿ ಮಾಡಲಿದ್ದಾರೆ.

Advertisement

ನೋಂದಣಿ ಕಾಲಾವಧಿಯನ್ನು 45 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗಧಿಪಡಿಸಿದೆ. ಆದ್ದರಿಂದ ಜಿಲ್ಲೆಯಲ್ಲಿ ಹೆಸರುಕಾಳು ಬೆಳೆಗಾರರು ಪ್ರತಿ ಎಕೆರೆಗೆ 2 ಕ್ವಿಂಟಲ್ ಹಾಗೂ ಗರಿಷ್ಟ 10 ಕ್ವಿಂಟಲ್‌ವರೆಗೆ ಚಿತ್ರದುರ್ಗ ಹಾಗೂ ಹೊಸದುರ್ಗದಲ್ಲಿ ಪ್ರಾರಂಭಿಸುವ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಬಹುದಾಗಿದೆ.

ಈ ಸಂದರ್ಭದಲ್ಲಿ ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರು, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಚಿತ್ರದುರ್ಗ ಹಾಗೂ ಹೊಸದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಇದ್ದರು.

Advertisement

Advertisement
Tags :
Agricultural Newsbengaluruchitradurganominal grainPurchasesuddionesuddione newssupport price schemeಕೃಷಿ ವಾರ್ತೆಚಿತ್ರದುರ್ಗಬೆಂಗಳೂರುಬೆಂಬಲ ಬೆಲೆ ಯೋಜನೆಯಡಿಸುದ್ದಿಒನ್ಸುದ್ದಿಒನ್ ನ್ಯೂಸ್ಹೆಸರುಕಾಳು ಖರೀದಿ
Advertisement
Next Article