Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಎ.ಡಿ.ಜಿ.ಪಿ. ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ : ಜೆಡಿಎಸ್ ಪ್ರತಿಭಟನೆ

04:52 PM Oct 01, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 01 : ಭ್ರಷ್ಠಾಚಾರ, ದುರ್ನಡತೆ, ಕ್ರಿಮಿನಲ್ ಕೇಸ್‍ನಲ್ಲಿ ಭಾಗಿಯಾಗಿರುವ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳದ ಮುಖ್ಯಸ್ಥ ಎ.ಡಿ.ಜಿ.ಪಿ. ಎಂ.ಚಂದ್ರಶೇಖರ್‍ರವರನ್ನು ಕೂಡಲೆ ಭಾರತೀಯ ಸೇವೆಯಿಂದ ಅಮಾನತ್ತುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಕೇಡರ್ ಸೆಂಟ್ರಲ್ ಪ್ರಾಧಿಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನೊಂದಿಗೆ ಕಳಿಸಿಕೊಡುವಂತೆ ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Advertisement

ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿರವರ ಬಗ್ಗೆ ಹಗರುವಾಗಿ ಮಾತನಾಡಿರುವ ಎಂ.ಚಂದ್ರಶೇಖರ್ ಹಂದಿಗಳ ಜೊತೆ ಗುದ್ದಾಡಿದರೆ ಮೈಯೆಲ್ಲಾ ಕೊಚ್ಚೆಯಾಗುತ್ತದೆಂಬ ಕೀಳು ಪದಗಳನ್ನು ಬಳಸಿ ಅಧಿಕಾರದ ದರ್ಪದಿಂದ ಮೆರೆಯುತ್ತಿರುವ ಹಿಮಾಚಲಪ್ರದೇಶ ಐ.ಪಿ.ಎಸ್. ಕೇಡರ್‍ಗೆ ಸೇರಿದ ಎಂ.ಚಂದ್ರಶೇಖರ್ ಪತ್ನಿಗೆ ಅನಾರೋಗ್ಯ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಜಕೀಯ ಪ್ರಭಾವ ಬೀರಿ ಕರ್ನಾಟಕಕ್ಕೆ ವರ್ಗಾವಣೆಗೊಂಡು ಪ್ರಮುಖ ಆಯಕಟ್ಟಿನಲ್ಲಿ ಕೆಲಸ ಮಾಡಿರುವುದಲ್ಲದೆ ಭೂಗಳ್ಳರು, ಸಮಾಜಘಾತುಕರೊಡನೆ ಕೈಜೋಡಿಸಿ ನೂರಾರು ಪ್ರಕರಣಗಳನ್ನು ತನಿಖೆ ನಡೆಸದಿರುವುದು ದುರಂತ ಎಂದು ಪ್ರತಿಭಟನಾನಿರತರು ಆಪಾದಿಸಿದರು.

ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಕಳೆದ ತಿಂಗಳ 28 ರಂದು ರಾಜಧಾನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಲೋಕಾಯುಕ್ತ ಕಚೇರಿಯಲ್ಲಿ ತನಿಖೆಗೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ರಾಜ್ಯಪಾಲರನ್ನು ಮಾಹಿತಿ ಕೇಳಿದ್ದನ್ನು ಮನದಲ್ಲಿಟ್ಟುಕೊಂಡು ದುರಹಂಕಾರದ ಮಾತುಗಳನ್ನು ಆಡಿರುವ ಎ.ಡಿ.ಜಿ.ಪಿ. ಎಂ.ಚಂದ್ರಶೇಖರ್‍ರವರನ್ನು ತಕ್ಷಣವೆ ಸೇವೆಯಿಂದ ಅಮಾನತ್ತುಪಡಿಸಿ ತನಿಖೆ ನಡೆಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು.

ಜೆಡಿಎಸ್.ಜಿಲ್ಲಾಧ್ಯಕ್ಷ ಎಂ.ಜಯಣ್ಣ, ದಾವಣಗೆರೆ ಜಿಲ್ಲಾ ಉಸ್ತುವಾರಿ ಡಿ.ಯಶೋಧರ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಉಪಾಧ್ಯಕ್ಷ ಮಠದಟ್ಟಿ ವೀರಣ್ಣ, ತಾಲ್ಲೂಕು ಅಧ್ಯಕ್ಷ ಸಣ್ಣತಿಮ್ಮಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಯುವ ಘಟಕದ ಜಿಲ್ಲಾಧ್ಯಕ್ಷ

ಓ. ಪ್ರತಾಪ್‍ಜೋಗಿ, ಮಂಜಣ್ಣ, ನಗರಸಭೆ ಸದಸ್ಯರುಗಳಾದ ದೀಪು, ನಸ್ರುಲ್ಲಾ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಬ್ಬು, ವೀರಭದ್ರಣ್ಣ, ಕರಿಬಸಪ್ಪ, ರುದ್ರಣ್ಣ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Tags :
ADGP ChandrasekharbengaluruchitradurgaJDS protestssuddionesuddione newssuspend from serviceಎ.ಡಿ.ಜಿ.ಪಿ. ಚಂದ್ರಶೇಖರ್ಚಿತ್ರದುರ್ಗಜೆಡಿಎಸ್ ಪ್ರತಿಭಟನೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಸೇವೆಯಿಂದ ಅಮಾನತುಗೊಳಿಸಿ
Advertisement
Next Article