For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದ ಅಳಿಯ ಆಗುತ್ತಿದ್ದಾರೆ ಚಿತ್ರನಟ ಡಾಲಿ ಧನಂಜಯ

09:24 AM Nov 01, 2024 IST | suddionenews
ಚಿತ್ರದುರ್ಗದ ಅಳಿಯ ಆಗುತ್ತಿದ್ದಾರೆ ಚಿತ್ರನಟ ಡಾಲಿ ಧನಂಜಯ
Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 01 : ಸ್ಯಾಂಡಲ್‌ವುಡ್‌ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್, ಹ್ಯಾಂಡಸಮ್ ಹಂಕ್ ಡಾಲಿ ಧನಂಜಯ್ ಹಸೆಮಣೆ ಏರುತ್ತಿದ್ದಾರೆ. ಯಾವಾಗ ಮದುವೆ ಅಂತ ಕೇಳುವಾಗೆಲ್ಲ ಅಯ್ಯೋ ಹುಡುಗಿನೇ ಸಿಕ್ಕಿಲ್ಲ ಅಂತಿದ್ದ ಡಾಲಿ ಧನಂಜಯ ಅವರಿಗೆ ಕೊನೆಗೆ ಸಂಗಾತಿ ಸಿಕ್ಕಿದ್ದಾರೆ. ಆಕ್ಟರ್ ಮತ್ತು ಡಾಕ್ಟರ್ ಮದುವೆ ಆಗುತ್ತಿದ್ದಾರೆ.

Advertisement


ಡಾಲಿ ಧನಂಜಯ್ ಅವರ ಕೈ ಹಿಡಿಯೋ ಹುಡುಗಿ ಯಾರು ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಅವರ ಬಾಳ ಸಂಗಾತಿ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ತಮ್ಮ ಬಾಳ ಸಂಗಾತಿಯನ್ನು ಧನಂಜಯ್ ಅವರು ಪರಿಚಯಿಸಿದ್ದಾರೆ.

ದೀಪಾವಳಿ ಹಬ್ಬಕ್ಕೆ ಧನಂಜಯ ಗುಡ್​ನ್ಯೂಸ್ ಕೊಟ್ಟಿದ್ದಾರೆ. ಫೆಬ್ರವರಿ 16ರಂದು ಮದುವೆ ನಡೆಯಲಿದೆ. ವಿಶೇಷ ಎಂದರೆ ಧನಂಜಯ್ ಮದುವೆ ಆಗುತ್ತಿರುವ ಹುಡುಗಿ ಚಿತ್ರರಂಗದವರಲ್ಲ. ಅವರು ವೈದ್ಯರು.
ಚಿತ್ರದುರ್ಗದ ವೈದ್ಯೆ ಡಾ.ಧನ್ಯತಾ ಅವರನ್ನು ಡಾಲಿ ಧನಂಜಯ ವಿವಾಹವಾಗುತ್ತಿದ್ದು, ಈ ಮೂಲಕ ಚಿತ್ರದುರ್ಗದ ಅಳಿಯ ಆಗುತ್ತಿದ್ದಾರೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋನ ಅವರು ಹಂಚಿಕೊಂಡಿದ್ದಾರೆ.

Advertisement
Advertisement

ಸ್ತ್ರೀರೋಗ ತಜ್ಞೆ ಆಗಿರುವ ಧನ್ಯತಾ, ಧನಂಜಯ್​ಗೆ ಜೊತೆಯಾಗುತ್ತಿದ್ದಾರೆ. ಡಾಲಿ ಮತ್ತು ಧನ್ಯತಾ ಮಧ್ಯೆ ಅನೇಕ ವರ್ಷಗಳ ಪರಿಚಯ ಇದೆ. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ.

ಧನ್ಯತಾ ಅಪ್ಪಟ ಕನ್ನಡತಿ. ಇವರು ಓದಿದ್ದು ಮೈಸೂರಿನಲ್ಲಿ. ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ವಿವಾಹ ನೆರವೇರಲಿದೆ. ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗದವರು, ರಾಜಕೀಯ ಕ್ಷೇತ್ರದವರು ಸೇರಿ ಅನೇಕ ಗಣ್ಯರು ಹಾಜರಾಗಲಿದ್ದಾರೆ. ಬೆಳಿಗ್ಗೆ ವಿವಾಹ ನಡೆಯಲಿದ್ದು, ಅದೇ ದಿನ ಅದೇ ವೇದಿಕೆ ಮೇಲೆ ಆರತಕ್ಷತೆ ಸಮಾರಂಭ ಕೂಡ ಜರುಗಲಿದೆ.

Tags :
Advertisement