Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪಕ್ಷ ಯಾರಿಗೆ ಟಿಕೆಟ್ ಕೊಡಲಿ ಗೆಲುವೊಂದೇ ಕಾರ್ಯಕರ್ತರ ಗುರಿ : ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

05:47 PM Feb 08, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.08  : ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಡಲಿ ಕಾರ್ಯಕರ್ತರು ಶ್ರಮವಹಿಸಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಾಗ ಮಾತ್ರ ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಸಾಧ್ಯ ಎಂದು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

Advertisement


ಮಾಳಪ್ಪನಹಟ್ಟಿ ಸಮೀಪವಿರುವ ತಿರುಮಲ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾಪಾರ್ಟಿಯಿಂದ ಗುರುವಾರ ನಡೆದ ಜಿಲ್ಲಾ ಕಾರ್ಯಕಾರಿಣಿ ಉದ್ಗಾಟಿಸಿ ಮಾತನಾಡಿದರು.

ಲೋಕಸಭೆ ಚುನಾವಣೆ ಕೇವಲ ಪಕ್ಷದ, ದೇಶದ ಚುನಾವಣೆಯಲ್ಲ. ಇಡಿ ವಿಶ್ವವೇ ಭಾರತದತ್ತ ಕಣ್ಣಿಟ್ಟಿದೆ. ಪ್ರಪಂಚದ ಹಿತಕ್ಕಾಗಿ ನರೇಂದ್ರಮೋದಿ ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಲೇಬೇಕು. ಜನಪ್ರಿಯ ನಾಯಕ ನಂ.ಒನ್ ಲೀಡರ್ ನರೇಂದ್ರಮೋದಿರವರು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಗಾಟಿಸಿ ಐದು ನೂರು ವರ್ಷಗಳ ಭಾರತೀಯರ ಕನಸನ್ನು ಸಾಕಾರಗೊಳಿಸಿದ್ದಾರೆ. ರಾಮಮಂದಿರ ಕಟ್ಟುವುದು ಜನಸಂಘದ ಸ್ಲೋಗನ್ ಆಗಿತ್ತು. ಜಮ್ಮು-ಮತ್ತು ಕಾಶ್ಮೀರ ಹಿಂದಿನಿಂದಲೂ ಅನುಭವಿಸಿಕೊಂಡು ಬರುತ್ತಿದ್ದ ಆರ್ಟಿಕಲ್ 370 ನ್ನು ಪ್ರಧಾನಿ ನರೇಂದ್ರಮೋದಿ ರದ್ದುಗೊಳಿಸಿ ದಿಟ್ಟತನ ತೋರಿದ್ದಾರೆ. ಪಿ.ಓ.ಕೆ. ಮುಂದಿನ ಹೋರಾಟ ಎಂದು ತಿಳಿಸಿದರು.

ಗ್ರಾಮ ಚಲೋ ಅಭಿಯಾನದ ಮೂಲಕ ಪಕ್ಷದ ಕಾರ್ಯಕರ್ತರು ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಮನೆ ಮನೆಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಟ್ಟಿಸಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಕರೆಂಟ್ ಅಭಾವವಿದ್ದರೆ ಹಣ ಕೊಟ್ಟು ಬೇರೆ ಕಡೆಯಿಂದ ತರಿಸಿಕೊಳ್ಳಬೇಕು. ಚುನಾವಣೆಗೋಸ್ಕರ ಕಾಂಗ್ರೆಸ್‍ನವರು ಅಕ್ಕಿ ಕೊಟ್ಟಿದ್ದಾರೆಯೇ ವಿನಃ ಬಡತನ ನಿವಾರಣೆಗಲ್ಲ. ನೊಂದಣಿ ಶುಲ್ಕ ಹಾಗೂ ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವಂತ ಕೆಲಸ ಕಾಂಗ್ರೆಸ್‍ನವರದು ಎಂದು ವ್ಯಂಗ್ಯವಾಡಿದರು.

ದೇಶದ ಪ್ರಧಾನಿ ನರೇಂದ್ರಮೋದಿ ಎಂಬತ್ತು ಕೋಟಿ ಜನರಿಗೆ ಉಚಿತ ಅಕ್ಕಿ ನೀಡುತ್ತಿದ್ದಾರೆ. ಎಲ್ಲೆ ಯುದ್ದ ಸಮಸ್ಯೆಯಾದರೂ ನಮ್ಮ ದೇಶದ ಪ್ರಧಾನಿಯನ್ನು ಮಧ್ಯಸ್ಥಿಕೆ ವಹಿಸಲು ಬೇರೆ ಬೇರೆ ರಾಷ್ಟ್ರದವರು ಕರೆಯುತ್ತಿರುವುದನ್ನು ನೋಡಿದರೆ ಅವರ ವ್ಯಕ್ತಿತ್ವ ಎಂತಹದು ಎನ್ನುವುದು ಗೊತ್ತಾಗುತ್ತದೆ. ಜೆಡಿಎಸ್. ಬಿಜೆಪಿ.ಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಚಳ್ಳಕೆರೆ, ಹಿರಿಯೂರು ಮತ್ತಿತರೆ ಕಡೆ ಬಿಜೆಪಿ.ಗೆ ಬಲ ಬಂದಂತಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಮೇಲೆ ಬರಬೇಕು. ಏನೆ ವ್ಯತ್ಯಾಸಗಳಿದ್ದರೂ ಕೈಬಿಡಿ. ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಕೆ 28 ಸ್ಥಾನಗಳನ್ನು ನಮ್ಮ ಪಕ್ಷ ಗೆಲ್ಲಬೇಕು. ಎರಡು ಲಕ್ಷ ಮತಗಳ ಅಂತರದಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಶಾಸಕ ತಿಪ್ಪೇಸ್ವಾಮಿ ಮಾತನಾಡಿ ವಿಶ್ವಕಂಡ ಆದರ್ಶ ಪುರುಷ ಮೋದಿಗೆ ದೈವಶಕ್ತಿಯಿದೆ. ಕಾಂಗ್ರೆಸ್‍ನವರು ಎಲೆಕ್ಷನ್ ಗಿಮಿಕ್ ಮಾಡುತ್ತಿದ್ದಾರೆ. ಮೂರನೆ ಬಾರಿಗೆ ನರೇಂದ್ರಮೋದಿ ದೇಶದ ಪ್ರಧಾನಿಯಾಗಲೇಬೇಕು. ಅನೇಕ ಸಾಧು ಸಂತರು ನಡೆಸಿದ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ರಾಮಮಂದಿರ ಉದ್ಗಾಟಿಸಿದ್ದಾರೆ. ಹಳ್ಳಿ ಹಳ್ಳಿ ಹೋಗಿ ಕೇಂದ್ರದ ಸಾಧನೆಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಪಕ್ಷ ಬಹುಮತಗಳಿಂದ ಗೆಲ್ಲುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿ. ಎಸ್ಸಿ. ಎಸ್ಟಿ.ಗೆ ಸೇರಿದ ಹನ್ನೊಂದು ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದೆ. ಕಾಂಗ್ರೆಸ್ ರಾಜ್ಯವನ್ನು ದಿವಾಳಿ ಮಾಡಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ನಮ್ಮ ದೇಶ ರಾಜ್ಯಕ್ಕೆ ಮಾರಕವಾಗಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ತೊಲಗಿಸಬೇಕಾಗಿರುವುದರಿಂದ ತಳಮಟ್ಟದಿಂದ ಜಾಗೃತಿಯಾಗಿ ಎಂದು ಕಾರ್ಯಕರ್ತರನ್ನು ಎಚ್ಚರಿಸಿದರು.

ಬಿಜೆಪಿ. ರಾಜ್ಯ ಕಾರ್ಯದರ್ಶಿ ಮುನಿರಾಜ್ ಮಾತನಾಡುತ್ತ ದೇಶದ ಪ್ರಧಾನಿ ನರೇಂದ್ರಮೋದಿ ರಾಮಮಂದಿರವನ್ನು ನಿರ್ಮಾಣ ಮಾಡಿರುವುದರಿಂದ ಇಡಿ ವಿಶ್ವ ಭಾರತವನ್ನು ನೋಡುತ್ತಿದೆ. ಬಿ.ವೈ.ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಕೇವಲ 70 ದಿನಗಳಲ್ಲಿ ಹತ್ತು ಸಾವಿರ ಕಿ.ಮೀ. ತಿರುಗಾಡಿದ್ದಾರೆ. ಗುಂಪುಗಾರಿಕೆಯಿಂದ ದೂರವಿದ್ದು, ಮೋದಿಯನ್ನು ಮೂರನೆ ಬಾರಿಗೆ ದೇಶದ ಪ್ರಧಾನಿಯನ್ನಾಗಿ ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ವಿಶ್ವಕರ್ಮರ ಅಭಿವೃದ್ದಿಗೆ ದೇಶದ ಪ್ರಧಾನಿ ನರೇಂದ್ರಮೋದಿರವರು ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ ದುರಾಡಳಿತ, ದೌರ್ಜನ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ದರ್ಪದ ಮಾತು ಇವುಗಳನ್ನೆಲ್ಲಾ ಮತದಾರರಿಗೆ ತಿಳಿಸಿ ನಮ್ಮ ಪಕ್ಷದ ಸಾಧನೆಗಳನ್ನು ಮುಟ್ಟಿಸಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿ. ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಎಂದು ಹೇಳಿದರು.

ಬೂತ್ ಮತ್ತು ಶಕ್ತಿ ಕೇಂದ್ರಕ್ಕೆ ಹೋಗಿ ಅಲ್ಲಿ ಪ್ರಧಾನಿ ಮೋದಿರವರ ಸಾಧನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಿ ನರೇಂದ್ರಮೋದಿಯನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಿ ಶ್ರೀಕೃಷ್ಣನ ಮಂದಿರವನ್ನು ನಿರ್ಮಿಸುತ್ತೇವೆಂದು ಭರವಸೆ ನೀಡಿದರು.
ಕಾರ್ಯಕಾರಿಣಿ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಮಾಜಿ ಸಂಸದ ಜನಾರ್ಧನಸ್ವಾಮಿ ಇವರುಗಳು ಮಾತನಾಡಿದರು.

ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‍ಕುಮಾರ್, ಜಿ.ಟಿ.ಸುರೇಶ್ ಸಿದ್ದಾಪುರ, ಮಾಜಿ ಅಧ್ಯಕ್ಷ ಜಿ.ಎಂ.ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಅನಿಲ್‍ಕುಮಾರ್, ಬಾಳೆಕಾಯಿ ರಾಂದಾಸ್ ವೇದಿಕೆಯಲ್ಲಿದ್ದರು.

Advertisement
Tags :
chitradurgaelection ticketGH Thippareddyಕಾರ್ಯಕರ್ತರ ಗುರಿಚಿತ್ರದುರ್ಗಟಿಕೆಟ್ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
Advertisement
Next Article