Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಡಿಕೆ ಗಿಡಕ್ಕೆ ಆಕಸ್ಮಿಕ ಬೆಂಕಿ ; 800 ಕ್ಕೂ ಹೆಚ್ಚು ಸುಟ್ಟು ಕರಕಲಾದ ಗಿಡಗಳು

09:36 AM Jan 29, 2024 IST | suddionenews
Advertisement

 

Advertisement

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ,
ಮೊ : 97398 75729,

Advertisement

ಸುದ್ದಿಒನ್, ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗೊರ್ಲತ್ತು ಗ್ರಾಮದ ರೈತ ಈರಣ್ಣ ಜಮೀನಿನಲ್ಲಿ ಅಡಿಕೆ ಗಿಡಗಳಿಗೆ ಬೆಂಕಿ ಆಕಸ್ಮಿಕ ಬೆಂಕಿ ಸಂಭವಿಸಿದೆ ಸುಮಾರು 800ಕ್ಕೂ ಹೆಚ್ಚು ಗಿಡಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಇದರಿಂದ ರೈತ ಈರಣ್ಣ ಕಂಗಾಲಾಗಿದ್ದು, ರೈತನ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ಅಡಿಕೆ ಗಿಡ ಸುಟ್ಟಿದ್ದಲ್ಲದೆ ಗಿಡಗಳಿಗೆ
ನೀರಿನ ಡ್ರೀಪ್ ಪೈಪ್ ಕೂಡ ಸುಟ್ಟು ಕರಕಲಾಗಿದ್ದು ಇದರಿಂದ ರೈತನಿಗೆ ಲಕ್ಷಾಂತರ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ರೈತ ಈರಣ್ಣ ತನ್ನ ಜಮೀನಿನಲ್ಲಿ 10 ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನ ಕೊರಸಿದ್ದರು. ಆದರೆ ಕೊಳವೆ ಬಾವಿಯಲ್ಲಿ ನೀರು ಅಷ್ಟಕಷ್ಟೆ ಬರುತಿತ್ತು. ಆದರೂ ಸಹ ಪಕ್ಕದ ಜಮೀನಿನಲ್ಲಿ ನೀರನ್ನು ಹಾಯಿಸಿಕೊಂಡು ಅಡಿಕೆ ಸಸಿಗಳನ್ನು ನೆಟ್ಟಿದ್ದರು. ಇದೀಗ ಅಡಿಕೆ ಗಿಡಗಳಿಗೆ ಬೆಂಕಿ ಬಿದ್ದಿದೆ.

ಘಟನೆ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ಪ್ರತಿಕ್ರಿಯಿಸಿ ಬೆಳಗೆರೆ ಕಾವಲಿನ ಸರ್ವೆ ನಂಬರ 283ರ ಜಮೀನಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಗಾಳಿ ಹೆಚ್ಚದಾ ಹಿನ್ನೆಲೆಯಲ್ಲಿ ಬೆಂಕಿ ಜಮೀನಿನ ಗಿಡಗಳಿಗೆ ಆವರಿಸಿಕೊಂಡು ಗಿಡಗಳಿಗೆ ತಾಗಿ ಸುಟ್ಟು ಹೋಗಿದೆ ಎಂದರು. ಇನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

Advertisement
Tags :
Accidental fireareca nutburntchallakerechitradurgaPlantplantssuddionesuddione newsಅಡಿಕೆ ಗಿಡಆಕಸ್ಮಿಕ ಬೆಂಕಿಗಿಡಗಳುಚಳ್ಳಕೆರೆಚಿತ್ರದುರ್ಗಸುಟ್ಟು ಕರಕಲುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article