Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪತ್ರಿಕಾ ವಿತರಕರು ಹಾಗು ಗಿಗ್ ಕಾರ್ಮಿಕರಿಗೆ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಯೋಜನೆ : ಸೇವಾ ಸಿಂಧು ಪೋರ್ಟಲ್‌ನಲ್ಲಿ ನೊಂದಣಿ

06:47 PM Dec 22, 2023 IST | suddionenews
Advertisement

 

Advertisement

ಚಿತ್ರದುರ್ಗ. ಡಿ.22: ದಿನಪತ್ರಿಕೆಗಳನ್ನು ವಿತರಿಸುವ ಪತ್ರಿಕಾ ವಿತರಕರಿಗೆ ರಾಜ್ಯ ಸರ್ಕಾರ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಯೋಜನೆ ಜಾರಿ ಮಾಡಿದೆ.

ಕರ್ನಾಟಕದಲ್ಲಿ ನಿವಾಸಿಯಾಗಿರುವ 16 ರಿಂದ 59 ವರ್ಷದೊಳಿಗಿನ ಪತ್ರಿಕಾ ವಿತರಕರು ಇ-ಶ್ರಮ ಪೋರ್ಟ್ಲ್  www.eshram.gov.in     ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಆದಾಯ ತೆರಿಗೆ ಪಾವತಿಸುವವರು ಹಾಗೂ ಇ.ಎಸ್.ಐ ಫಲಾನುಭವಿಗಳಿಗೆ ಯೋಜನೆ ಅನ್ವಯಿಸುವುದಿಲ್ಲ. ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ.2 ಲಕ್ಷ. ಅಪಘಾತದಿಂದ ಸಂಪೂರ್ಣವಾಗಿ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ಗರಿಷ್ಠ ರೂ.2 ಲಕ್ಷ, ಅಪಘಾತ ಹಾಗೂ ಗಂಭೀರ ಅನಾರೋಗ್ಯಕ್ಕೆ ಆಸ್ಪತ್ರೆ ವೆಚ್ಚ ಮರುಪಾವತಿ ರೂ.1 ಲಕ್ಷದ ವರೆಗೆ ಪರಿಹಾರ ದೊರಕಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾರ್ಮಿಕ ಅಧಿಕಾರಿ, ಕಾರ್ಮಿಕ ನಿರೀಕ್ಷಕರ ಕಛೇರಿಗೆ ಭೇಟಿ ನೀಡಬಹುದು. ಕಚೇರಿ ದೂರವಾಣಿ ಸಂಖ್ಯೆ 08194-231394 ಹಾಗೂ ಕಾರ್ಮಿಕ ಸಹಾಯವಾಣಿ 155214 ಕರೆ ಮಾಡಬಹುದು.

Advertisement

 

ಗಿಗ್ ಕಾರ್ಮಿಕರ ವಿಮಾ ಯೋಜನೆ : ಸೇವಾ ಸಿಂಧು ಪೋರ್ಟಲ್‌ನಲ್ಲಿ ನೊಂದಣಿ

ದೇಶದಲ್ಲೇ ಮೊದಲ ಬಾರಿಗೆ ಫುಡ್ ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಝಾನ್, ಪ್ಲಿಫ್‌ಕಾರ್ಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಪೊ ಬಿಗ್ ಬಾಸ್ಕೆಟ್, ಡೊಮಿನೊಸ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿರುವ ಗಿಗ್ ಕಾರ್ಮಿಕರಿಗೆ ರಾಜ್ಯ ಸರ್ಕಾರ ವಿಮಾ ಯೋಜನೆ ಜಾರಿ ಮಾಡಿದೆ. ಪೂರ್ಣಕಾಲಿಕ ಹಾಗೂ ಅರೆಕಾಲಿಕ ಡೆಲಿವರಿ ನೌಕರರು ಯೋಜನೆಯ ಲಾಭ ಪಡೆಯಬಹುದಾಗಿದೆ. ಎಲ್ಲಾ ಅರ್ಹ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೊಂದಾಯಿಸಿಕೊಳ್ಳಬಹುದು.

ವಿಮಾ ಸೌಲಭ್ಯವು ಕರ್ತವ್ಯದಲ್ಲಿ ಇರುವಾಗ ಹಾಗೂ ಇಲ್ಲದಿರುವಾಗ ಸಂಭವಿಸುವ ಅಪಘಾತಗಳಿಗೂ ಅನ್ವಯ ಆಗಿಲಿದೆ. ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ.2 ಲಕ್ಷ ಹಾಗೂ ಜೀವಾ ಮಿಮಾ ರೂ.2 ಲಕ್ಷ ಸೇರಿ ಒಟ್ಟು 4 ಲಕ್ಷ ಪರಿಹಾರ ದೊರಕಲಿದೆ. ಅಪಘಾತದಿಂದ ಸಂಪೂರ್ಣವಾಗಿ ಶಾಶ್ವತ ದುರ್ಬಲತೆಗೆ ಹೊಂದಿದರೆ ರೂ.2 ಲಕ್ಷ, ಅಪಘಾತದ ಸಂದರ್ಭದ ಆಸ್ಪತ್ರೆ ವೆಚ್ಚ ಮರುಪಾವತಿ ರೂ.1 ಲಕ್ಷ ಹಾಗೂ ಜೀವ ವಿಮಾ ರೂ.2 ಲಕ್ಷ ಪರಿಹಾರ ದೊರಕಲಿದೆ.

ಕರ್ನಾಟಕದಲ್ಲಿ ಡೆಲವರಿ ಕಾರ್ಯನಿರ್ವಹಿಸುತ್ತಿರವವರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. 18 ರಿಂದ 60 ವರ್ಷದೊಳಿಗಿನ ಕಾರ್ಮಿಕರು ಆಧಾರ್ ಸಂಖ್ಯೆ, ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ, ವೇತನ ಚೀಟಿ, ವೇತನ ಪಡೆದ ಬ್ಯಾಂಕ್ ಪಾಸ್‌ಬುಕ್ ಹಾಗೂ ಇ-ಶ್ರಮ್ ಕಾರ್ಡ್ ಈ ಎಲ್ಲ ದಾಖಲೆಗಳೊಂದಿಗೆ ನೊಂದಣಿ ಮಾಡಿಕೊಳ್ಳಬಹುದು.

ಆದಾಯ ತೆರಿಗೆ ಪಾವತಿಸುವವರು ಹಾಗೂ ಇ.ಎಸ್.ಐ ಫಲಾನುಭವಿಗಳಿಗೆ ಯೋಜನೆ ಅನ್ವಯಿಸುವುದಿಲ್ಲ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾರ್ಮಿಕ ಅಧಿಕಾರಿ, ಕಾರ್ಮಿಕ ನಿರೀಕ್ಷಕರ ಕಛೇರಿಗೆ ಭೇಟಿ ನೀಡಬಹುದು. ಕಚೇರಿ ದೂರವಾಣಿ ಸಂಖ್ಯೆ 08194-231394 ಹಾಗೂ ಕಾರ್ಮಿಕ ಸಹಾಯವಾಣಿ 155214 ಕರೆ ಮಾಡಬಹುದು.

 

Advertisement
Tags :
accidentchitradurgacompensation!Medical FacilityPaper Distributorsschemesuddioneಅಪಘಾತ ಪರಿಹಾರಚಿತ್ರದುರ್ಗಪತ್ರಿಕಾ ವಿತರಕರುವೈದ್ಯಕೀಯ ಸೌಲಭ್ಯ ಯೋಜನೆಸುದ್ದಿಒನ್
Advertisement
Next Article