Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಟಿ. ನುಲೇನೂರು ಎಂ.ಶಂಕ್ರಣ್ಣನವರಿಗೆ ನುಡಿನಮನ : ನವೆಂಬರ್ 21 ರಂದು ನೆನಪು ಕಾರ್ಯಕ್ರಮ

05:30 PM Nov 19, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ನ. 19 : ಚಿತ್ರದುರ್ಗ ನೆಲದ ಹೋರಾಟಗಳ ಸಂಗಾತಿ, ವೈಯಕ್ತಿಕ ಬದುಕಿನ ಎಲ್ಲಾ ಸಂಕಷ್ಟಗಳ ನಿರ್ವಹಣೆ ಜೊತೆಗೆ ಹೋರಾಟಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದ ಶಂಕ್ರಣ್ಣ ಎಂದಿಗೂ ಹೆಗಲ ಮೇಲಿನ ಹಸಿರು ಶಾಲಿಗೆ ಚ್ಯುತಿ ಬಾರದಂತೆ ನಡೆದುಕೊಂಡರು. ಈ ಹಿನ್ನಲೆಯಲ್ಲಿ ಅವರ ನೆನಪಿನ ಕಾರ್ಯಕ್ರಮವೊಂದು ಕರ್ನಾಟಕ ರಾಜ್ಯ ರೈತ ಸಂಘದ ಅಡಿಯಲ್ಲಿ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ.

 

Advertisement

ನವೆಂಬರ್ 21 ನೇ ಗುರುವಾರ ಬೆಳಿಗ್ಗೆ 11 ಕ್ಕೆ ಡಿ.ಸಿ.ಆಫಿಸ್ ಹಿಂಭಾಗದ ಪತ್ರಿಕಾ ಭವನದಲ್ಲಿ ಟಿ. ನುಲೇನೂರು ಎಂ.ಶಂಕ್ರಣ್ಣನವರ ನೆನಪು ಕಾರ್ಯಕ್ರಮ ನಡೆಯಲಿದೆ. ಟಿ. ನುಲೇನೂರು ಎಂ.ಶಂಕ್ರಣ್ಣ, ಚಿತ್ರದುರ್ಗ ನೆಲದ ಹೋರಾಟಗಳ ಸಂಗಾತಿ, ನೆಲ, ಜಲ, ರೈತರ ಸಮಸ್ಯೆಗಳು ಎದುರಾದಾಗಲೆಲ್ಲ ಪರಿಹಾರದ ನಿಟ್ಟಿನಲ್ಲಿ ಕಾರ್ಯತತ್ವರತೆ ಅವರ ಮುಖ್ಯ ಗುಣವಾಗಿತ್ತು. ಯಾವುದೇ ಹೋರಾಟಗಳನ್ನು ನಿರ್ಣಾಯಕ ಹಂತಕ್ಕೆ ಒಯ್ದು ತಾರ್ಕಿಕ ಅಂತ್ಯ ನೀಡುವುದು ಅವರ ಗುಣವಾಗಿತ್ತು. ವೈಯಕ್ತಿಕ ಬದುಕಿನ ಎಲ್ಲಾ ಸಂಕಷ್ಟಗಳ ನಿರ್ವಹಣೆ ಜೊತೆಗೆ ಹೋರಾಟಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದ ಶಂಕ್ರಣ್ಣ ಎಂದಿಗೂ ಹೆಗಲ ಮೇಲಿನ ಹಸಿರು ಶಾಲಿಗೆ ಚ್ಯುತಿ ಬಾರದಂತೆ ನಡೆದುಕೊಂಡರು.

 

ಚಿತ್ರದುರ್ಗ ನೆಲದಲ್ಲಿ ನಡೆದ ಎಲ್ಲಾ ಹೋರಾಟಗಳಿಗೂ ಅವರ ನಾಯಕತ್ವವಿತ್ತು, ರೈತ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಸಂಘಟನೆಗೆ ಪ್ರವೇಶಿಸಿದ ಶಂಕ್ರಣ್ಣ ರಾಜ್ಯ ಪ್ರಧಾನ ಕಾರ್ಯದರ್ಶಿಯಂತಹ ಜವಾಬ್ದಾರಿಯುತ ಹುದ್ದೆ ನಿರ್ವಹಿಸಿದರು. ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷರಾಗಿಯೂ ಹೋರಾಟ ಮುನ್ನಡೆಸಿದರು. ನೇರ ರೈಲು ಮಾರ್ಗದ ಹೋರಾಟದಲ್ಲಿಯೂ ಅದರ ಹೆಜ್ಜೆ ಗುರುತುಗಳಿದ್ದವು. ಹೋರಾಟದ ಬಿರುಸು ನಡಿಗೆಯಲ್ಲಿ ಸಾಗುವಾಗಲೇ 2023ರ ನವೆಂಬರ್ 21ಕ್ಕೆ ನಮ್ಮನ್ನು ಅಗಲಿದರು.

 

ಎಣೆಯಿಲ್ಲದ ಜೀವನ ಪ್ರೀತಿ, ಸ್ನೇಹಪರತೆ, ಸಮಚಿತ್ತದ ನಡೆನುಡಿಯಿಂದ ಅಪಾರ ಸ್ನೇಹಿತರು, ಹೋರಾಟಗಾರ ಮಿತ್ರರ ಸಾಂಗತ್ಯಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದ ಶಂಕ್ರಣ್ಣ ನಿಜಾರ್ಥದಲ್ಲಿ ಆಜಾತ ಶತ್ರುವಾಗಿದ್ದುರು. ತಮ್ಮ ಹೋರಾಟ, ಬದುಕಿನಲ್ಲಿ ಹಲವು ತೆರನಾದ ಸಮಸ್ಯೆ, ಸವಾಲುಗಳು ಬಾಧಿಸುತ್ತಿದ್ದಾಗಲೂ ಎಲ್ಲವನ್ನೂ ಹಸನ್ಮುಖಿಯಾಗಿಯೇ ಎದುರಿಸಿದವರು. ಕೆಲ ರೈತ ಹೋರಾಟಗಾರರಲ್ಲಿ ಕಂಡುಬರುವ ಗತ್ತು ಗೈರತ್ತು, ಒಂದು ಬಗೆಯ ಆಕ್ರಮಣಕಾರಿ ಸ್ವಭಾವ ಶಂಕರಣ್ಣನ ಹತ್ತಿರ ಸುಳಿಯಲೇ ಇಲ್ಲ. ಸಾಮಾನ್ಯವಾದ, ಸೀದಾಸಾದಾ ರೈತಾಪಿ ಮನಸ್ಥಿತಿಯ ಧೋರಣೆ ಅವರ ವ್ಯಕ್ತಿತ್ವದ ಭಾಗವೇ ಆಗಿ ಹೋಗಿತ್ತು.ಮೆಲುಧ್ವನಿಯ ನಾಯಕತ್ವ ಅವರು ಕೊನೆಯವರೆಗೂ ಜನಸಾಮಾನ್ಯ ರೈತರ ನಾಯಕವಾಗಿಯೇ ಉಳಿದರು. ಶಂಕ್ರಣ್ಣ ನಮ್ಮನ್ನು ಆಗಲಿ ಇಂದಿಗೆ ಒಂದು ವರ್ಷವಾಗಲಿದೆ‌.

 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರಪ್ಪ ವಹಿಸಲಿದ್ದಾರೆ.   ಮುಖ್ಯ ಅತಿಥಿಗಳಾಗಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಕಾರ್ಯಾ ಧ್ಯಕ್ಷ  ಬಿ.ಎ. ಅಂಗಾರೆಡ್ಡಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗೈ, ಗೋವಿಂದರಾಜು, ಜೆ. ಯಾದಬೆರೆಡ್ಡಿ, ಸರ್ವೋದಯ ಕರ್ನಾಟಕ ಕಮಲಮ್ಯ ನುಲೇನೂರು ಎಂ. ಶಂಕರಪ್ಪ ರಾಜ್ಯ ಮಹಿಳಾ ಉಪಾಧ್ಯಕ್ಷರು ಮಂಜುಳ ಹಕ್ಕಿ, ಹಂಪಯ್ಯನಮಾಳಿಗೆ ಧನಂಜಯ, ಕೆ.ಪಿ. ಭೂತಯ್ಯ,ಚಿಕ್ಕಪ್ಪನಹಳ್ಳಿ ಹಣ್ಣುಖ,ಕೆ.ಸಿ. ಹೊರಕೇರಪ್ಪ.ಮಂಜುನಾಥ ಚಳ್ಳಕೆರೆ ಜಾನುಕೊಂಡ ಸಿದ್ದೇಶ್ ಮುದ್ದಾಪುರ ನಾಗಣ್ಣ ಶಿವನಕೆರೆ ಮಂಜಣ್ಣ ಚಂದ್ರಣ್ಣ ರವಿ ಕೋಗುಂಡೆ ಸಜ್ಜನಕೆರೆ ರೇವಣ್ಣ ಜೆ.ಎನ್.ಕೋಟೆ ಓಂಕಾರಪ್ಪ ಹುಣಸೆಕಟ್ಟೆ ಕಾಂತರಾಜ್ ಜೆ.ಎನ್.ಕೋಟೆ ನಿಂಗಪ್ಪ ಕರಿಬಸಣ್ಣ ಸಿದ್ದಣ್ಣ ತಮಟಕಲ್ಲು ಕಲ್ಪನಾ, ಲಕ್ಷ್ಮೀ, ನಿತ್ಯಶ್ರೀ, ಶಶಿಕಲಾ ಹಿರಿಯೂರು ಸುಧಾ, ಡಿ.ಎಸ್.ಹಳ್ಳಿ ಓ.ಟಿ. ತಿಪ್ಪೇಸ್ವಾಮಿಕಲ್ಲೇನಹಳ್ಳಿ ಕುಮಾರ್‍ಪ್ರಭು ಇಸಾಮುದ್ರಬೇಡರೆಡ್ಡಿಹಳ್ಳಿ, ಬಸವರೆಡ್ಡಿ ಮಲ್ಲಾಪುರ ತಿಪ್ಪೇಸ್ವಾಮಿ ಚಿಕ್ಕಪ್ಪನಹಳ್ಳಿ ರುದ್ರಸ್ವಾವಿಹಂಪಣ್ಣ ಚಳ್ಳಕೆರೆಮಂಜುನಾಥ ಮೊಳಕಾಲ್ಕೂರು ಶಿವಕುಮಾರ್ ಬ್ಯಾಡರಹಳ್ಳಿ ಭಾಗವಹಿಸಲಿದ್ದಾರೆ.

Advertisement
Tags :
bengaluruchitradurgakannadaKannadaNewssuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಟಿ. ನುಲೇನೂರು ಎಂ.ಶಂಕ್ರಣ್ಣನೆನಪು ಕಾರ್ಯಕ್ರಮಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article