ಚಿತ್ರದುರ್ಗದ ಆಶಾಕಿರಣ ಸಂಸ್ಥೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ : ಕಳೆದ 13 ವರ್ಷದಲ್ಲಿ 800 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಸುದ್ದಿಒನ್, ಚಿತ್ರದುರ್ಗ ಅ.06 : ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ನಮ್ಮ ಸಂಸ್ಥೆಯ ಗುರಿಯಾಗಿದೆ. ಇಲ್ಲಿ ಸಹಾಯ ಪಡೆದವರು ಮುಂದಿನ ದಿನದಲ್ಲಿ ಬೇರೆಯವರಿಗೆ ಸಹಾಯವನ್ನು ಮಾಡುವುದರ ಮೂಲಕ ಸಮಾಜದ ಋಣವನ್ನು ತೀರಿಸುವಂತೆ ಆಶಾಕಿರಣ ಸಂಸ್ಥೆಯ ಆಧ್ಯಕ್ಷರಾದ ಗೀರೀಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಚಿತ್ರದುರ್ಗ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಶಾಕಿರಣ ಸಂಸ್ಥೆಯವತಿಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಶಾಕಿರಣ ಸಂಸ್ಥೆಯು ಸರ್ಕಾರದ ಯಾವುದೇ ಸಹಾಯವಿಲ್ಲದೆ ನಗರದ 13 ಜನ ಸೇರಿ ನಿರ್ಮಾಣ ಮಾಡಿದ ಸಂಸ್ಥೆಯಾಗಿದೆ. ನಾವು ಸಮಾಜದಿಂದ ಸಹಾಯವನ್ನು ಪಡೆದಿದ್ದೇವೆ ನಾವು ಸಮಾಜಕ್ಕೆ ಏನಾದರೂ ಸಹಾಯವನ್ನು ಮಾಡಬೇಕೆಂಬ ಆಲೋಚನೆಯಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಇಲ್ಲಿ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರು ಪದವಿ ಪಡೆಯುವವರೆಗೂ ಸಹಾ ಸಹಾಯವನ್ನು ಮಾಡಲಾಗುವುದು ಇದುವರೆವೆಗೂ ಸುಮಾರು 800 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಲಾಗಿದೆ ಎಂದರು.
ಎಸ್.ಎಸ್.ಎಲ್.ಸಿ. ಮುಗಿದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಓದಲು ಆರ್ಥಿಕ ನೆರವಿಲ್ಲದೆ ಕಷ್ಠ ಪಡುತ್ತಾರೆ, ಇಂತಹವರನ್ನು ಗುರುತಿಸಿ ಅವರಿಗೆ ಸಹಾಯವನ್ನು ಮಾಡಲಾಗುತ್ತದೆ. ನಾವು ನೀಡುವ ಸಹಾಯಧನವನ್ನು ಯಾವುದೇ ಜಾತಿ, ಧರ್ಮ, ಲಿಂಗ ಬೇಧ, ಜನಾಂಗದ ಲೆಕ್ಕಾಚಾರ ಇಲ್ಲದೆ ಅರ್ಜಿಯನ್ನು ಸಲ್ಲಿಸಿದವರ ಅರ್ಥಿಕ ಪರಿಸ್ಥಿತಿಯನ್ನು ಪರೀಶೀಲಿಸಿ ಸಹಾಯಧನವನ್ನು ನೀಡಲಾಗುವುದು. ಪ್ರತಿಯೊಂದು ವರ್ಷದ ಪರೀಕ್ಷೆಯಲ್ಲಿ ಶೇ.70 ರಷ್ಟು ಫಲಿತಾಂಶ ಬಂದರೆ ಮಾತ್ರ ಮುಂದಿನ ವರ್ಷದ ಸಹಾಯಧನವನ್ನು ಪಡೆಯಲು ಅರ್ಹರಿರುತ್ತಾರೆ. ಇದ್ದಲ್ಲದೆ ವಿದ್ಯಾರ್ಥಿಗಳಿಗೆ ವರ್ಷಕ್ಕೋಮ್ಮೆ ಬಿಡ್ಜ್ ಕೋರ್ಸನ್ನು ಹಮ್ಮಿಕೊಳ್ಳಲಾಗುವುದು ಇದರಲ್ಲಿ ವಿದ್ಯಾರ್ಥಿಗಳಿಗೆ ಉಪಯಕ್ತವಾಗುವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ 4 ದಿನಗಳ ಕಾಲ ವಸತಿ ಸಹಿತ ತರಬೇತಿಯನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಲಾಗುವುದೆಂದರು.
ಆಶಾಕಿರಣ ಸಂಸ್ಥೆಯ ನಿರ್ದೇಶಕರಾದ ಮಹೇಶ್ ಮಾತನಾಡಿ, ಈ ಸಂಸ್ಥೆ ಸ್ಥಾಪನೆಯಲ್ಲಿ ನಮ್ಮ ಯಾವುದೆ ನಿರ್ದೇಶಕರ ಸ್ವಾರ್ಥ ಇಲ್ಲ ಎಲ್ಲರು ಸಹಾ ನಿಸ್ವಾರ್ಥವಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರಗತಿಗೆ ಸಹಾಯವನ್ನು ಮಾಡುವ ಉದ್ದೇಶದಿಂದ ಕಳೆದ 13 ವರ್ಷದಿಂದ ಈ ಕೆಲಸವನ್ನು ಮಾಡಲಾಗುತ್ತಿದೆ. ನಾವು ಕೂಡುವಂತ ಸಹಾಯಧನವನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ, ಶಿಕ್ಷಣ ಮಾತ್ರವಲ್ಲದೆ ನಿಮ್ಮ ಇತರೆ ಸಮಸ್ಯೆಗಳನ್ನು ಸಹಾ ನಮ್ಮ ಬಳಿ ಹೇಳಿದರೆ ಅದಕ್ಕೆ ಪರಿಹಾರವನ್ನು ನೀಡುವ ಕಾರ್ಯವನ್ನು ಮಾಡಲಾಗುವುದೆಂದರು.
ಮತ್ತೋರ್ವ ನಿರ್ದೆಶಕರಾದ ಮಧುಪ್ರಸಾದ್ ಮಾತನಾಡಿ, ನಮ್ಮ ಸಂಸ್ಥೆ ಚನ್ನಾಗಿ ಓದುವವರಿಗೆ ಸಹಾಯವನ್ನು ಮಾಡುವುದರ ಮೂಲಕ ಪ್ರೋತ್ಸಾಹವನ್ನು ನೀಡಲಿದೆ. ನೀವೇಲ್ಲಾ ಆಶಾಕಿರಣದ ಕುಟುಂಬ ಇದ್ದ ಹಾಗೇ, ಸಮಯಕ್ಕೆ ಹೆಚ್ಚಿನ ವಹತ್ವವನ್ನು ನೀಡಿ ವಿನಾಕಾರಣ ಕಾಲಹರಣ ಮಾಡಬೇಡಿ, ತಮ್ಮ ಪಾಲಿನ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿ ಇದರಿಂದ ಮುಂದೆ ನಿಮ್ಮ ಪ್ರಗತಿಯನ್ನು ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮೃಣಾಲಿನಿ, ಎಂ.ಪಿ.ಗುರುರಾಜ್ ಮಾತನಾಡಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸಲಹೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಿಂದ ಹಿಡಿದು ಪದವಿಯವರೆಗೂ ಸುಮಾರು 65 ವಿದ್ಯಾರ್ಥಿಗಳಿಗೆ ಸುಮಾರು 8 ಲಕ್ಷ ರೂ.ಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಆಶಾಕಿರಣ ಸಂಸ್ಥೆಯ ನಿರ್ದೇಶಕರುಗಳಾದ ಕೇಶವಮೂರ್ತಿ, ಪ್ರವೀಣ್, ಪ್ರಸನ್ನ ಕುಮಾರ್, ನಾಗರಾಜ್, ರವಿಶಂಕರ್, ಹೇಮಂತ ರೆಡ್ಡಿ, ರಮೇಶ್, ಭಾನುಕಿರಣ್, ದಿವಾಕರ, ಸಿದಾರ್ಥ ವೆಂಕಟೇಶ್ ಉಪಸ್ಥಿತರಿದ್ದರು. ಶ್ರೀಮತಿ ಮಾಧುರಿ ಮಧುಪ್ರಸಾದ್ ಪ್ರಾರ್ಥಿಸಿದರೆ, ಮಹೇಶ್ ಸ್ವಾಗತಿಸಿದರು.