Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅನ್ನ, ಆರೋಗ್ಯ ಸಿಗುವ ಶಿಕ್ಷಣ ನೀಡುವವನೆ ಶ್ರೇಷ್ಠ ಶಿಕ್ಷಕ : ಡಾ.ವಿಕ್ರಮ್ ಹಿರೇಮಠ್

04:35 PM Jul 24, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ.24  : ಅನ್ನ, ಆರೋಗ್ಯ ಸಿಗುವ ಶಿಕ್ಷಣ ನೀಡುವವನೆ ನಿಜವಾದ ಶ್ರೇಷ್ಟ ಶಿಕ್ಷಕ ಎಂದು ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಬಳ್ಳಾರಿಯ
ಡಾ.ವಿಕ್ರಮ್ ಹಿರೇಮಠ್ ತಿಳಿಸಿದರು.

Advertisement

ದಾವಣಗೆರೆ ವಿಶ್ವವಿದ್ಯಾನಿಲಯ, ಪಿಳ್ಳೆಕೆರನಹಳ್ಳಿ ಸಮೀಪವಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧುವಾರ ನಡೆದ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ತೊಡಗಿಸುವುದು ಹೇಗೆ ಎನ್ನುವ ವಿಷಯದ ಬಗ್ಗೆ ಬಿ.ಇ.ಡಿ. ಎರಡನೆ ಹಾಗೂ ನಾಲ್ಕನೆ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳನ್ನು ಕುರಿತು ಮಾತನಾಡಿದರು.

ಶಿಕ್ಷಕನಾಗಿ ಸಂಬಳ ಪಡೆದುಕೊಳ್ಳುವುದು ಮುಖ್ಯವಲ್ಲ. ಮಕ್ಕಳಿಗೆ ಜ್ಞಾನ ಉಣಬಡಿಸುವವನು ಅತ್ಯುತ್ತಮ ಶಿಕ್ಷಕನಾಗಿ ಎಲ್ಲರ ಮನದಲ್ಲಿ ಉಳಿಯಲು ಸಾಧ್ಯ. ಗುರುಗಳ ಬಗ್ಗೆ ನಿರುತ್ಸಾಹ, ಅಗೌರವ ವಿದ್ಯಾರ್ಥಿಗಳಲ್ಲಿ ಜಾಸ್ತಿಯಾಗುತ್ತಿದೆ. ಭಾಷ ಶಿಕ್ಷಕರಿಗೆ ಸ್ಪಷ್ಟವಾಗಿ ಮಾತನಾಡುವ ಕೌಶಲ್ಯವಿರಬೇಕು. ಜ್ಞಾನ ಬೆಳೆಯಬೇಕಾದರೆ ಬೇರೆಯವರಿಗೆ ಹಂಚಬೇಕು ಎಂದು ಹೇಳಿದರು.

ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ತರಗತಿಯಲ್ಲಿರುವಂತೆ ಆಕರ್ಷಿಸುವ ಗುರುತರ ಜವಾಬ್ದಾರಿ ಜಾಣ್ಮೆ ಶಿಕ್ಷಕರಲ್ಲಿರಬೇಕು. ಇಂಜಿನಿಯರ್ ತಪ್ಪು ಮಾಡಿದರೆ ಒಂದು ಕಟ್ಟಡ ಕುಸಿಯಬಹುದು, ವೈದ್ಯ ತಪ್ಪು ಮಾಡಿದರೆ ಒಂದು ಜೀವ ಹೋಗಬಹುದು, ಅದೇ ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಒಂದು ಜನಾಂಗವೇ ಸರ್ವ ನಾಶವಾಗುತ್ತದೆ. ಜ್ಞಾನ ನೀಡುವ ಶಿಕ್ಷಕನನ್ನು ವಿದ್ಯಾರ್ಥಿಗಳು ಜೀವನವಿಡಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ವಿದ್ಯಾರ್ಥಿಗಳಲ್ಲಿ ಗುರಿಯಿರಬೇಕು. ಜೊತೆಗೆ ಪಾಠ ಕೇಳುವ ತಾಳ್ಮೆ ಜಾಣ್ಮೆಯೂ ಬೇಕು. ಯಾರಲ್ಲಿ ವಿದ್ವತ್ ಗೌರವವಿರುತ್ತದೆ ಅಂತಹವರಿಗೆ ಎಲ್ಲರೂ ನಮಿಸುತ್ತಾರೆ. ಶಿಕ್ಷಕ ನಿಂತ ನೀರಾಗಬಾರದು ಹರಿಯುವ ನದಿಯಂತಿರಬೇಕು. ಪ್ರತಿನಿತ್ಯ ಓದುವ ಮೂಲಕ ಕೌಶಲ್ಯ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಹಿಡಿದು ಶಿಕ್ಷಕರುಗಳಲ್ಲಿಯೂ ಮೌಲ್ಯಗಳು ಕುಸಿಯುತ್ತಿವೆ. ರಾಜಕಾರಣಿಗಳನ್ನು ಎಲ್ಲರೂ ದೂಷಿಸುತ್ತಾರೆ. ಆದರೆ ಸಮಾಜದಲ್ಲಿನ ಅಂಕು-ಡೊAಕು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿಯಿರುವುದು ರಾಜಕಾರಣಿಗಳಿಗೆ ಮಾತ್ರ ಎನ್ನುವುದನ್ನು ಮರೆಯಬಾರದು ಎಂದರು.

ಪುರುಷ ಪ್ರದಾನ ಸಮಾಜವೆಂದು ಕರೆಯಲಾಗುತ್ತಿದೆಯೇ ವಿನಃ ಗಂಡಿನ ಭವಣೆಯನ್ನು ಯಾರು ಕೇಳುತ್ತಿಲ್ಲ. ಸಮಾಜ ತಿದ್ದುವ ಅವಕಾಶ ನಿಮಗೆ ಸಿಕ್ಕಿರುವುದನ್ನು ಸರಿಯಾಗಿ ಬಳಸಿಕೊಂಡು ಆದರ್ಶ ಶಿಕ್ಷಕರುಗಳಾಗಿ ಎಂದು ಬಿ.ಇ.ಡಿ. ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಮಾತನಾಡಿ ನಮ್ಮ ಸಂಸ್ಥೆಯಲ್ಲಿದ್ದ ರಂಗ ಕಲಾವಿದ ಅಶೋಕ್‌ಬಾದರದಿನ್ನಿರವರ ಸಲಹೆಯಂತೆ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮವೆಂದು ಹೆಸರಿಟ್ಟು ಅಂದಿನಿAದ ಇಲ್ಲಿಯವರೆಗೂ ಪ್ರತಿ ತಿಂಗಳು ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವುದು ಇದರ ಉದ್ದೇಶ. ವಿದ್ಯಾರ್ಥಿಗಳಲ್ಲಿ ಜ್ಞಾನ ವೃದ್ದಿಸುವ ಉದ್ದೇಶ ಇದಾಗಿದೆ. ಗುರು-ಶಿಷ್ಯರ ಸ್ಥಾನಕ್ಕೆ ಮಹತ್ವವಿದೆ. ಪ್ರತಿಯೊಂದು ವಿಷಯದ ಬಗ್ಗೆ ಅಧ್ಯಯನ ನಡೆಸಿದಾಗ ಜ್ಞಾನಶಕ್ತಿ ಹೆಚ್ಚುತ್ತದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಹೆಚ್.ಎನ್.ಶಿವಕುಮಾರ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ವೇದಿಕೆಯಲ್ಲಿದ್ದರು.

Advertisement
Tags :
bengaluruchitradurgaDr. Vikram HirematheducationfoodGreat teacherhealthsuddionesuddione newsಅನ್ನಆರೋಗ್ಯಚಿತ್ರದುರ್ಗಡಾ.ವಿಕ್ರಮ್ ಹಿರೇಮಠ್ಬೆಂಗಳೂರುಶಿಕ್ಷಣಶ್ರೇಷ್ಠ ಶಿಕ್ಷಕಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article