For the best experience, open
https://m.suddione.com
on your mobile browser.
Advertisement

ಮನೆಯ ಆವರಣದಲ್ಲಿ ಗಾಂಜಾ ಗಿಡ ಪತ್ತೆ, ಅಧಿಕಾರಿಗಳ ದಾಳಿ, ಅರೋಪಿ ಪರಾರಿ

08:30 AM Jan 11, 2024 IST | suddionenews
ಮನೆಯ ಆವರಣದಲ್ಲಿ ಗಾಂಜಾ ಗಿಡ ಪತ್ತೆ  ಅಧಿಕಾರಿಗಳ ದಾಳಿ  ಅರೋಪಿ ಪರಾರಿ
Advertisement

ವರದಿ ಮತ್ತು ಫೋಟೋ ಕೃಪೆ                             ಸುರೇಶ್ ಬೆಳಗೆರೆ,                                                    ಮೊ : 97398 75729

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.11 : ಮನೆಯ ಕಾಂಪೌಂಡ್‌ನಲ್ಲಿ ಬದನೆಕಾಯಿ ಗಿಡಗಳ ಮಧ್ಯದಲ್ಲಿ ಹೂ, ತೆನೆ, ಕಾಂಡ ಬೀಜಗಳಿಂದ ಕೂಡಿದ ಒಂದು ಹಸಿ ಗಾಂಜಾ ಗಿಡ ಬೆಳೆಸಿದ್ದ ಎನ್ನುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇನ್ಸ್ಪೆಕ್ಟರ್ ಸಿ. ನಾಗರಾಜು ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಈ ವೇಳೆ ಆರೋಪಿ ಪರಾರಿಯಾದ ಘಟನೆ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಸವಿಗೊಂಡನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಆಂಜನೇಯ (55) ಪರಾರಿಯಾದ ಆರೋಪಿ.

Advertisement

ಮನೆಯ ಮುಂದಿನ ಭಾಗದ ಬದನೆ ಗಿಡದಲ್ಲಿ ಗಾಂಜಾ ಗಿಡವನ್ನು ಬೆಳೆಸಲಾಗಿದ್ದು ಗಾಂಜಾ ದ ಗಿಡವನ್ನು ಬೇರು ಸಮೇತ ತೂಕ ಮಾಡಲಾಗಿದ್ದು 1.510 ಕೆ.ಜಿ‌ತೂಕವಿದ್ದು ಇದು ಸುಮಾರು 30,000 ರೂ ಬೆಲೆ ಬಾಳುತ್ತದೆ ಎಂದು ಅಬಕಾರಿ‌ ನಿರೀಕ್ಷಕ ನಾಗರಾಜ್ ತಿಳಿಸಿದ್ದಾರೆ. ಮನೆ ಮುಂದೆ ಗಾಂಜಾ ಬೆಳೆದ ಆರೋಪಿ ಆಂಜನೇಯ ಪರಾರಿಯಾಗಿದ್ದು ಅಬಕಾರಿ ಅಧಿಜಾರಿಗಳು ಪ್ರಕರಣ ದಾಖಲಿಸಿಕೊಂಡು.
ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

Advertisement
Advertisement

ಚಿತ್ರದುರ್ಗ ಅಬಕಾರಿ ಉಪ ಆಯುಕ್ತರು, ರವರ ನಿರ್ದೇಶನ ಹಾಗೂ ಅಬಕಾರಿ ಉಪ‌ ಅಧೀಕ್ಷಕರು, ಹಿರಿಯೂರು ರವರ‌ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದೆ. ಈ ದಾಳಿ ವೇಳೆ ಅಬಕಾರಿ  ನಿರೀಕ್ಷಕ ನಾಗರಾಜು.ಸಿ.ಅಬಕಾರಿ ,ಉಪ  ನಿರೀಕ್ಷಕರಾದ ರಂಗಸ್ವಾಮಿ-ಡಿ.ತಿಪ್ಪಯ್ಯ,  ಚಳ್ಳಕೆರೆ ವಲಯ
ಮತ್ತು ಅಬಕಾರಿ ಮುಖ್ಯ ಪೇದೆ ಎಸ್.ರಘುನಾಥ ಮತ್ತು‌ಅಬಕಾರಿ ಪೇದೆಗಳಾದ ಎನ್.ನಾಗರಾಜ,
ಟಿ.ಸೋಮಶೇಖರ,ಎನ್ ಶಾಂತಣ್ಣ ಇದ್ದರು.

Advertisement
Tags :
Advertisement