For the best experience, open
https://m.suddione.com
on your mobile browser.
Advertisement

ಚಳ್ಳಕೆರೆಯಲ್ಲಿ ಮತದಾನ ಮಾಡಿದ ಶತಾಯುಷಿ

09:21 AM Apr 26, 2024 IST | suddionenews
ಚಳ್ಳಕೆರೆಯಲ್ಲಿ ಮತದಾನ ಮಾಡಿದ ಶತಾಯುಷಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆ  ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಯುವಕ - ಯುವತಿಯರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮತ ಚಲಾಯಿಸುತ್ತಿದ್ದಾರೆ.  ವೃದ್ದರು ನಡೆಯಲು ಆಗದೇ ಇದ್ದರೂ ಕೂಡಾ ವೀಲ್​ಚೇರ್​ನಲ್ಲಿ ಬಂದು ಮತ ಚಲಾಯಿಸಿದ್ದಾರೆ.

Advertisement
Advertisement

ಚಳ್ಳಕೆರೆ ನಗರದಲ್ಲಿ 102 ,ವರ್ಷದ ಶತಾಯುಷಿ ಅಜ್ಜಿ ಮೆಹಬೂಬಿ ತನ್ನ ಇಳಿ ವಯಸ್ಸಿನಲ್ಲಿಯೂ ಮನೆಯಿಂದ ಮತ ಕೇಂದ್ರದವರಿಗೂ ನಡೆದುಕೊಂಡು ಬಂದು ಮತ ಚಲಾಯಿಸಿದ್ದಾರೆ.

ನಗರದ ಗಾಂಧಿನಗರದಲ್ಲಿ ಮಗಳು ಹಾಗೂ ಅಳಿಯ ಇವರ ಜತೆಯಲ್ಲಿ ವಾಸ ಮಾಡುತ್ತಿರುವ ಈ ಶತಾಯುಷಿ ಮೆಹಬೂಬಿ ತನ್ನು  ಅಳಿಯ ಮಗಳು ಜತೆ ನಗರದ ಕೃಷಿ ಇಲಾಖೆ ಮತ ಗಟ್ಟೆ ಕೆಂದ್ರಕ್ಕೆ ನಡೆದುಕೊಂಡು ಬಂದ ತನ್ನ ಹಕ್ಕನ ಚಲಾಯಿಸಿದರು.

ಮೆಹಬೂಬಿಗೆ ಈಗಾ 102 ವರ್ಷಗಳ ಕಳೆದಿವೆ. ಕಣ್ಣು ಚೆನ್ನಾಗಿಯೆ ಕಾಣುತ್ತವೆ, ಕಿವಿಗಳು ಸಹ ಚೆನ್ನಾಗಿ ಕೇಳುತ್ತಿವೆ.

ಈ ವೇಳೆ ಶತಾಯುಷಿ  ವೃದ್ದೆಯ ಜತೆ ಅಳಿಯ ಸೈಯದ್ ಸರ್ವರ್, ಮಗಳು ಬೇಗಂ ಉನ್ನಿಸಾ, ಮೊಮ್ಮಗ ಸೈಹಾದ್ ಅಹಮದ್ ಮೊಮ್ಮಗಳು ನಜ್ಮ ಕೌಸರ್ ಸಹ ಮತದಾನ ಮಾಡಿದರು.

Advertisement
Tags :
Advertisement