For the best experience, open
https://m.suddione.com
on your mobile browser.
Advertisement

ದಾವಣಗೆರೆಯಲ್ಲಿ 7ನೇ ರಾಜ್ಯ ಮಹಿಳಾ ಸಮ್ಮೇಳನ : ಶ್ರೀಮತಿ ಶಾಂತ ಹೇಳಿಕೆ

06:46 PM Dec 27, 2023 IST | suddionenews
ದಾವಣಗೆರೆಯಲ್ಲಿ 7ನೇ ರಾಜ್ಯ ಮಹಿಳಾ ಸಮ್ಮೇಳನ   ಶ್ರೀಮತಿ ಶಾಂತ ಹೇಳಿಕೆ
Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 27 : ದಾವಣಗೆರೆಯಲ್ಲಿ 2024 ಜನವರಿ 6 ಮತ್ತು 7 ರಂದು ಎ.ಐ.ಎಂ.ಎಸ್.ಎಸ್. 7ನೇ ರಾಜ್ಯ ಮಹಿಳಾ ಸಮ್ಮೇಳನ ನಡೆಯಲಿದೆ ಎಂದು  ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ (ಎ.ಐ.ಎಂ.ಎಸ್.ಎಸ್.)ನ ರಾಜ್ಯ ಜಂಟಿ ಕಾರ್ಯದರ್ಶಿ ಶ್ರೀಮತಿ ಶಾಂತ ತಿಳಿಸಿದ್ದಾರೆ.

Advertisement
Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ(ಎಐಎಂಎಸ್‍ಎಸ್), ನೊಂದ ಮಹಿಳೆಯರ ಧ್ವನಿಯಾಗಿ ದೇಶದಾದ್ಯಂತ ಹೊರಾಟಗಳನ್ನು ಸಂಘಟಿಸುತ್ತಾ ಬಂದಿದೆ. ಹೋರಾಟದ ಮುಂದುವರಿದ ಭಾಗವಾಗಿಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಿ! ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಖಚಿತಪಡಿಸಿ!! ದುಡಿಯುವ ಮಹಿಳೆಯರಿಗೆ ಕನಿಷ್ಠ ವೇತನ, ಸೇವಾ ಭದ್ರತೆ ಖಾತ್ರಿ ಪಡಿಸಿ!!! ಈ ಘೋಷ ವಾಕ್ಯಗಳೊಂದಿಗೆ ದಾವಣಗೆರೆಯಲ್ಲಿ 7ನೇ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ ಎಂದರು.

Advertisement

ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಇಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಹಸುಳೆ ವೃದ್ಧೆಯೆನ್ನದೆ ಅತ್ಯಾಚಾರ, ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ, ಮರ್ಯಾದೆಗೇಡು ಹತ್ಯೆ, ಗುಂಪು ಅತ್ಯಾಚಾರಗಳು, ಆಸಿಡ್ ದಾಳಿ, ಕೌಟುಂಬಿಕ ದೌರ್ಜನ್ಯ, ಶಿಶು ಹತ್ಯೆ... ಹೀಗೆ ಪಟ್ಟಿ ಬೆಳೆಯತ್ತಲೇ ಹೋಗುತ್ತದೆ. ಇಂತಹ ಅಮಾನವೀಯ ದಾಳಿಗಳು ನಡೆಯಲು ಕಾರಣ ಸಾಮಾಜಿಕ ಸಾಂಸ್ಕøತಿಕ ಕ್ಷೇತ್ರದಲ್ಲಿನ ಅಧಃಪತನ, ಪುರುಷ ಪ್ರಧಾನ ಮನೋಭಾವ, ಪ್ರಜಾತಾಂತ್ರಿಕ ಮೌಲ್ಯಗಳ ಅಭಾವ, ಹಳೆಯ ಪ್ರತಿಗಾಮಿ ಊಳಿಗಮಾನ್ಯ ಮೌಲ್ಯಗಳ ಪ್ರಭಾವ. ಇವುಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲತೆ, ವಿಕೃತತೆ, ಮನರಂಜನೆಯ ಹೆಸರಿನಲ್ಲಿ ಕ್ರೌರ್ಯ, ಹಿಂಸೆಗಳುಳ್ಳ ಸಿನಿಮಾಗಳ ಪ್ರಭಾವ, ಮೊಬೈಲ್‍ಗಳಲ್ಲಿ ವ್ಯಾಪಕವಾಗಿ ಇರುವ ರೀಲ್ಸ್ ಸಮಸ್ಯೆಗಳನ್ನು ಇನ್ನೂ ಸಂಕೀರ್ಣಗೊಳಿಸುತ್ತಿವೆ. ಅಲ್ಲದೆ ಆರ್ಥಿಕ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಬಡತನ, ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆಗಳು ಪುರುಷರೊಂದಿಗೆ ಮಹಿಳೆಯರನ್ನೂ ಕಂಗೆಡಿಸುತ್ತಿವೆ. ಈ ಎಲ್ಲಾ ಸಮಸ್ಯೆಗಳ ವಿರುದ್ಧ ರಾಜ್ಯದಾದ್ಯಂತ ಎ.ಐ.ಎಂ.ಎಸ್.ಎಸ್. ಹೋರಾಟಗಳನ್ನು ಬೆಳೆಸುತ್ತಾ ಬಂದಿದೆ.

Advertisement
Advertisement

ಮಹಿಳಾ ವಿಮುಕ್ತಿಯ ಅಂತಿಮ ಗುರಿಗಳಾದ ಸ್ವಾತಂತ್ರ್ಯ, ಸಮಾನತೆಯನ್ನು ಗಳಿಸಲು ಸಮಾಜದ ಮೂಲಭೂತ ಬದಲಾವಣೆಯನ್ನು ಪೂರೈಸಿ ನವ ಸಮಾಜದ ನಿರ್ಮಾಣ ಮಾಡಬೇಕಾಗಿದೆ. ಇಂತಹ ಉದಾತ್ತ ಕಾರ್ಯದಲ್ಲಿ ಎಲ್ಲಾ ಸ್ತರದ ಮಹಿಳೆಯರನ್ನು ಸಂಘಟಿಸುತ್ತಿರುವ ಎ.ಐ.ಎಂ.ಎಸ್.ಎಸ್. ತನ್ನ 7ನೇ ರಾಜ್ಯ ಸಮ್ಮೇಳನಕ್ಕೆ ಮುನ್ನುಗ್ಗುತ್ತಿದೆ.

ದಿನಾಂಕ 6 ಮತ್ತು 7 ಜನವರಿ 2024 ರಂದು ದಾವಣಗೆರೆಯಲ್ಲಿ ನಡೆಯಲಿರುವ ಈ ರಾಜ್ಯ ಸಮ್ಮೇಳನದ ಬಹಿರಂಗ ಸಭೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಲಿದ್ದಾರೆ. ಪ್ರತಿನಿಧಿ ಸಭೆಗೆ 800 ಮಹಿಳೆಯರು ಭಾಗವಹಿಸಲಿದ್ದಾರೆ. ಈ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಶ್ರೀಮತಿ. ಅನುರಾಧ ಪಿ.ಎಂ. ಅವರ ಅಧ್ಯಕ್ಷತೆಯಲ್ಲಿ ಇನ್ನೂ ಅನೇಕ ಗಣ್ಯರನ್ನು ಒಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.

ಈ ಸಂದರ್ಭದಲ್ಲಿ ಎ.ಐ.ಎಂ.ಎಸ್.ಎಸ್.ನ ಜಿಲ್ಲಾ ಸಂಚಾಲಕರಾದ ಶ್ರೀಮತಿ ಸುಜಾತ ಡಿ, ಸಹಸಂಚಾಲಕರಾದ ಶ್ರೀಮತಿ ಕುಮದ,ಸದಸ್ಯರು ಗಿರಿಜಮ್ಮ ಉಪಸ್ಥಿತರಿದ್ದರು.

Advertisement
Tags :
Advertisement