Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78 ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮ

04:24 PM Aug 15, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 15 :  ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಮತ್ತು ಮಹಾನ್ ನಾಯಕ ರಾಗುವವರಿದ್ದಾರೆ. ಡಾಕ್ಟರ್, ಇಂಜಿನಿಯರ್ ಗಳಾಗುವುದರ ಜೊತೆಗೆ ದೇಶದ ಸೇವೆಯನ್ನು ಮಾಡಿ. ನಾವು ಸಂತೋಷವಾಗಿ ಇರಲು ಕಾರಣ ನಮ್ಮ ಗಡಿನಾಡಿನ ಯೋಧರು ಎಂದು ಶಾಲೆಯ ಅಧ್ಯಕ್ಷರಾದ ರೋಟೆರಿಯನ್ ಪಿಎಚ್‌ಎಫ್ ಎಂ.ಕೆ.ರವೀಂದ್ರ ಹೇಳಿದರು.

Advertisement

ನಗರದ ಬಿ.ಎಲ್.ಗೌಡ ಲೇಔಟ್ ನಲ್ಲಿರುವ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು 78ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹನವನ್ನು ನೆರವೇರಿಸಿ ಅವರು ಮಾತನಾಡಿದರು.

ಪುಟಾಣಿ ಮಕ್ಕಳಿಂದ ವಿವಿಧ ಸ್ವಾತಂತ್ರ‍್ಯ ಹೋರಾಟಗಾರರ ವೇಷವನ್ನು ಧರಿಸಿ ಪ್ರದರ್ಶನ ನೀಡಿದರು. ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಪಾರಿತೋಷಕ ವಿತರಿಸಲಾಯಿತು.

Advertisement

ಪೂರ್ವ ಪ್ರಾಥಮಿಕ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಕುಮಾರಿ ನಿಖಿತಾ ಮತ್ತು ಕುಮಾರಿ ಲಕ್ಷ್ಮಿ ರವರು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸ್ವಾತಂತ್ರ ದಿನಾಚರಣೆಯ ಕುರಿತು ಭಾಷಣ ಮಾಡಿದರು. ಪಥಸಂಚಲನಕ್ಕೆ ತಂಡದ ಪರಿಚಯವನ್ನು 5ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶಿಫಾನ ಖಾನಂ ಪರಿಚಯಿಸಿ ಕೊಟ್ಟರು.

ಹಿತೇಶ್ ಜಿ.ಟಿ ಸಜ್ಜನ್ ರವರು ಸ್ವಾತಂತ್ರ ಹೋರಾಟಗಾರರ ಹೆಸರುಗಳನ್ನು ಪರಿಚಯ ಮಾಡಿಕೊಟ್ಟರು. ನಂತರ ಪ್ರಕೃತಿ ಶಾಲೆಯ ವಿದ್ಯಾರ್ಥಿಗಳಿಂದ ದೇಶ ಭಕ್ತಿ, ದೇಶ ಪ್ರೇಮವನ್ನುಂಟು ಮಾಡುವ ವಿಶೇಷ ಪ್ರಾತ್ಯಕ್ಷಿಕೆ ಹಾಗೂ ನೃತ್ಯ ಎಲ್ಲರ ಕಣ್ಮನ ಸೆಳೆಯಿತು. ದೀಕ್ಷ ಮತ್ತು ತಂಡದವರು ದೇಶಭಕ್ತಿ ಗೀತೆಯನ್ನು ಹಾಡಿದರು. ಐದನೇ ತರಗತಿ ವಿದ್ಯಾರ್ಥಿನಿಯಾದ ಕೃತಿಕಾ. ಎ ಅವರು ವಂದೇ ಮಾತರಂ ಗೀತೆಯ ಗಿಟಾರ್ ವಾದನವನ್ನು ನುಡಿಸಿದರು.

ಐದನೇ ತರಗತಿಯ ವಿದ್ಯಾರ್ಥಿನಿ ಶ್ರೀನಿಧಿ ಪ್ರಾರ್ಥನೆಯನ್ನು ಮತ್ತು ಸಹ ಶಿಕ್ಷಕಿ ಶ್ರೀಮತಿ ರೇಣುಕಾರವರು ಎಲ್ಲರನ್ನು ಸ್ವಾಗತಿಸಿದರು. ಪ್ರಸ್ತಾವಿಕ ನುಡಿಯನ್ನು ಸಹ ಶಿಕ್ಷಕರಾದ ಶ್ರೀಮತಿ ಸುಮನ ರವರು ಮಾಡಿದರು. ವಂದನಾರ್ಪಣೆಯನ್ನು  ಕಾರ್ಯದರ್ಶಿ ಕಾರ್ತಿಕ್ . ಎಂ. ಮಾಡಿದರು.

ಕಾರ್ಯಕ್ರಮದ ನಂತರ 120 ಚದುರದ ಬೃಹತ್ ತ್ರಿವರ್ಣ ಧ್ವಜಯನ್ನು ಹೊತ್ತು ಮೆರವಣಿಗೆ ಮೂಲಕ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಸಂಪರ್ಕಿಸಿದರು. ಎಲ್ಲಾ ಮಕ್ಕಳಿಗೂ ಸಿಹಿ ವಿತರಿಸುವ ಮೂಲಕ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

Advertisement
Tags :
78 ನೇ ಸ್ವಾತಂತ್ರ‍್ಯ ದಿನಾಚರಣೆ78th Independence Day CelebrationbengaluruchitradurgaPrakruthi english medium Primary Schoolsuddionesuddione newsಚಿತ್ರದುರ್ಗಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಬೆಂಗಳೂರುಸಂಭ್ರಮಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article