Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ 75ನೇ ಗಣರಾಜ್ಯೋತ್ಸವ ಆಚರಣೆ

02:41 PM Jan 26, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 26: ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಭಾರತೀಯರಿಗೆ ಸಮಾನತೆ, ಸ್ವತಂತ್ರತೆ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರ ಹಕ್ಕುಗಳು ದೊರೆಯುವಂತೆ  ಮಾಡಿದ್ದರಿಂದ ಭಾರತದಲ್ಲಿ ಅಸಮಾನತೆಯ ಮುಸುಕು ಕಳೆದು ಸಮಾಜದಲ್ಲಿ ಏಕತೆಯ ಬೆಳಕು ಮೂಡಿತು. ಗಣರಾಜ್ಯೋತ್ಸವದ 75ನೇ ವರ್ಷಾಚರಣೆಯ ಈ ಸಂಧರ್ಭದಲ್ಲಿ ಸಂವಿಧಾನವನ್ನು ಓದಿ  ಅರಿಯುವುಸು ಮತ್ತು ಇತರರಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ಧಾರಿಯಾಗಿದೆ ಎಂದು ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಯೋಗ ಗುರು ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಭಾರತ ಗಣರಾಜ್ಯೋತ್ಸವದ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ನಗರದ ಬ್ಯಾಂಕ್ ಕಾಲೋನಿ ಯೋಗ ಶಾಖೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಧೇಶಿಸಿ ಅವರು ಮಾತನಾಡಿರು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ಧ ಮದಕರಿಪುರ ಶಾಲಾ ಶಿಕ್ಷಕಿ ಶ್ರೀಮತಿ ನಾಗಲತಾ ಮಾತನಾಡಿ ಗಣರಾಜ್ಯೋತ್ಸವವು ಭಾರತವನ್ನು ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ಸಾರ್ವಭೌಮ ರಾಷ್ಟ್ರವಾಗಿ ಪರಿವರ್ತಿಸುವ ಚಲಿಸುವ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿ ವರ್ಷ ಜನವರಿ 26 ರಂದು ಆಚರಿಸಲಾಗುವ ಈ ದಿನವು ಬಹಳ ಮಹತ್ವದ್ದಾಗಿದೆ ಏಕೆಂದರೆ ಇದು ಭಾರತೀಯ ಸಂವಿಧಾನವು 1950 ರಲ್ಲಿ ಜಾರಿಗೆ ಬಂದ ದಿನವನ್ನು ಸ್ಮರಿಸಲಾಗುತ್ತದೆ ಹಾಗೂ ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ರವರು ನೀಡಿದ ಸವಿಂದಾನದ ಆಶಯವನ್ನು ಎತ್ತಿ ಹಿಡಿಯುವ ದಿನವಾಗಿದೆ ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂತ ಜೋಸೇಫರ ಶಾಲೆಯ ಶಿಕ್ಷಕಿ ಶ್ರೀಮತಿ ತ್ರಿವೇಣಿ ಮಾತನಾಡಿ ಭಾರತ ದೇಶ ಸ್ವಾತಂತ್ರ್ಯಗೊಂಡ ಸಂಧರ್ಭದಲ್ಲಿ ಅಸಮಾನತೆಯಿಂದ ಅದ್ಧೋಗತಿಗೆ ತಲುಪಿದ್ಧ ಮಹಿಳೆಯರ ಸ್ಥಿತಿಗಳನ್ನು, ದೌರ್ಜನ್ಯಗಳನ್ನು, ಶೋಷಣೆಗಳನ್ನು ಕಡಿಮೆ ಮಾಡಲು ನಮ್ಮ ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನವಾಗಿ ಬದುಕಲು, ಶಿಕ್ಷಣ ಪಡೆಯಲು ಐಎಎಸ್, ಕೆಎಎಸ್ ನೌಕರಿಯನ್ನು ಪಡೆಯಲು, ಡಾಕ್ಟರ್, ಇಂಜಿನಿಯರಿಂಗ್, ಪೈಲೆಟ್, ಎಂಎಲ್‌ಎ, ಎಂಪಿ, ಡಿಸಿ, ಎಸಿ, ಆಗಲು ಡಾ. ಬಿ.ಆರ್. ಅಂಬೇಡ್ಕರ್‌ರ ಸಂವಿಧಾನ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದ್ಧರಿಂದ ಪ್ರತಿಯೊಬ್ಬ ಮಹಿಳೆಯೂ ಸಂವಿಧಾನವನ್ನು ಓದಿ ತಿಳಿಯಬೇಕು ಎಂದು ತಿಳಿಸಿದರು

ಹಿರಿಯ ಯೋಗ ಸಾಧಕಿ ಶ್ರೀಮತಿ ವನಜಾಕ್ಷಮ್ಮ ಸೇರಿದಂತೆ ಸದಸ್ಯರಾದ  ರೇಣುಕಮ್ಮ, ಅನಸೂಯ, ಕುಮುದ, ಶೈಲಜಾ, ಸವಿತಾ, ರೂಪಾ ಮೀನಾಕ್ಷಿ, ಸುಮಾ, ಸುಧಮ್ಮ, ಕುಮುದಾ, ಭಾಗ್ಯಾ, ನಾಗರತ್ನ, ಗೀತಾ ಇನ್ನಿತರರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜಿಸಿ, ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದರು.

Advertisement
Tags :
75th Republic Day Celebration75ನೇ ಗಣರಾಜ್ಯೋತ್ಸವ ಆಚರಣೆchitradurgayoga Education Institute of Indiaಚಿತ್ರದುರ್ಗಭಾರತೀಯ ಯೋಗ ಶಿಕ್ಷಣ ಸಂಸ್ಥೆ
Advertisement
Next Article