Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “75ನೇ ಗಣರಾಜ್ಯೋತ್ಸವ ದಿನಾಚರಣೆ

02:47 PM Jan 26, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.26 : ಇಂದಿಗೆ ಸಂವಿಧಾನ ರಚನೆಯಾಗಿ 75 ವಸಂತಗಳನ್ನು ಪೂರೈಸಿದ್ದೇವೆ. ಈ ಸುದಿನಕ್ಕಾಗಿ ಹಲವಾರು ಮಹನೀಯರು ಸಂವಿಧಾನ ರಚಿಸುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಅದನ್ನು ಮುಂದುವರೆಸಿಕೊಂಡು  ಹೊಗಬೇಕಾಗಿರುವುದು ಈಗಿನ ಪೀಳಿಗೆ ಅಂದರೆ ವಿದ್ಯಾರ್ಥಿಗಳಾದ  ನಿಮ್ಮ  ಕೈಯಲ್ಲಿದೆ.  ದೇಶ ಪ್ರೇಮ ಕೇವಲ ರಾಷ್ಟ್ರೀಯ  ಹಬ್ಬಗಳಿಗೆ ಅಷ್ಟೇ ಸೀಮಿತವಾಗದೆ ಪ್ರತಿ ದಿನ, ಪ್ರತಿ ಕ್ಷಣ ನಿಮ್ಮ ಹೃದಯದಲ್ಲಿ ನೆಲೆಯಾಗಬೇಕು ಎಂದು ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯಕುಮಾರ್ ಹೇಳಿದರು.

Advertisement

ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ  ಆಚರಿಸಲಾಯಿತು.” ಈ ಸಂದರ್ಭದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಂಸ್ಥೆಯ ಶಿಕ್ಷಕಿ ಎಲ್.ಆರ್.ಉಷಾ ದಿನದ ವಿಶೇಷತೆ ಕುರಿತು ಮಾತನಾಡುತ್ತಾ ಸಂವಿಧಾನ ರಚನೆಯಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅಲ್ಲದೇ ಜನವರಿ 26 ರಂದೇ ಸಂವಿಧಾನ ಜಾರಿಗೊಳಿಸುವಲ್ಲಿ ಜನವರಿ.26.  1929 ರಂದು ಲಾಹೋರ್ ಅಧಿವೇಶನದಲ್ಲಿ ಜವಹರಲಾಲ್ ನೆಹರೂ ಅಧ್ಯಕ್ಷತೆಯಲ್ಲಿ ಘೋಷಣೆಯಾದ  “ಸಂಪೂರ್ಣ ದಿನ”  ಅದರ ಸವಿ ನೆನಪಿಗಾಗಿ  ಈ ಸಂವಿಧಾನ  ಜಾರಿಗೊಳಿಸಲಾಯಿತು. ಈ ದಿನಕ್ಕಾಗಿ  ಹಲವಾರು ದೇಶ  ಭಕ್ತರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

Advertisement

ಕಾರ್ಯಕ್ರಮವನ್ನು  ಶಿಕ್ಷಕಿ ಎಸ್.ವಿ.ಭಾಗೀರಥಿ ನಿರೂಪಿಸಿದರು, ಶಿಕ್ಷಕಿ ಹೆಚ್ ತ್ರಿವೇಣಿ ಸ್ವಾಗತಿಸಿದರು, ಶಿಕ್ಷಕಿ ಕವಿತಾ ಎನ್ ವಂದಿಸಿದರು ಶಿಕ್ಷಕಿ ಜ್ಯೋತಿ.ಹೆಚ್.ಪಿ  ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಎಸ್.ಎಂ ಪೃಥ್ವೀಶ್, ಶೈಕ್ಷಣಿಕ ಆಡಳಿತಾಧಿಕಾರಿ ಡಾ||.ಸ್ವಾಮಿ.ಕೆ.ಎನ್ ಶಾಲೆಯ ಮುಖ್ಯೋಪಾಧ್ಯಾಯರಾದ ಸಂಪತ್ ಕುಮಾರ್.ಸಿ.ಡಿ,  ಐಸಿಎಸ್‍ಸಿ ಪ್ರಾಚಾರ್ಯರಾದ ಬಸವರಾಜಯ್ಯ.ಪಿ ಮಹೇಶ್ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಶ್ರೀ.ಕೆಂಚನ ಗೌಡ, ಮತ್ತು ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಹಾಗೂ ಮಹೇಶ್.ಪಿ.ಯು ಕಾಲೇಜಿನ ಶಿಕ್ಷಕ/ಶಿಕ್ಷಕೇತರ ವರ್ಗ ಹಾಗೂ ಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement
Tags :
75th Republic Day Celebration75ನೇ ಗಣರಾಜ್ಯೋತ್ಸವ ದಿನಾಚರಣೆchitradurgaVidya Vikas Vidya instituteಚಿತ್ರದುರ್ಗವಿದ್ಯಾ ವಿಕಾಸ ವಿದ್ಯಾ ಸಂಸ್ಥೆ
Advertisement
Next Article