ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜ. 26 : ನಮ್ಮ ದೇಶದಲ್ಲಿ ವಿವಿಧ ಜಾತಿ, ಧರ್ಮೀಯರು ಭಾಷೆಯನ್ನು ಮಾತನಾಡುವವರನ್ನು ವಿವಿಧ ರೀತಿಯ ವೃತ್ತಿಯಲ್ಲಿರುವವರಿಗೆ ಒಗ್ಗಟಾಗಿ ಇರಲು ಸಂವಿಧಾನ ಕಾರಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎಂ.ಕೆ.ತಾಜ್ ಪೀರ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ನೇರವೇರಿಸಿ ಮಾತನಾಡಿದ ಅವರು, ಇಂದು ನಾವು 75ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದೆವೆ. ಕಳೆದ 2023ರಲ್ಲಿ 75ನೇ ಸ್ವಾತಂತ್ರಯ ದಿನಾಚರಣೆಯನ್ನು ಆಚರಣೆ ಮಾಡಿದ್ದೇವೆ ಇದು ನಮ್ಮ ಸೌಭಾಗ್ಯವಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದು ಕಾಂಗ್ರೆಸ್ ಪಕ್ಷವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಹೋರಾಟವನ್ನು ಮಾಡಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ.ಸ್ವಾತಂತ್ರ್ಯ ಬಂದ ನಂತರ 1950ರಲ್ಲಿ ಬಾಬಾ ಸಾಹೇಬೆ ಅಂಬೇಡ್ಕರ್ ರವರು ಸಂವಿಧಾನ್ನು ನೀಡಿದರು ಅದನ್ನು ಒಪ್ಪಿಕೊಂಡು ಸಂವಿಧಾನದಡಿಯಲ್ಲಿ ನಾವು ಜೀವನವನ್ನು ನಡೆಸುತ್ತೇವೆ ಇದು ನಮ್ಮ ದೇಶಕ್ಕೆ ಕೊಡುಗೆಯಾಗಿದೆ. ಎಂದು ತಿಳಿಸಲಾಗಿದೆ.ಮುಂದಿನ ಪೀಳೀಗೆಯನ್ನು ಸಹಾ ನಮ್ಮ ಸಂವಿಧಾನ ಅಡಿಯಲ್ಲಿ ರಕ್ಷಣೆಯನ್ನು ನೀಡುವಂತಾಗಬೇಕಿದೆ. ಅದನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ ಇದೆ. ಎಂದು ತಾಜ್ ಪೀರ್ ತಿಳಿಸಿದರು.
ಈಗ ಸಂವಿಧಾನವನ್ನು ಬುಡದಿಂದ ತೆಗೆಯುವ ಹುನ್ನಾರ ಈಗ ದೇಶದಲ್ಲಿ ನಡೆಯುತ್ತಿದೆ ಆದರೆ ಇದರಲ್ಲಿ ಯಾರು ಸಹಾ ಯಶಸ್ವಿಯಾಗುವುದಿಲ್ಲ, ಅಂಬೇಡ್ಕರ್ ನೀಡಿರುವ ಸಂವಿದಾನದಲ್ಲಿ ಬದಲಾವಣೆ ಮಾಡಬೇಕಾದರೂ ಸಹಾ ಅದನ್ನು ಸಂವಿಧಾನದ ಅಡಿಯಲ್ಲಿಯೇ ಮಾಡಬೇಕಿದೆ. ಹೂರಗಿನಿಂದ ಮಾಡಲು ಸಾಧ್ಯವಿಲ್ಲ, ಇದರಿಂದ ನಮ್ಮ ಸಂವಿಧಾನ ದೇಶ ಮಾತ್ರವಲ್ಲ ಪ್ರಪಂಚದಲ್ಲ್ಲಿಯೇ ಶ್ರೇಷ್ಠವಾದ ಸಂವಿಧಾನವಾಗಿದೆ.ಸಂವಿಧಾನವನ್ನು ನಮ್ಮ ಮುಂದಿನ ಪೀಳೆಗೆಗೆ ಸಹಾ ಮುಂದುವರೆಸಿಕೊಂಡು ಹೋಗುವಂತ ಕಾರ್ಯಾವಾಗಬೇಕಿದೆ. ಇದಕ್ಕೆ ಎಲ್ಲರ ಪ್ರೇರಣೇ ನೀಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಹೆಚ್.ಅಂಜನೇಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಮೈಲಾರಪ್ಪ, ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿ ಗೌಡ, ಮಾಜಿ ಅಧ್ಯಕ್ಷರಾದ ಫಾತ್ಯರಾಜನ್, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ನರಸಿಂಹರಾಜು, ಮುದಸಿರ್, ಲಕ್ಷ್ಮೀಕಾಂತ್, ಅಲ್ಲಾಭಕ್ಷಿ, ಶ್ರೀಮತಿ ಜಯ್ಯಮ್ಮ, ಲೋಕೇಶ್, ಸೈಯದ್ ಆಫಾಖ್ ಆಹ್ಮಮದ್, ಮೋಕ್ಷ ರುದ್ರಸ್ವಾಮಿ ಸೇರಿದಂತೆ ಇತರೆ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು,
ತದ ನಂತರ ಗಾಂಧಿಜೀ ಮತ್ತು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಟ ನಮನವನ್ನು ಸಲ್ಲಿಸಲಾಯಿತು.