Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ 71.41 ಲಕ್ಷ ಹಣ ಸಂಗ್ರಹ

09:27 PM May 24, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ,
ಮೊ : 97398 75729

ಸುದ್ದಿಒನ್,ಚಿತ್ರದುರ್ಗ, ಮೇ. 24 :  ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಐತಿಹಾಸಿಕ ನಾಯಕನಹಟ್ಟಿ ಶ್ರೀ ಗುರುತಿಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಹಣದ ಎಣಿಕೆ ಕಾರ್ಯವನ್ನು ಶುಕ್ರವಾರ ದೇವಾಲಯದ ಆವರಣದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ ರೇಹಾನ್ ಪಾಷ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಾರ್ಯನಿರ್ವಾಣಧಿಕಾರಿ ಎಚ್. ಗಂಗಾಧರಪ್ಪ. ಮತ್ತು ಬ್ಯಾಂಕ್ ಅಧಿಕಾರಿಗಳ ಸಹಯೋಗದಲ್ಲಿ ನಡೆಯಿತು.

Advertisement

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಣಧಿಕಾರಿ ಎಚ್. ಗಂಗಾಧರಪ್ಪ ಮಾತನಾಡಿ ಜಿಲ್ಲಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ಹುಂಡಿ ಎಣಿಕೆ ಸಿದ್ಧಪಡಿಸಿದ್ದು ಈ ವರ್ಷ ವಾರ್ಷಿಕ ಜಾತ್ರೆ ಮಾರ್ಚ್ 26 ರಂದು ನಡೆಯಿತು. ಲೋಕಸಭಾ ಚುನಾವಣೆ ಇದ್ದುದರಿಂದ ಒಂದು ತಿಂಗಳು ಲೇಟಾಗಿ ಹುಂಡಿ ಎಣಿಕೆ ಮಾಡಲಾಗಿದೆ. ಕಳೆದ ವರ್ಷ 72 ಲಕ್ಷ ಆಗಿತ್ತು ಈ ವರ್ಷವೂ ಸಹ 65 ರಿಂದ 70 ಲಕ್ಷ ನಿರೀಕ್ಷೆಯಲ್ಲಿ ಇದ್ದೇವೆ. ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಈ ಹಣವನ್ನು ಬಳಸಲಾಗುವುದು ಎಂದರು.

ಮೊದಲು ಹೂರಮಠ ದೇವಾಲಯದಲ್ಲಿ ಮುಜರಾಯಿ ಹಾಗೂ ಕಂದಾಯ ಇಲಾಖೆಯ ತಹಶೀಲ್ದಾರ್ ರೇಹಾನ್ ಪಾಷ, ಹಾಗೂ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ ನೇತೃತ್ವದಲ್ಲಿ ಕಾಣಿಕೆ ಹುಂಡಿ ಏಣಿಕೆ ಕಾರ್ಯ ನಡೆಯಿತು.

ಹೊರಮಠದಲ್ಲಿ  ₹ 19,53,575 ಲಕ್ಷ , ಒಳಮಠದಲ್ಲಿ ₹  51,87,750 ಲಕ್ಷ  ಸಂಗ್ರಹವಾಗಿ ಒಟ್ಟಾರೆಯಾಗಿ ನಾಲ್ಕು ತಿಂಗಳ ಅವಧಿಯಲ್ಲಿ ₹   71,41,325 ಲಕ್ಷ ಸಂಗ್ರಹವಾಗಿದೆ.

ಹಣವನ್ನು ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು. ಹೊರಮಠ ಮತ್ತು ಒಳಮಠಗಳ ಹುಂಡಿಯಲ್ಲಿ ಹಲವು ಬೆಳ್ಳಿ ನಾಣ್ಯಗಳು ಬೆಳ್ಳಿ ತೊಟ್ಟಿಲುಗಳು ಬೆಳ್ಳಿ ಆಭರಣಗಳು ಕಂಡು ಬಂದವು.

Advertisement
Tags :
71.41 lakhs collected71.41 ಲಕ್ಷ ಹಣ ಸಂಗ್ರಹbengaluruchitradurgaNayakanahattiSri Guru Tipperudraswamy Templesuddionesuddione newsಚಿತ್ರದುರ್ಗದೇವಸ್ಥಾನದ ಹುಂಡಿನಾಯಕನಹಟ್ಟಿಬೆಂಗಳೂರುಶ್ರೀ ಗುರು ತಿಪ್ಪೇರುದ್ರಸ್ವಾಮಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article