For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಜಿಲ್ಲೆಯಲ್ಲಿ 664.91 ಹೆಕ್ಟೇರ್ ಕೃಷಿ ಬೆಳೆ ನಾಶ

05:38 PM Oct 24, 2024 IST | suddionenews
ಚಿತ್ರದುರ್ಗ   ಜಿಲ್ಲೆಯಲ್ಲಿ 664 91 ಹೆಕ್ಟೇರ್ ಕೃಷಿ ಬೆಳೆ ನಾಶ
Advertisement

ಚಿತ್ರದುರ್ಗ.24: ಜಿಲ್ಲೆಯಲ್ಲಿ ಅಕ್ಟೋಬರ್ ಮಾಹೆಯಲ್ಲಿ ಬಿದ್ದಂತಹ ಹೆಚ್ಚಿನ ಮಳೆಯಿಂದಾಗಿ ಬೆಳೆಹಾನಿಯಾಗಿದ್ದು, ಜಿಲ್ಲೆಯಾದ್ಯಂತ 664.91 ಹೆಕ್ಟೇರ್‍ಗಳಷ್ಟು ಪ್ರದೇಶದಲ್ಲಿ ಬೆಳೆಹಾನಿಯಾಗಿರುವುದಾಗಿ ಸರ್ಕಾರಕ್ಕೆ ವರದಿ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Advertisement

ಚಿತ್ರದುರ್ಗ ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳಾದ ಮೆಕ್ಕೆಜೋಳ-102397 ಹೆಕ್ಟೇರ್, ಶೇಂಗಾ-107013 ಹೆಕ್ಟೇರ್, ರಾಗಿ-44398 ಹೆಕ್ಟೇರ್, ಸಿರಿಧಾನ್ಯಗಳು-30486 ಹೆಕ್ಟೇರ್, ತೊಗರಿ-21024 ಹೆಕ್ಟೇರ್, ಹತ್ತಿ-8177 ಹೆಕ್ಟೇರ್ ಮತ್ತು ಇನ್ನಿತರೆ ಬೆಳೆಗಳನ್ನೊಳಗೊಂಡಂತೆ ಒಟ್ಟು 3,19,007 ಹೆಕ್ಟೇರ್ ಪ್ರದೇಶಲ್ಲಿ ಕೃಷಿ ಬೆಳೆಗಳ ಬಿತ್ತನೆಯಾಗಿದೆ.

ಜಿಲ್ಲೆಯಾದ್ಯಂತ ಹಲವು ದಿನಗಳಿಂದ ಬಿದ್ದಂತಹ ಮಳೆಯಿಂದಾಗಿ ಜಿಲ್ಲೆಯಲ್ಲಿ ಶೇಂಗಾ-237.60 ಹೆಕ್ಟೇರ್, ಮೆಕ್ಕೆಜೋಳ-311.60 ಹೆಕ್ಟೇರ್, ತೊಗರಿ- 77.40 ಹೆಕ್ಟೇರ್, ಹತ್ತಿ-16.80 ಹೆಕ್ಟೇರ್, ರಾಗಿ- 10.40 ಹೆಕ್ಟೇರ್, ಸಜ್ಜೆ- 3.51 ಹೆಕ್ಟೇರ್, ಭತ್ತ - 1.60 ಹೆಕ್ಟೇರ್ ಹಾಗೂ ಇತರೆ ಬೆಳೆಗಳನ್ನೊಳಗೊಂಡಂತೆ ಒಟ್ಟಾರೆ 664.91 ಹೆಕ್ಟೇರ್‍ಗಳಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Tags :
Advertisement