For the best experience, open
https://m.suddione.com
on your mobile browser.
Advertisement

ಹೊಳಲ್ಕೆರೆ : ಖಾಸಗಿ ಶಾಲೆಯ 6 ಮಕ್ಕಳು ನಾಪತ್ತೆ..!

04:50 PM Aug 21, 2024 IST | suddionenews
ಹೊಳಲ್ಕೆರೆ   ಖಾಸಗಿ ಶಾಲೆಯ 6 ಮಕ್ಕಳು ನಾಪತ್ತೆ
Advertisement

ಚಿತ್ರದುರ್ಗ: ಜಿಲ್ಲೆಯ ಪೋಷಕರು ಶಾಕ್ ಆಗುವಂತ ಘಟನೆಯೊಂದು ಬೆಳಕಿಗೆ ಬಂದಿದೆ. ಎಸ್ಎಸ್ಎಲ್ಸಿ ಓದುತ್ತಿದ್ದ ಆರು ಮಕ್ಕಳು ಶಾಲೆಯಿಂದಾನೇ ನಾಪತ್ತೆಯಾಗಿರುವ ಘಟನರ ಹೊಳಲ್ಕೆರೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

Advertisement
Advertisement

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಓದುತ್ತಿದ್ದ ಆರು ಜನ ಮಕ್ಕಳ ಇಂದು ನಾಪತ್ತೆಯಾಗಿದ್ದಾರೆ. ಈ ಸುದ್ದಿ ಜಿಲ್ಲೆಯಾದ್ಯಂತ ಆತಂಕ ಹುಟ್ಟಿಸಿದೆ. ಶಾಲೆಯಿಂದ ಇದ್ದಕ್ಕಿದ್ದ ಹಾಗೇ ಮಕ್ಕಳು ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆ ಕಾಡುತ್ತಿದೆ.

ಅದರಲ್ಲೂ ಈ ಆರು ಜನ ಮಕ್ಕಳು ಒಂದೇ ತರಗತಿಯಲ್ಲಿ ಓದುತ್ತಿದ್ದರು. ಎಸ್ಎಸ್ಎಲ್ಸಿಯಲ್ಲಿ ಓದುತ್ತಿದ್ದ ಮಕ್ಕಳು ಇವರು. ಬೆಳಗ್ಗೆಯಿಂದ ಯಾರಿಗೂ ಸುಳಿವು ಸಿಗುತ್ತಿಲ್ಲ. ಆರು ಜನ ಮಕ್ಕಳು ಕೂಡ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಈಗಾಗಲೇ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಆದರೆ ಮಕ್ಕಳು ನಾಪತ್ತೆಯಾಗಿರುವುದು ವಸತಿ ಶಾಲೆಯಿಂದ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಕ್ಕಳು ಎಲ್ಲಿಯೇ ಹೋದರು ಅಲ್ಲಿನ ವಾರ್ಡನ್ ಗೆ ಮಾಹಿತಿ ನೀಡಿಯೇ ಹೋಗುತ್ತಾರೆ. ಅಥವಾ ಯಾರೇ ಒಳಗೆ ಬಂದರೂ ವಾರ್ಡನ್ ಗೆ ಮಾಹಿತಿ ಇರುತ್ತದೆ. ಆದರೆ ಹೀಗೆ ಆರು ಮಕ್ಕಳು, ಅದು ಒಂದೇ ತರಗತಿಯ ಮಕ್ಕಳು ಬೆಳಗ್ಗೆಯಿಂದ ಕಾಣಿಸುತ್ತಿಲ್ಲ ಎಂದರೆ ಆಶ್ಚರ್ಯವಾಗಿದೆ. ಮಕ್ಕಳ ಪೋಷಕರಿಗೂ ವಿಚಾರ ತಲುಪಿದ್ದು, ಮಕ್ಕಳನ್ನು ಕಾಣದೆ ಕಂಗಾಲಾಗಿದ್ದಾರೆ. ಇನ್ನು ಪೊಲೀಸರು ಹಾಗೂ ಶಾಲಾ ಆಡಳಿತ ಮಂಡಳಿ ಹುಡುಕಾಟ ನಡೆಸಿದ್ದಾರೆ.

Advertisement

Tags :
Advertisement