Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜುಲೈ 5 ರಿಂದ 11 ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ

04:19 PM Jul 03, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 02 : ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವವು ಜುಲೈ 5 ರಿಂದ 11 ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಶರಣ್ ಕುಮಾರ್ ತಿಳಿಸಿದ್ದಾರೆ.
ಐತಿಹಾಸಿಕ ಚಿತ್ರದುರ್ಗ ನಗರದ  ಮೆದೆಹಳ್ಳಿ ರಸ್ತೆಯಲ್ಲಿರುವ 350  ವರ್ಷಗಳ ಹಿಂದೆ ಪ್ರತಿಷ್ಠಾಪನೆಯ ಭೀಮಶಂಕರ ಮತ್ತು ಭೀಮಾಂಜನೇಯ ಸ್ವಾಮಿಯ  ದೇವಸ್ಥಾನದ ಆವರಣದಲ್ಲಿ ಶ್ರೀರಾಮತೀರ್ಥ ಸ್ವಾಮೀಜಿ ಸಹಕಾರದೊಂದಿಗೆ ವಾಸ್ತುಶಿಲ್ಪಿಗಳಾದ  ಕಾಸರಗೋಡಿನ ಕಮಲಕ್ಷನ್ ತಪತಿ ಪರಿಮಳಾಚಾರ್, ವಿಷ್ಣು ಭಟ್ಟಾದ್ರಿ ಪಾಡ್ ಹಾಗೂ ನಗರದ ಭಕ್ತಾದಿಗಳ ಸಹಕಾರದೊಂದಿಗೆ   ಶ್ರೀಗಣೇಶ ಶ್ರೀ ಸುಬ್ರಹ್ಮಣ್ಯ  ಶ್ರೀ ವಿಷ್ಣು ವಿಗ್ರಹಗಳು  ಶಂಕುಸ್ಥಾಪನೆ ನೆರವೇರಿಸಲಾಯಿತು

Advertisement

.ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ 20-6-1999ರಲ್ಲಿ  ಶ್ರೀ ಅಯ್ಯಪ್ಪ ಸ್ವಾಮಿ ಪಂಚಲೋಹ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಪ್ರತಿ ವರ್ಷವೂ ಸನ್ನಿಧಾನದಲ್ಲಿ ವಿಶೇಷವಾಗಿ ವಾರ್ಷಿಕೋತ್ಸವ, ಬ್ರಹ್ಮೋತ್ಸವ ಹಾಗೂ ಅಯ್ಯಪ್ಪ ಮಾಲಾಧಾರಿಗಳಿಗೆ ಉಚಿತ ಅನ್ನದಾನ ಕಾರ್ಯಕ್ರಮ ಮತ್ತು ದೀಪೋತ್ಸವ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನೆರವೇರಿಸುತ್ತಾ ಬರಲಾಗಿದೆ.


ಮೊದಲನೇ ಕುಂಭಾಭಿಷೇಕವು 2012ನೇ ಸಾಲಿನಲ್ಲಿ ನೆರವೇರಿಸಲಾಯಿತು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಿ 25 ಸಂವತ್ಸರಗಳನ್ನು ಪೂರೈಸಿದ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಗರ್ಭಗುಡಿಯ ಸುತ್ತಲೂ ತಾಮ್ರದ ಹೊದಿಕೆ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲನ್ನು ಬೆಳ್ಳಿಯ ಕವಚದಿಂದಲೂ ನಿರ್ಮಾಣ ಮಾಡಲಾಗಿದೆ.

5-7-2024ರಂದು ಕೇರಳದ ತಂತ್ರಿಗಳಾದ ವಿಷ್ಣು ಭಟ್ಟಾದ್ರಿ ಪಾಡ್  ಹಾಗೂ  ದೇವಸ್ಥಾನದ ಪ್ರಧಾನ ಅರ್ಚಕ ರಾದ ಸತೀಶ್ ಶರ್ಮ ಅವರ ಸಂಗಡಿಗರಿಂದ ಪ್ರಾತಕಾಲ ಮತ್ತು ಸಂಧ್ಯಾಕಾಲದಲ್ಲಿ ವಿಶೇಷವಾಗಿ  ದೇವಸ್ಥಾನದ ಆವರಣದಲ್ಲಿ ಆಚಾರ್ಯ ವರ್ಣಂ, ಸ್ಥಳ ಶುದ್ಧೀಕರಣ, ವಾಸ್ತುಶಾಂತಿ, ವಾಸ್ತು ಬಲಿ, ಅಂಕುರಾ ರ್ಪಣ ಪೂಜಾ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿಗಣ ಹೋಮ, ತತ್ವ ಕಲಶ ಅಭಿಷೇಕ, ಬ್ರಹ್ಮಾದಿ ಪರಿಕಲಾ ಅಭಿಷೇಕಗಳು, ಪ್ರತಿಷ್ಠ ಹೋಮ, ಕಲಶಾಭಿಷೇಕ ಹಾಗೂ ಜೀವ ಕಲಶ ಪೂಜೆ ಸೇರಿದಂತೆ ಇನ್ನು ಅನೇಕ ರೀತಿಯ ಪ್ರತಿಷ್ಠಾಪನ ಪೂಜಾ ಕೈಂಕರಗಳು ನಡೆಯಲಿವೆ.

ದಿನಾಂಕ 6-7-2024ರ ಬೆಳಿಗ್ಗೆ 6ಕ್ಕೆ ಬಿಂಬಶುದ್ದಿ, ಪ್ರೋಕ್ತಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮಗಳು, ಅರ್ಬುದ ಶಾಂತಿ ಹೋಮ, ಶ್ವಶಾಂತಿ ಹೋಮ, ಅಂಕುರ ಪೂಜೆ ಕಲಶಾಭೀಷೇಕ ಗಣಪತಿ ಅಥರ್ವ ಶಿಷ್ಯ ಹೋಮ, ಪೂರ್ಣಾವತಿ ಮಹಾ ಮಂಗಳಾರತಿ ಪೂಜೆ ನೆರವೇರುವುದು. ಸಂಜೆ 6 ರಿಂದ ಸ್ಥಳ ಶುದ್ಧಿ, ಅಂಕುರಪೂಜೆ ಹೋಮ, ಕಲಶಾಭೀಷೇಕ ನಡೆಯಲಿದ್ದು ತದ ನಂತರ 6.30ರಿಂದ ಸಭಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಸಮಾರಂಭವನ್ನು ಉದ್ಘಾಟನೆ, ಜ್ಯೋತಿಯನ್ನು ವರ್ತಕರಾದ ಉದಯಶೆಟ್ಟಿ ಬೆಳಗಲಿದ್ದಾರೆ. ಬಿಜೆಪಿ ಮುಖಂಡರಾದ ಡಾ.ಸಿದ್ದಾರ್ಥ, ಬಾಲಾಜಿ ಜ್ಯೂಯಲರಸ್ಸ್‍ನ ಲಕ್ಷ್ಮಣ್ ಸೋನಿ, ನ್ಯಾಯಾವಾದಿಗಳಾದ ಫಾತ್ಯರಾಜನ್, ಜಿಲ್ಲಾ ಆಸ್ಪತ್ರೆಯ ಬ್ರದರ್ ಮಲ್ಲಣ್ಣ, ಗುತ್ತಿಗೆದಾರರಾದ ಮಂಜುನಾಥ್, ಆರ್ಯ ಈಡಿಗರ ಸಂಘದ ಅಧ್ಯಕ್ಷರಾದ ಜೀವನ್, ಬಸವೇಶ್ವರ ಟ್ರೇಡಿಂಗ್ ಕಂಪನಿಯ ಹೆಚ್.ಕೋಟ್ರೇಶ್ ಶ್ರೇಷ್ಟಿ, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್, ಕಂಠೇಶ್ವರ ಗ್ರೋಪ್ಸ್‍ನ ಸುರೇಶ್ ಬಾಬು, ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್, ವಿದ್ಯಾನಗರದ ಎಂ.ಸಿ.ಶಂಕರ್, ಕರುನಾಡ ವಿಜಯಸೇನೆಯ ಅಧ್ಯಕ್ಷರಾದ ಕೆ.ಟಿ.ಶಿವಕುಮಾರ್ ಭಾಗವಹಿಸಲಿದ್ದಾರೆ. ಸವಿತಕ್ಕ ಬ್ಯಾಂಡ್ ಮತ್ತು ಸಂಗಡಿಗರಿಂದ ಭಕ್ತಿ ಕುಸುಮಾಂಜಲಿ ಕಾರ್ಯಕ್ರಮ ನಡೆಯಲಿದೆ.

ದಿನಾಂಕ 7-7-2024 ಭಾನುವಾರ ಬೆಳಿಗ್ಗೆ 6ಕ್ಕೆ ಚೋರಶಾಂತಿ ಹೋಮ, ತತ್ವ ಕಳಶ ಪೂಜೆ, ತತ್ವ ಹೋಮ, ಕಳಶ ಅಭಿಷೇಕ, ಬ್ರಹ್ಮ ಕಳಸ ಪೂಜೆ ಪರಿಕಳಶ ಪೂಜೆ ಹಾಗೂ ನವಗ್ರಹ ಸಂಹಿತ ಶ್ರೀ ರುದ್ರ ಹೋಮ ಪೂರ್ಣಾಹುತಿ ಮಹಾ ಮಂಗಳಾರತಿ ನೆರವೇರಲಿದೆ. ಸಂಜೆ 6-30 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತುಮಕೂರಿನ ಎಸ್.ಎ.ಎಸ್.ಎಸ್.ನ ಅಧ್ಯಕ್ಷರಾದ ಟಿ.ಬಿ.ಶೇಖರ್ ಸಮಾರಂಭವನ್ನು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಜ್ಯೋತಿ ಬೆಳಗಲಿದ್ದಾರೆ. ದಿ ಮರ್ಚೆಂಟ್ಸ್ ಬ್ಯಾಂಕ್‍ನ ಅಧ್ಯಕ್ಷರಾದ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ, ಎಸ್.ಆರ್.ಎಸ್.ವಿದ್ತಾ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್.ಲಿಂಗಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೆಶಕರಾದವ ದ್ಯಾಮಣ್ಣ, ನಿಶಾನಿ ಜಯ್ಯಣ್ಣ, ಟಿ.ಮಹಾಂತೇಶ್, ಗುರುರಾಜ ಫರ್ನಿಚರ್ಸ್‍ನ ಎಸ್.ಎನ್.ಕಾಶಿ ವಿಶ್ವನಾಥ್ ಶ್ರೇಷ್ಟಿ, ಮೇದೇಹಳ್ಳಿ ಗ್ರಾ.ಪಂ.ಸದಸ್ಯರಾದ ನಿರಂಜನ ಮೂರ್ತಿ, ಮೊತ್ಕೂರ್ ರಮೇಶ್, ಮಾಜಿ ಅಧ್ಯಕ್ಷರಾದ ವಿಜಯಕುಮಾರ್, ದೇವರಾಜ್ ಅರಸ್ ವಿದ್ಯಾ ಸಂಸ್ಥೆಯ ಎಂ.ಸಿ.ರಘುಚಂದನ್, ವಿನಾಯಕ ಪೇಂಟ್ಸ್‍ನ ಹರೀಶ್, ಶ್ರೀರಾಮ ಆಯಿಲ್ ಮಿಲ್‍ನ ಮೋಹನ್‍ರಾಜ್ ಭಾಗವಹಿಸಲಿದ್ದಾರೆ.

ದಿನಾಂಕ 8-7-2024ರ ಬೆಳಿಗ್ಗೆ 6ಕ್ಕೆ ಆದಿವಾಸಹೋಮ, ವಲಿಯ ಪಾಣಿ, ಮಹಾಕಳಶಾಭೀಷೇಕ ಪರಿಕಳಶಾಭಿಷೇಕ ಸ್ಕಂದ ಹೋಮ ಹಾಗೂ ಅಶ್ಲೇಷ ಬಲಿ ಪೂಜೆ ಮಹಾ ಮಂಗಳಾರತಿ  ಹೋಮ ನೆರವೇರುವುದು.ಸಂಜೆ 6.30ಕ್ಕೆ ನಡೆಯುವ ಸಮಾರಂಭವನ್ನು ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಜ್ಯೋತಿಯನ್ನು ಸಂಸದರಾಧ ಗೋವಿಂದ ಕಾರಜೋಳ ಬೆಳಗಲಿದ್ದಾರೆ.

ಗುತ್ತಿಗೆದಾರರಾದ ಬಲರಾಮ ರೆಡ್ಡಿ, ಐಶ್ವರ್ಯ ಪೋರ್ಟ್‍ನ ಆರುಣ್ ಕುಮಾರ್, ಮೇದೇಹಳ್ಳಿಯ ಎಂ.ರವಿಶಂಕರ್, ಬಿಜೆಪಿಯ ನಗರಾಧ್ಯಕ್ಷರಾದ ನವೀನ್ ಚಾಲುಕ್ಯ, ಎ.ವಿ.ಓ.ಪಿ.ಎಯ ಉಪಾಧ್ಯಕ್ಷರಾದ ಪಿ.ಎಲ್.ಸುರೇಶ್ ಬಾಬು, ಆದಶ್ ಟ್ರೇಡರ್ಸ್‍ನ ಪಟೇಲ್ ಶಿವಕುಮಾರ್, ಹೋಟೇಲ್ ಮಾಲಿಕರ ಸಂಘದ ಅಧ್ಯಕ್ಷರಾದ ಕೆ.ಎಸ್ ಆರುಣ್ ಕುಮಾರ್, ಭಜರಂಗದಳದ ದಕ್ಷಿಣ ಪ್ರಾಂತೀಯ ಸಂಚಾಲಕರಾಧ ಪ್ರಬಂಜನ್, ಜಯರಾಂ ಗ್ರೂಪ್ಸ್‍ನ ಮಾರುತಿ ಪ್ರಸನ್ನ, ಕ್ರೀಡಾ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಜಿ.ಎಂ.ಸುರೇಶ್, ಮಾಜಿ ಅಧ್ಯಕ್ಷರಾದ ಉಜ್ಜಿನಿಸ್ವಾಮಿ ಕಾವೇರಿ ಟ್ರೇಡರ್ಸ್ ನ ಟಿ.ರಾಮರೆಡ್ಡಿ ಭಾಗವಹಿಸಲಿದ್ದಾರೆ.

ಸಂಗೀತಗಾರರಾದ ಮಹೇಂದ್ರದಾಸ್, ರಮೇಶ್‍ಚಂದ್ರ, ಸುನೀತ್‍ಜೋಗಿರವರಿಂದ ಭಕ್ತಿ ಕುಸುಮಾಂಜಲಿ ಕಾರ್ಯಕ್ರಮ ನೆರವೇರುವುದು

ದಿನಾಂಕ 9-7-2024ರ ಬೆಳ್ಳಿಗೆ 6ಕ್ಕೆ ಸಂಹಾರ ತತ್ವ ಕಳಸ ಪೂಜೆ, ಕುಂಭೇಷ ಪೂಜೆ, ಪ್ರತಿಷ್ಠಾ ಹೋಮ, ಸಂಹಾರ ತತ್ವ ಕಳಶಾಭೀಷೇಕ ಜೀವಕಳಸ ಪೂಜೆ, ಜೀವೋದ್ವಾಸನೆ, ಲಕ್ಷ್ಮಿನಾರಾಯಣ ಹೃದಯ ಹೋಮ ಹಾಗೂ ಪೂರ್ಣಾವತಿ ಮಹಾ ಮಂಗಳಾರತಿ ಪೂಜಾ  ನೆರವೇರುವುದು.

ಸಂಜೆ 6.30ರ ಸಭಾ ಕಾರ್ಯಕ್ರಮವನ್ನು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಜ್ಯಾಧ್ಯಕ್ಷರಾದ ಎನ್.ಜಯರಾಂ ನೇರವೇರಿಸಲಿದ್ದು, ಜ್ಯೋತಿಯನ್ನು ಶಾಸಕರಾದ ಕೆ.ಸಿ.ವಿರೇಂದ್ರ ರವರು ಬೆಳಗಲಿದ್ದಾರೆ. ಮಹೇಶ್ ಮೋಟಾರ್ಸ್‍ನ ಮಲ್ಲಿಕಾರ್ಜನ ಸ್ವಾಮಿ, ಅನುಪಮ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಸ್,ಬಾಸ್ಕರ್, ನಗರಾಭೀವೃದ್ದಿನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಟಿ.ಬದರಿನಾಥ್, ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಆರ್,ಮಂಜುನಾಥ್,ಗ್ರಾ.ಪಂ.ಮಾಜಿ ಅದ್ಯಕ್ಷರಾದ ಎನ್.ಕುಮಾರ್, ವರ್ತಕರಾದ ಜಿ.ಆರ್ ಪ್ರತಾಪ್ ರೆಡ್ಡಿ,  ಕಾಂಗ್ರೆಸ ಮುಖಂಡರಾದ ಕೆಸಿ.ನಾಗರಾಜ್, ಶ್ರೀ ರಾಮ ಕಲ್ಯಾಣ ಮಂಟಪದ ಆರ್,ತೇಜಸ್ವಿ, ಇಂಜಿನಿಯರ್ ಎಂ.ಕೆ.ರವೀಂದ್ರ, ಸಾಯಿ ಡೆವೆಲಪ್ಪರ್ಸ್‍ನ ಜ್ಞಾನೇಶ್ ಬಾಬು, ಮೇದೇಹಳ್ಳಿ ಗ್ರಾ.ಪಂ.ಅಧ್ಯಕ್ಷರಾದ ಜಯರಾಮರೆಡ್ಡಿ, ಎ.ಸಿ.ಕೆ.ಗ್ರೂಪ್ಸ್ ನ ಟಿ.ಅಂಜಿನಿ ಭಾಗವಹಿಸಲಿದ್ದಾರೆ. ಭಕ್ತಿಕುಸುಮಾಂಜಲಿಯಲ್ಲಿ ಮಂಗಳೂರಿನ ಶ್ರೀ ಅಯ್ಯಪ್ಪ ಯಕ್ಷಗಾನ  ಕೊಕ್ಕರಣೆ ಮೇಳ  ಇವರಿಂದ ಯಕ್ಷಗಾನ ನೆರವೇರುವುದು.

ದಿನಾಂಕ 10-7-2024 ರಂದು ಬೆಳಿಗ್ಗೆ 7:53ರಿಂದ 8.41ರವರೆಗೆ ಸಲ್ಲುವ  ಕರ್ಕಾಟಕ ಲಗ್ನದ ಶುಭ ಮಹೂರ್ತದಲ್ಲಿ ಪ್ರತಿಷ್ಠಾಪನ ಬ್ರಹ್ಮ ಕಳಸಾ ಅಭಿಷೇಕ ,ಕುಂಭೇಶ ಕಳೆಶಾ ಅಭಿಷೇಕ ,ನಿದ್ರಾ ಕಳಸ ಅಭಿಷೇಕ, ಪ್ರತಿಷ್ಠಾಬಲಿ ಹಾಗೂ ಚಂಡಿಕಾ ಹೋಮವನ್ನು ನೆರವೇರಿಸಲಾಗುವುದು. ಈ ಮಹಾ ಕುಂಭಾಭಿಷೇಕದ ಉದ್ಘಾಟನೆಯನ್ನು ಬೆಂಗಳೂರಿನ ಡಾಕ್ಟರ್ ಕಾರ್ತಿಕ್ ಎಚ್ ಎಸ್. ನೆರವೇರಿಸಲಿದ್ದಾರೆ.

ಆ ದಿನದಂದು ಸಮಸ್ತ ಭಕ್ತಾದಿಗಳಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪವಿತ್ರವಾದ 18 ಮೆಟ್ಟಿಲುಗಳನ್ನು ಹತ್ತುವ ಸುವರ್ಣ ಅವಕಾಶವನ್ನು ಕಲ್ಪಿಸಲಾಗಿದೆ. ಈ ದಿನದಂದು ಸಾರ್ವಜನಿಕ ಮಹಾ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

11-7-2024  ರಂದು  ಬೆಳಿಗ್ಗೆ 6 ರಿಂದ ಗಣಪತಿ ಹೋಮ, ಉದಯಸ್ತಾಮಾನ ಪೂಜೆ, ಶ್ರೀ ಆಂಜನೇಯ ಮೂಲ ಮಂತ್ರ ಹೋಮ ಹಾಗೂ ಪೂರ್ಣಾಹುತಿ ಸಂಜೆ 6-30 ರಿಂದ ಭಗವತಿ ಸೇವೆ, ಅತ್ತಾಳೆ ಪೂಜೆ ಪವಿತ್ರವಾದ 18 ಮೆಟ್ಟಿಲುಗಳಿಗೆ ಪಡಿ ಪೂಜಾ ಕಾರ್ಯಕ್ರಮ ನಡೆಯಲಿದೆ.

ಸಮಾರಂಭವನ್ನು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಷ್ಟ್ರೀಯ ಅನ್ನದಾನ ಸಮಿತಿಯ ಅಧ್ಯಕ್ಷರಾದ ಕೃಷ್ಣಪ್ಪ ನೇರವೇರಿಸಲಿದ್ದು ಜ್ಯೋತಿಯನ್ನು ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್ ಬೆಳಗಲಿರುವರು.

ಭದ್ರ ಮೇಲ್ದಂಡೆ ಯೋಜನೆಯ ಸಹಾಯಕ ಆಡಳಿತಾಧಿಕಾರಿಗಳಾದ ಎಂ.ಜಿ.ಸೂರ್ಯನಾರಾಯಣ, ವೀರಶೈವ ಸಮಾಜದ ಮಾಜಿ ಅಧ್ಯಕ್ಷರಾದ ಕೆ.ವಿ.ಪ್ರಭಾಕರ್, ವಿದ್ಯಾ ನಗರದ ಆನಂತರಾಜ್,ಎಂ.ಹೆಚ್.ಸಿ.ಜ್ಯೂಯಲರ್ಸ್ ನ ಎಂ.ಸಿ.ವೆಂಕಟೇಶ್, ನಗರಭಾ ಸದಸ್ಯರಾದ ಚಂದ್ರಶೇಖರ್, ಗುತ್ತಿಗೆದಾರರಾದ ಹೇಮಂತ್ ಕುಮಾರ್, ಕುಮಾರಸ್ವಾಮಿ, ವಲಯ ಅರಣ್ಯಾಧಿಕಾರಿಗಳಾದ ಸಂದೀಪ್ ನಾಯಕ್ ಕುಮಾರ್, ಅಪ್ಪಾಜಿ ಪರಿಸರದ ವಿ.ಪ್ರಶಾಂತ್, ವೈಭವ್ ಗ್ರೂಪ್‍ನ  ಪ್ರಕಾಶ್ ರೆಡ್ಡಿ, ಗ್ರಾ.ಪಂ.ಸದಸ್ಯರಾದ ತಿಮ್ಮಣ್ಣ, ನ್ಯಾಯವಾದಿ ಉಮೇಶ್ ಭಾಗವಹಿಸಲಿದ್ದಾರೆ.  ಭಕ್ತಿ ಕುಸುಮಾಂಜಲಿ ಕಾರ್ಯಕ್ರಮವನ್ನು ರವೀಂದ್ರ ಪ್ರಭು, ರಾಜೇಶ್ ಪಡಿಯಾರ್ ಬಾಲಚಂದ್ರ ಸಂಗಡಿವರು ನಡೆಸಿಕೊಡಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ ಎಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿಯಾದ ಎಂ ಪಿ ವೆಂಕಟೇಶ್, ಮೋಹನ್‍ಕುಮಾರ್ ಬಿ.ಎಸ್ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಹಾಗೂ ದೇವಸ್ಥಾನದ ಸಮಿತಿಯವರು ವಿನಂತಿಸುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಶರಣ್ ಕುಮಾರ್ 9448664865,ವೆಂಕಟೇಶ್ ಎಂ.ಪಿ 9342310469, ಮೋಹನ್ ಕುಮಾರ್ ಬಿ.ಎಸ್.7899336209 ಇವರನ್ನು ಸಂಪರ್ಕ ಮಾಡ ಬಹುದಾಗಿದೆ.

Advertisement
Tags :
bengaluruchitradurgaSecond Maha KumbhabhishekSilver JubileeSri Ayyappa Swamy Templesuddionesuddione newsಚಿತ್ರದುರ್ಗದ್ವಿತೀಯ ಮಹಾ ಕುಂಭಾಭಿಷೇಕಬೆಂಗಳೂರುರಜತಾ ಮಹೋತ್ಸವಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article