For the best experience, open
https://m.suddione.com
on your mobile browser.
Advertisement

25ನೇ ಕಾರ್ಗಿಲ್ ವಿಜಯ ದಿವಸ್ | 100ಕ್ಕೂ ಹೆಚ್ಚು ಮಾಜಿ ಸೈನಿಕರನ್ನು ಗೌರವ ಸಲ್ಲಿಸಿದ ವೇದಾಂತ ಸೆಸಾ ಗೋವಾ

04:07 PM Aug 02, 2024 IST | suddionenews
25ನೇ ಕಾರ್ಗಿಲ್ ವಿಜಯ ದಿವಸ್   100ಕ್ಕೂ ಹೆಚ್ಚು ಮಾಜಿ ಸೈನಿಕರನ್ನು ಗೌರವ ಸಲ್ಲಿಸಿದ ವೇದಾಂತ ಸೆಸಾ ಗೋವಾ
Advertisement

Advertisement
Advertisement

ಚಿತ್ರದುರ್ಗ, ಆಗಸ್ಟ್ 2 : ವೇದಾಂತ ಸೆಸಾ ಗೋವಾ ಸಂಸ್ಥೆಯು 25ನೇ ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೂರಕ್ಕೂ ಹೆಚ್ಚು ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವ ಸಲ್ಲಿಸಿತು. ಕಂಪನಿಯು ತನ್ನ ಭದ್ರತಾ ವಲಯದಲ್ಲಿ ಬಹುತೇಕ ಮಾಜಿ ಸೈನಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದು ವಿಶೇಷ.

ಸೆಸಾ ಗೋವಾದ ಭದ್ರತಾ ತಂಡದ ಉಸ್ತುವಾರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೆ ಶಾಲು ಹೊದೆಸಿ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರು ಸೈನಿಕರಾಗಿ ಕೆಲಸ ಮಾಡುತ್ತಿದ್ದಾಗಿನ ಅನುಭವಗಳನ್ನು ಹಂಚಿಕೊಂಡರು. ಸನ್ಮಾನ ಕಾರ್ಯಕ್ರಮದಲ್ಲಿ ಎಸ್ ಬಿ ಯುನ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಕಾರ್ಗಿಲ್ ವಿಜಯ ದಿವಸದ ಸ್ಮರಣಾರ್ಥವಾಗಿ ದೇಶದ ರಕ್ಷಣೆಗೆ ಕೊಡುಗೆ ನೀಡಿದ ಮಾಜಿ ಸೈನಿಕರ ಕೊಡುಗೆಯನ್ನು ಗುರುತಿಸಿ ಗೌರವಿಸುವ ಸಲುವಾಗಿ ನಡೆದ ಈ ಸನ್ಮಾನ ಕಾರ್ಯಕ್ರಮವನ್ನು ಐದು ರಾಜ್ಯಗಳಲ್ಲಿ ಆಯೋಜಿಸಲಾಗಿತ್ತು. ಸೆಸಾ ಗೋವಾ ಸೆಕ್ಯುರಿಟಿ ಸಂಸ್ಥೆಯು ತಮ್ಮ ಭದ್ರತಾ ತಂಡದಲ್ಲಿ ಹಲವಾರು ಮಾಜಿ ಸೈನಿಕರನ್ನು ಸೇರಿಸಿಕೊಂಡಿದೆ. ಅವರ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಕೈಗಾರಿಕಾ ವಲಯ ಮತ್ತು ಕಾರ್ಪೊರೇಟ್ ವಲಯದ ಭದ್ರತೆಗೆ ಸಂಬಂಧಿಸಿದ ದೊಡ್ಡ ಜವಾಬ್ದಾರಿಗಳನ್ನು ವಹಿಸಲಾಗಿದೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ವೇದಾಂತ ಸೆಸಾ ಗೋವಾ ಐರನ್ ಓರ್ ಸಿಇಓ ಶ್ರೀ. ನವಿನ್ ಜಾಜು ಅವರು, “25ನೇ ಕಾರ್ಗಿಲ್ ವಿಜಯ ದಿವಸ ಆಚರಣೆ ಭಾರತೀಯರ ಹೆಮ್ಮೆಯ ಕ್ಷಣವಾಗಿದೆ. ನಾನು ಎಲ್ಲಾ ಸೈನಿಕರ ತ್ಯಾಗಕ್ಕೆ, ಸೇವೆಗೆ ಸೆಲ್ಯೂಟ್ ಮಾಡುತ್ತೇನೆ. ಸಮಾಜಕ್ಕೆ ಒಳಿತು ಮಾಡುವ ನಮ್ಮ ಉದ್ದೇಶದ ಭಾಗವಾಗಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲು ಹೆಮ್ಮೆ ಪಡುತ್ತೇವೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೇದಾಂತ ಐಓಕೆ ಸಿಇಓ ಶ್ರೀಶೈಲ ಗೌಡ ಅವರು, “ಸಶಸ್ತ್ರ ಪಡೆಗಳ ಶೌರ್ಯ, ಬದ್ಧತೆಗೆ ನಮಸ್ಕಾರ. ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ಸೈನಿಕರ ಕೊಡುಗೆ, ತ್ಯಾಗ, ಬಲಿದಾನಗಳಿಗೆ ಹೆಮ್ಮೆಯಿಂದ ಗೌರವ ಸಲ್ಲಿಸುತ್ತಿದ್ದೇವೆ” ಎಂದು ಹೇಳಿದರು. ಸೆಸಾ ಗೋವಾದ ಸಿಎಸ್ಓ ಶ್ರೀ ನಂದ್ ಭಟ್ ಸೈನಿಕರಿಗೆ ಗೌರವ ಸಲ್ಲಿಸುವ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.

ವೇದಾಂತ ಕಂಪನಿಯು ತಮ್ಮ ಸಂಸ್ಥೆಗೆ ಮಾಜಿ ಸೈನಿಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ ಮತ್ತು ಸೈನಿಕರ ನೇಮಕಾತಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಿದೆ. ಕಳೆದ ವರ್ಷ ‘ಗರ್ವದಿಂದ’ ಎಂಬ ಅಭಿಯಾನವನ್ನು ಪ್ರಾರಂಭಿಸಿ, ದೇಶಕ್ಕಾಗಿ ದೇಹ ತ್ಯಾಗ ಮಾಡಿದ ವೀರರಿಗೆ ಮತ್ತು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಿಗೆ ಕೃತಜ್ಞತೆ ಸಲ್ಲಿಸಲು ಪತ್ರ ಚಳುವಳಿ ಆಯೋಜಿಸಿತ್ತು. ಪಿವಿಸಿ ಮತ್ತು ಟೈಗರ್ ಹಿಲ್ ಹೀರೋ ಸುಬೇದಾರ್ ಮೇಜರ್ (ಹಾನರರಿ ಕ್ಯಾಪ್ಟನ್) ಯೋಗೇಂದ್ರ ಸಿಂಗ್ ಯಾದವ್ ಅವರು ವಿಡಿಯೋ ಮೂಲಕ ಉದ್ಯೋಗಿಗಳ ಜೊತೆ ಸಂವಹನ ನಡೆಸಿ ಸ್ಫೂರ್ತಿದಾಯಕ ಮಾತುಕತೆ ನಡೆಸಿಕೊಟ್ಟಿದ್ದರು.

Tags :
Advertisement