Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 24 ನೇ ಬ್ರಹ್ಮೋತ್ಸವ : ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ

05:51 PM Dec 16, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
                         ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 16 : ಮೆದೆಹಳ್ಳಿ ರಸ್ತೆಯಲ್ಲಿರುವ  ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 24 ನೇ ಬ್ರಹ್ಮೋತ್ಸವ  ಪೂಜಾ ಕಾರ್ಯಕ್ರಮ  ಆರು ದಿನಗಳ ಕಾಲ ನಡೆಯಲಿದೆ.

Advertisement

ಈ ಪೂಜೆಯನ್ನು ಕೇರಳದ ವಿಷ್ಣು ಭಟದ್ರಿ ಪಾಡ್  ಹಾಗೂ ಸತೀಶ್ ಶರ್ಮ ಸಂಗಡಿಗ ರೊಂದಿಗೆ ಮಹಾ ಗಣಪತಿ ಹೋಮ, ದೇವಸ್ಥಾನದ ಶುದ್ದಿ ಕಾರ್ಯ ನೆರವೇರಿಸುವುದು. ಸುದರ್ಶನ ಹೋಮ, ಅಭಿಷೇಕ, ಹುಶಂ ಪೂಜೆ, ನವಕಂ ಪಂಚ  ಘವ್ಯಂ, ಕಳಸ ಪೂಜೆ ,ಅಂಕುರು ಪೂಜೆ, ಮಳಪೂಜೆ, ದೀಪಾ ಆರಾಧನೆ, ಭಗವತಿ ಸೇವಾ, ಹತ್ತಾಳ ಪೂಜೆ  ಇನ್ನು ಮುಂತಾದ ಪೂಜಾ ಕಾರ್ಯಕ್ರಮವನ್ನು ನೆರವೇರಿಸುವದು

20-12-2023 ಬುಧವಾರ  ಸಂಜೆ 7-30 ಗಂಟೆಗೆ ಪಡಿ ಪೂಜ ಕಾರ್ಯಕ್ರಮ ಇರುವುದು . 24-12-2023  ರ  ಭಾನುವಾರ ಮಧ್ಯಾಹ್ನ 12 ಗಂಟೆಗೆ ವಿಶೇಷ ಮಹಾ ಅನ್ನದಾನ ಕಾರ್ಯಕ್ರಮವನ್ನು  ಸಾರ್ವಜನಿಕರಿಗೆ ನೆರವೇರಿಸಲಾಗುವುದು .

ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಚಿತ್ರದುರ್ಗದ ಸಮಸ್ತ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಶರಣ್ ಕುಮಾರ್  ಕಾರ್ಯದರ್ಶಿ ಎಂ ಪಿ ವೆಂಕಟೇಶ್,ಉಪಾಧ್ಯಕ್ಷ ಮಲ್ಲಿಕಾರ್ಜುನ ವಿನಂತಿಸಿದ್ದಾರೆ.

ಕರ್ನಾಟಕದ ಎರಡನೇ ಶಬರಿಮಲೆ ಎಂದು ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗ  ಮೆದಹಳ್ಳಿ ರಸ್ತೆಯಲ್ಲಿರುವ  ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ.   ಕರ್ನಾಟಕ ರಾಜ್ಯದಂತ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಬಂದು ದರ್ಶನ ಪಡೆಯುತ್ತಿದ್ದಾರೆ  ಶುಕ್ರವಾರ ದಿನದಂದು ಬೆಳಗಿನ ಜಾವ ಬೆಳಗಾಂ ಜಿಲ್ಲೆಯಿಂದ  ಮಾಲಾಧಾರಿ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಆಗಮಿಸಿ 18 ಮೆಟ್ಟಿಲುಗಳ ಪಡಿ ಹತ್ತುವ ಮೂಲಕ ಅಯ್ಯಪ್ಪನ ದೇವರ ದರ್ಶನವನ್ನು ಪಡೆದರು.

ಕಾರಣ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅತಿಹೆಚ್ಚಿನ ಭಕ್ತಾದಿಗಳು ಆಗಮಿಸಿ ಸರಿಯಾದ ರೀತಿಯಲ್ಲಿ  ಅಯ್ಯಪ್ಪನ ದರ್ಶನ ಪಡೆಯಲಿಕ್ಕೆ ಆಗುವುದಿಲ್ಲ ಹಾಗೂ ಅನೇಕ ತೊಂದರೆಗಳ ಒಳಪಟ್ಟ ಮಾಲಾಧಾರಿ ಸ್ವಾಮಿಗಳು ಚಿತ್ರದುರ್ಗಕ್ಕೆ ಬಂದು ಅಯ್ಯಪ್ಪನ ದರ್ಶನವನ್ನು ಪಡೆಯುತ್ತಿದ್ದಾರೆ ಬಂದಿರುವ ಭಕ್ತಾದಿಗಳಿಗೆ ರಾತ್ರಿ ಮಲಗುವ ವ್ಯವಸ್ಥೆಯನ್ನು ಹಾಗೂ ಪ್ರಸಾದದ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement
Tags :
24 ನೇ ಬ್ರಹ್ಮೋತ್ಸವ24th BrahmotsavamchitradurgaHere is the program detailsSri Ayyappa Swamy Templeಕಾರ್ಯಕ್ರಮಗಳ ಮಾಹಿತಿ ಇಲ್ಲಿದೆಚಿತ್ರದುರ್ಗಶ್ರೀ ಅಯ್ಯಪ್ಪ ಸ್ವಾಮಿ
Advertisement
Next Article