Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೇ 15 ರಂದು ರಾಜವೀರ ಮದಕರಿನಾಯಕರ 242 ನೇ ಪುಣ್ಯಸ್ಮರಣೆ : ಬಿ.ಕಾಂತರಾಜ್

01:07 PM May 13, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 13  : ರಾಜವೀರ ಮದಕರಿನಾಯಕರ 242 ನೆ ಪುಣ್ಯಸ್ಮರಣೆ ಮೇ. 15 ರಂದು ಸರಳವಾಗಿ ಆಚರಿಸಲಾಗುವುದೆಂದು ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.

Advertisement

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮದಕರಿನಾಯಕನ ಪ್ರತಿಮೆಯನ್ನು ವಿಶೇಷವಾಗಿ ಅಲಂಕರಿಸಿ ಸಮಸ್ತ ಜನತೆಗೂ ಪುಪ್ಷಾರ್ಚನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು. ಮದಕರಿನಾಯಕನನ್ನು ಸ್ಮರಿಸುವುದರಲ್ಲಿ ಹಿಂದೆ ಬಿದ್ದಿದ್ದೇವೇನೋ ಅನ್ನಿಸುತ್ತೆ. ಮುಂದಿನ ದಿನಗಳಲ್ಲಿ ಸ್ಮರಣೋತ್ಸವ, ಪಟ್ಟಾಭಿಷೇಕ, ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು. ನಾಳೆ ನಡೆಯುವ ಪುಣ್ಯಸ್ಮರಣೆಯಲ್ಲಿ ಪ್ರತಿಮೆ ಎದುರು ಮೇಣದ ಬತ್ತಿ ಹಚ್ಚಲಾಗುವುದು. ಜಿಲ್ಲೆಯ ಸಮಸ್ತರು ಭಾಗವಹಿಸುವಂತೆ ಬಿ.ಕಾಂತರಾಜ್ ಮನವಿ ಮಾಡಿದರು.

ಚಿತ್ರದುರ್ಗದಲ್ಲಿ ಮದಕರಿನಾಯಕ ಥೀಂ ಪಾರ್ಕ್ ನಿರ್ಮಾಣ ಮಾಡುವುದಾಗಿ ಅಮಿತ್‍ಷಾ ಕಳೆದ ವರ್ಷವೇ ಭರವಸೆ ಕೊಟ್ಟಿದ್ದರು. ಇನ್ನು ಈಡೇರಿಲ್ಲ. ನಮ್ಮ ಒತ್ತಾಯ ನಿರಂತರವಾಗಿರುತ್ತದೆಂದು ಹೇಳಿದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ಚುನಾವಣೆ ನೀತಿ ಸಂಹಿತೆಯಿರುವುದರಿಂದ ಮದಕರಿನಾಯಕನ ಪುಣ್ಯಸ್ಮರಣೆಯನ್ನು ಯಾವುದೇ ಆಡಂಭರವಿಲ್ಲದೆ ಸರಳವಾಗಿ ಆಚರಿಸುತ್ತೇವೆ. ಇದು ಕೇವಲ ನಾಯಕ ಜನಾಂಗದವರಿಗಷ್ಟೆ ಸೀಮಿತವಲ್ಲ. ಎಲ್ಲಾ ಜಾತಿಯವರ ಸಹಕಾರ ಬೇಕು ಎಂದು ಕೋರಿದರು.
ಮುಂದಿನ ವರ್ಷದಿಂದ ಅದ್ದೂರಿಯಾಗಿ ಆಚರಿಸುತ್ತೇವೆಂದರು.

ಜೆ.ಎನ್.ಕೋಟೆ ಗುರುಸಿದ್ದಪ್ಪ, ಕಾಟಿಹಳ್ಳಿ ಕರಿಯಪ್ಪ, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಡಿ.ಗೋಪಾಲಸ್ವಾಮಿ ನಾಯಕ, ಹೆಚ್.ಅಂಜಿನಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

ಪ್ರತಿಭಾ ಪುರಸ್ಕಾರ :

ಚಿತ್ರದುರ್ಗ : 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಪ್ರತಿಭಾನ್ವಿತ ಮಕ್ಕಳಿಗೆ ಮಹಾ ಶಿವಶರಣ ಹರಳಯ್ಯ ಗುರುಪೀಠ, ಹರಳಯ್ಯ ವಿದ್ಯಾಸಂಸ್ಥೆ, ಹರಳಯ್ಯ ಆಂಗ್ಲ ಮಾಧ್ಯಮ ಶಾಲೆ ಸಹಯೋಗದೊಂದಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ.

ಅರ್ಹ ವಿದ್ಯಾರ್ಥಿಗಳು ದಿನಾಂಕ: 25-5-2024 ರ ಒಳಗಾಗಿ ಮಹಾಶಿವಶರಣ ಗುರುಪೀಠ ಐಮಂಗಲ ಇಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳುವಂತೆ ಬಸವ ಹರಳಯ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ: 9449939016, 7259551325 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

Advertisement
Tags :
B. KantarajbengaluruchitradurgacommemorationRajaveera Madakarinayaksuddionesuddione newsಚಿತ್ರದುರ್ಗಪುಣ್ಯಸ್ಮರಣೆಬಿ.ಕಾಂತರಾಜ್ಬೆಂಗಳೂರುರಾಜವೀರ ಮದಕರಿನಾಯಕಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article