15 ದಿನಗಳ ಉಚಿತ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ತರಬೇತಿ ಶಿಬಿರ
ಚಿತ್ರದುರ್ಗ: ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ್ ಪತಂಜಲಿ ಕಿಸಾನ್ ಸೇವಾ ಸಮಿತಿ ವತಿಯಿಂದ 15 ದಿನಗಳ ಉಚಿತ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ತರಬೇತಿ ಶಿಬಿರವನ್ನು ಇದೇ ಸೆ.22 ರಿಂದ ಅ.6 ರವರೆಗೆ ಬೆಳಿಗ್ಗೆ 5.30 ರಿಂದ 7 ಗಂಟೆಯವರೆಗೆ ಚಿತ್ರದುರ್ಗ ನಗರದ ಎನ್.ಹೆಚ್-13ರ ಪಿಳ್ಳೇಕೆರೆನಹಳ್ಳಿಯ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸುವರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಲ್ಡರ್ ಅಸೋಸಿಯೇಷನ್ ಛರ‍್ಮನ್ ಎಂ.ಕೆ.ಅನAತರೆಡ್ಡಿ , ಜಿ.ಪಂ ನಿವೃತ್ತ ಇಂಜಿನಿಯರ್ ಬಿ.ಶರಣಪ್ಪ ಭಾಗವಹಿಸುವರು. ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಎಂ.ವಿ.ದೇವಾನAದ ನಾಯ್ಕ್ ಉಪಸ್ಥಿತರಿರುವರು. ಯೋಗ ಶಿಕ್ಷಕರಾದ ಜಿ.ಶ್ರೀನಿವಾಸ್, ಶ್ರೀಧರ್, ಲಲಿತಾ ಬೇದ್ರೆ, ವೀರೇಶ್, ತಿಪ್ಪೇಸ್ವಾಮಿ, ನಾಗೇಶ್, ಬಸವರಾಜ್ ಶಿಬಿರ ನಡೆಸಿಕೊಡುವರು. ಶಿಬಿರಾರ್ಥಿಗಳು ಬರುವಾಗ ಶೌಚಕ್ರಿಯೆಗಳನ್ನು ಮುಗಿಸಿ ಒಂದು ಗ್ಲಾಸ್ ನೀರು ಕುಡಿದು ಶಿಬಿರದಲ್ಲಿ ಕುಳಿತುಕೊಳ್ಳಲು ಯೋಗ ಮ್ಯಾಟ್ ಅಥವಾ ಜಮಾಖಾನದೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಸಂಘಟನಾ ಕಾರ್ಯದರ್ಶಿ ಜಿ.ಎಸ್.ಗುರುಮೂರ್ತಿ ಅವರ ಮೊಬೈಲ್ 9449145416, ಖಜಾಂಚಿ ನವೀನ್ 9901585905 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.