Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ 14 ಲಕ್ಷ ನಿವ್ವಳ ಲಾಭ : ನಿಶಾನಿ ಜಯ್ಯಣ್ಣ

04:54 PM Aug 18, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.18 : ‌ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ, 2023-24ಕ್ಕೆ 14,38,975.57 ರೂ ನಿವ್ವಳ ಲಾಭಗಳಿಸಿದೆ. ಇದರಲ್ಲಿ ಶೇ. 16 ರಷ್ಟನ್ನು ಷೇರುದಾರರಿಗೆ ಡಿವಿಡೆಂಡ್ ನೀಡಲಾಗುವುದು, ಅಲ್ಲದೆ ಸೊಸೈಟಿ ಮೇಲೆ ಇರುವ ಜಾಗದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗುವುದೆಂದು ಸೊಸೈಟಿಯ ಅಧ್ಯಕ್ಷರಾದ ನಿಶಾನಿ ಜಯ್ಯಣ್ಣ ತಿಳಿಸಿದರು.

Advertisement

ನಗರದ ಶ್ರೀಮತಿ ಕಾಟಮ್ಮ ಪಟೇಲ್ ವೀರನಾಗಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ, ನ 107 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಂಘವು ದಿನಾಂಕ 22-08-1912ರಂದು ನೊಂದಣೆಯಾಗಿದ್ದು ಅಲ್ಲಿಂದ ಇಲ್ಲಿಯವರಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದು, ಸದಸ್ಯರುಗಳ ಸಹಕಾರ ಮತ್ತು ಸೂಚನೆಗಳ ನೆರವಿನಿಂದ ಸಂಘವು ಪ್ರಗತಿದಾಯಕವಾಗಿ ಬೆಳೆದು ಬಂದಿದ್ದು, ಇದರ ಆಡಳಿತ ವ್ಯಾಪ್ತಿಯು ಚಿತ್ರದುರ್ಗ ನಗರಕ್ಕೆ ಮಾತ್ರ ಸೀಮಿತವಾಗಿರುತ್ತದೆ.

ಸಂಘವು ದಿನಾಂಕ 31-03-2024ರ ಅಂತ್ಯಕ್ಕೆ ಒಟ್ಟು ರೂ. 49,48,000-00ಗಳ ಪಾವತಿಯಾದ ಷೇರು ಬಂಡವಾಳವಿದ್ದು 2607 ಜನ ಸದಸ್ಯರನ್ನು ಹೊಂದಿರುತ್ತದೆ. ಸಂಘದಲ್ಲಿ 31-03-2024ರ ಅಂತ್ಯಕ್ಕೆ ಅಪದ್ಧನ ನಿಧಿ ರೂ. 17,67,706.40 ಗಳು ಹಾಗೂ ಇತರೆ ನಿಧಿಗಳ ಬಾಬು 59,39,549-49 ರೂಗಳಾಗಿದೆ.

ಕಳೆದ ಸಾಲಿನಲ್ಲಿ ಸಂಘದಲ್ಲಿ ಒಟ್ಟು 4,53,96,690/- ಠೇವಣಿಗಳಿದ್ದು 31-03-2024ರ ಅಂತ್ಯಕ್ಕೆ ರೂ. 5,03,29,167.00ಗಳ ಠೇವಣಿ ಹೊಂದಿರುತ್ತದೆ. ಸದರಿ ಸಾಲಿಗೆ ರೂ. 49,32,477-00ಗಳ ಠೇವಣಿ ವೃದ್ಧಿಯಾಗಿರುತ್ತದೆ. ಸದಸ್ಯರು ಹೆಚ್ಚಿನ ಠೇವಣೆ ಸಂಘದಲ್ಲಿ ಜಮಾ ಮಾಡಲು ಕೋರಿದೆ. ಹಾಗೂ ಹಿರಿಯ ಸದಸ್ಯರಿಗೆ ಠೇವಣಿ ಮೇಲೆ ಶೇಕಡ 0.50 ರಂತೆ ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತಿದೆ ಎಂದರು.

31-03-2024ರ ಅಂತ್ಯಕ್ಕೆ ಒಟ್ಟು ರೂ. 57,93,357.00 ಗಳನ್ನು ವಿವಿಧ ಬ್ಯಾಂಕು ಹಾಗೂ ಸಂಸ್ಥೆಗಳಲ್ಲಿ ತೊಡಗಿಸಲಾಗಿದೆ. ದಿನಾಂಕ 31-03-2023ರ ಅಂತ್ಯಕ್ಕೆ ಸದಸ್ಯರಿಂದ ಬರಬೇಕಾದ ಒಟ್ಟು ಸಾಲದ ಬಾಕಿ ರೂ. 1,86,60,373-00 ಗಳಿದ್ದು, ದಿನಾಂಕ 31-03-2024ರ ಅಂತ್ಯಕ್ಕೆ ರೂ. 2,59,94,319-00 ಬರಬೇಕಾ ಗಿರುತ್ತದೆ. ಸದರಿ ಸಾಲಿಗೆ ರೂ. 73,33,946-00ಗಳ ಸಾಲ ವೃದ್ಧಿಯಾಗಿರುತ್ತದೆ. ಈ ಪೈಕಿ ರೂ. 26,56, 669.00 ಗಳು ಸಾಲ ಶೇಕಡ 10.22ರಷ್ಟು ಸುಸ್ತಿಯಲ್ಲಿರುತ್ತದೆ. ನಮ್ಮ ಬ್ಯಾಂಕ್ ಮೇಲಗಡೆಯಲ್ಲಿ ಈಗ ಖಾಲಿಯಾದ ಜಾಗಯಿದೆ ಅದನ್ನು ಸಸದುಪಯೋಗ ಪಡಿಸಬೇಕಿದೆ ಈ ಹಿನ್ನಲೆಯಲ್ಲಿ ಅಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡುವುದರ ಮೂಲಕ ಸಣ್ಣ-ಪುಟ್ಟ ಕಾರ್ಯಕ್ರಮಗಳಿಗೆ ನೀಡಿದರೆ ಸೊಸೈಟಿಗೂ ಸಹಾ ಆದಾಯ ಬರಲದೆ ಮುಂದಿನ ದಿನದಲ್ಲಿ ಈ ಕಾರ್ಯವನ್ನು ಮಾಡಲಾಗುವುದು ಎಂದು ನಿಶಾನಿ ಜಯ್ಯಣ್ಣ ತಿಳಿಸಿದರು.

2023-24ನೇ ಸಾಲಿನ ಲೆಕ್ಕ ಪತ್ರಗಳನ್ನು ಚಾರ್ಟ್‍ಡ್ ಅಕೌಂಟೆಂಟ್, ಈ. ಚಂದ್ರಣ್ಣರವರು ಸಂಘದ ಲೆಕ್ಕಪತ್ರಗಳನ್ನು ಪರಿಶೋದಿಸಿ ಈ ಸಂಘವನ್ನು "ಎ" ತರಗತಿಯ ಸಂಘವೆಂದು ಪರಿಗಣಿಸಿರುತ್ತಾರೆ. 2023-24ಕ್ಕೆ ನಿವ್ವಳ ಲಾಭ ರೂ.14.38,975.57 ಗಳಿಸಿರುತ್ತದೆ.

ಸಂಘದ ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಈಗಾಗಲೇ ಬಂಗಾರದ ಸಾಲ ಕಾರ್ಯ ರೂಪಕ್ಕೆ ತಂದಿರುತ್ತೇವೆ. ಹಾಗೂ ಇದರ ಜೊತೆಗೆ ಸಂಘದ ಸದಸ್ಯರಿಗೆ ಲಾಕರ್ ವ್ಯವಸ್ಥೆ ಸಹ ಕಾರ್ಯಾರಂಭವಾಗಿರುತ್ತದೆ ಸದಸ್ಯರ ಡಿವಿಡೆಂಡ್‍ನಲ್ಲಿ ರೂ.60.ಗಳನ್ನು ಜಮಾ ಪಡೆದು ನ್ಯೂ ಇಂಡಿಯ ಇನ್ಸುರೆನ್ಸ್ ಕಂಪನಿಯಲ್ಲಿ ಜಮಾ ಮಾಡಿ ಎಲ್ಲ ಸದಸ್ಯರಿಗೆ ವಿಮೆ ಮಾಡಿಸಿರುತ್ತೇವೆ. ಇದರಿಂದ ಸಂಘದ ಸದಸ್ಯರಿಗೆ ಅನುಕೂಲವಾಗಿರುತ್ತದೆ ಹಾಗೂ ಈ ಸಾಲಿನ ಡಿವಿಡೆಂಡ್‍ನಲ್ಲಿ ಸಹ ರೂ. 60. ಗಳನ್ನು ಜಮಾ ಮಾಡಿಕೊಂಡು ವಿಮೆ ನವೀಕರಿಸಲಾಗುವುದು ಎಂದು ತಿಳಿಸಿದರು.

ಸಂಘದಲ್ಲಿ ನೂತನವಾಗಿ ಎಸ್.ಎಂ.ಎಸ್. ಅಳವಡಿಸಿದ್ದು. ಸದಸ್ಯರಿಗೆ ಇನ್ನು ಮುಂದೆ ವ್ಯವಹಾರ ಮಾಡುವ ಎಲ್ಲ ಖಾತೆಗಳಿಗೆ ಎಸ್.ಎಂ.ಎಸ್. ಬರುವ ವ್ಯವಸ್ಥೆ ಮಾಡಲಾಗಿದೆ. ಸದಸ್ಯರಿಗೆ ಈಗಾಗಲೇ ಗೃಹ ಸಾಲ, ಆಧಾರ ಸಾಲ, ವಾಹನ ಸಾಲ, ಶೂರಿಟಿ ಸಾಲ, ಬಂಗಾರ ಸಾಲ ನೀಡುತ್ತಿದ್ದು, ಈಗ ನೂತನವಾಗಿ ಕ್ಯಾಷ್ ಕ್ರೆಡಿಟ್ ಸಾಲ ಪ್ರಾರಂಬಿಸಲಾಗಿದೆ.

ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನು ಹೆಚ್ಚು ಲಾಭದಾಯಕವಾಗಿ ಮುನ್ನೆಡೆಸುವುದೇ ನಮ್ಮ ಮುಖ್ಯ ಗುರಿ. ಆದ್ದರಿಂದ ಸಂಘದ ಎಲ್ಲಾ ಸದಸ್ಯರು ಕನಿಷ್ಠ ವ್ಯವಹಾರ ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳಲು ಮನವಿ ಮಾಡಲಾಯಿತು.  ಪ್ರಸಕ್ತ 2023-24ನೇ ಸಾಲಿನಲ್ಲಿ ಒಟ್ಟು 12 ಸಭೆಗಳು ನಡೆಸಲಾಗಿದೆ. 2023-24ನೇ ಸಾಲಿನಲ್ಲಿ 26 ಸದಸ್ಯರು ಮೃತಪಟ್ಟಿದ್ದು, ಈ ಖಾತೆಯಿಂದ ಒಟ್ಟು ರೂ.29,910.96 ಗಳನ್ನು ಸದಸ್ಯರ ಕುಟುಂಬ ವರ್ಗದವರಿಗೆ ಪಾವತಿಸಲಾಗಿದೆ.  ಇದೇ ಸಂದರ್ಭದಲ್ಲಿ 2024ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇಕಡಾ 85 ಕ್ಕಿಂತ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳನ್ನು ಹಾಗೂ ಸೊಸೈಟಿಯ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿನ ಉಪಾಧ್ಯಕ್ಷರಾದ ಸಿ.ಹೆಚ್. ಸೂರ್ಯಪ್ರಕಾಶ್, ನಿರ್ದೆಶಕರಾದ ಡಾ.ರಹಮತ್ ಉಲ್ಲಾ, ಬಿ.ವಿ.ಶ್ರೀನಿವಾಸ್ ಮೂರ್ತಿ, ಬಿ.ಎಂ.ನಾಗರಾಜ್ ಬೇದ್ರೆ,ಮ ಕೆ.ಚಿಕ್ಕಣ್ಣ, ಸೈಯದ್ ಮುಜೀಬ್, ಎಸ್.ವಿ.ಪ್ರಸನ್ನ, ಕೆ.ಪ್ರಕಾಶ್, ಚಂದ್ರಪ್ಪ, ಶ್ರೀಮತಿ ಎ.ಚಂಪಕ ಹಾಗೂ ಶ್ರೀಮತಿ ಎನ್.ಎಂ.ಪುಷ್ಪವಲ್ಲಿ ಹಾಜರಿದ್ದರು.  ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ ನ ಆರ್ಥಿಕ ಸಲಹೆಗಾರರಾದ ಮಹ್ಮದ್ ನಯೀಮ್ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
bengaluruchitradurgaChitradurga Town Co-operative Societynet profitNishani Jayyanna ಸುದ್ದಿಒನ್suddionesuddione newsಚಿತ್ರದುರ್ಗಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿನಿವ್ವಳ ಲಾಭನಿಶಾನಿ ಜಯ್ಯಣ್ಣಬೆಂಗಳೂರುಸುದ್ದಿಒನ್ ನ್ಯೂಸ್
Advertisement
Next Article