For the best experience, open
https://m.suddione.com
on your mobile browser.
Advertisement

ಕೋರ್ಟ್ ನತ್ತ ದರ್ಶನ್ ಸೇರಿದಂತೆ 13 ಆರೋಪಿಗಳು : ಚಿತ್ರದುರ್ಗದತ್ತ ರೇಣುಕಾಸ್ವಾಮಿ ಮೃತದೇಹ

05:25 PM Jun 11, 2024 IST | suddionenews
ಕೋರ್ಟ್ ನತ್ತ ದರ್ಶನ್ ಸೇರಿದಂತೆ 13 ಆರೋಪಿಗಳು   ಚಿತ್ರದುರ್ಗದತ್ತ ರೇಣುಕಾಸ್ವಾಮಿ ಮೃತದೇಹ
Advertisement

Advertisement

ಸುದ್ದಿಒನ್, ಚಿತ್ರದುರ್ಗ, ಜೂ.11 :  ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹದಿಮೂರು ಆರೋಪಿಗಳನ್ನು ಕೋರ್ಟ್ ನತ್ತ ಕರೆದುಕೊಂಎಉ ಹೊರಟಿದ್ದಾರೆ. ಮೊದಲಿಗೆ ಎಲ್ಲರಿಗೂ ಮೆಡಿಕಲ್ ಚೆಕಪ್ ಮಾಡಿಸಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಗಿತ್ತು. ಇದೀಗ ಕೋರ್ಟ್ ನತ್ತ ಕೃದುಕೊಂಡು ಹೋಗಿದ್ದಾರೆ.

ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಈ ವೇಳೆ ಬೆಂಗಳೂರು ಪೊಲೀಸರು ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಬೌರಿಂಗ್ ಆಸ್ಪತ್ರೆ ಬಳಿಯೂ ಬಿಗಿ ಭದ್ರತೆಯೊಂದಿಗೆ ಮೆಡಿಕಲ್ ಚೆಕಪ್ ಮಾಡಲಾಗಿತ್ತು. ಇದೀಗ ಕೋರ್ಟ್ ಆವರಣದಲ್ಲೂ ಪೊಲೀಸರಿಂದ ಬಿಗಿ ಭದ್ರತೆ ಮಾಡಲಾಗಿದೆ.

Advertisement

ರೇಣುಕಾ ಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ಕೂಡ ಮುಗಿದಿದೆ. ಈಗಾಗಲೇ ಮೃತದೇಹ ಚಿತ್ರದುರ್ಗದತ್ತ ರವಾನೆಯಾಗಿದ್ದು, ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ. ರೇಣುಕಾ ಸ್ವಾಮಿ ಊರಿನಲ್ಲಿ ಅಂತ್ಯ ಕ್ರಿಯೆಗೆ ಈಗಾಗಲೇ ಎಲ್ಲಾ ತಯಾರಿ ಕೂಡ ನಡೆದಿದೆ.

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ಕರೆದು ಕೊಲೆಯನ್ನೇ ಮಾಡಿಬಿಟ್ಟಿದ್ದಾರೆ. ಕೊಲೆ ಮಾಡಿದ ಮೇಲೂ ಮೋರಿಯಲ್ಲಿ ಬಿಸಾಡಿದ ದರ್ಶನ್ ಸ್ನೇಹಿತರ ಧೈರ್ಯ ಮೆಚ್ಚಲೇಬೇಕಾಗಿದೆ. ಪೊಲೀಸರ ತನಿಖೆಯ ರೀತಿಗೆ ದರ್ಶನ್ ಹಾಗೂ ಪವಿತ್ರಾ ಅವರು ಅಲ್ಲಿಯೇ‌ ಇದ್ದರು ಎಂಬ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ಕೋರ್ಟ್ ನಲ್ಲಿ ಯಾವ ರೀತಿಯ ವಾದ-ವಿವಾದ ನಡೆಯುತ್ತೆ, ಸತ್ಯಾಸತ್ಯತೆ ಒಪ್ಪಿಕೊಳ್ಳುವ ಆಧಾರದ ಮೇಲೆ ಶಿಕ್ಷೆಯ ಪ್ರಮಾಣವೂ ಗೊತ್ತಾಗಲಿದೆ. ಪೊಲೀಸರು ತನಿಖೆಗಾಗಿ ಕಸ್ಟಡಿಗೂ ಕೇಳಬಹುದು. ಕೋರ್ಟ್ ನಲ್ಲಿ ನೀಡುವ ತೀರ್ಮಾನದ ಬಳಿಕವೇ ಮುಂದಿನ ವಿಚಾರ ತಿಳಿಯಲಿದೆ. ಈಗಾಗಲೇ ದರ್ಶನ್ ಅವರು ಅಭಿಮಾನಿಗಳು ಪೊಲೀಸ್ ಸ್ಟೇಷನ್ ಮುಂದೆ ಜೈಕಾರ ಹಾಕುತ್ತಿದ್ದಾರೆ.

Tags :
Advertisement