For the best experience, open
https://m.suddione.com
on your mobile browser.
Advertisement

ಶಕ್ತಿ ಯೋಜನೆಯ ಬಳಿಕ ದೇಗುಲದ ಆದಾಯದಲ್ಲಿ ಲಾಭ : ಎಷ್ಟು ಕೋಟಿ ಗೊತ್ತಾ..?

12:34 PM Feb 05, 2024 IST | suddionenews
ಶಕ್ತಿ ಯೋಜನೆಯ ಬಳಿಕ ದೇಗುಲದ ಆದಾಯದಲ್ಲಿ ಲಾಭ   ಎಷ್ಟು ಕೋಟಿ ಗೊತ್ತಾ
Advertisement

Advertisement
Advertisement

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಹಲವು ಗ್ಯಾರಂಟಿ ಯೋಜನೆಗಳನ್ನು ತಂದಿದೆ. ಅದರಲ್ಲಿ ಮಹಿಳೆಯರಿಗೆ ಮುಖ್ಯವಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಮಹಿಳೆಯರು ಧಾರ್ಮಿಕ ಕ್ಷೇತ್ರಗಳಿಗೆ ಹೋಗುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಧಾರ್ಮಿಕ ದತ್ತಿ ಯೋಜನೆಯಿಂದ ಸರ್ಕಾರದ ಖಜಾನೆ ದುಪ್ಪಟ್ಟಾಗಿದೆ

Advertisement

2022ರಲ್ಲಿ ದೇಗುಲಗಳಿಗೆ ಬಂದ ಆದಾಯ 230 ಕೋಟಿ. ಆದರೆ 2023ರಲ್ಲಿ ದೇಗುಲಗಳಿಗೆ ಬಂದ ಆದಾಯ 390 ಕೋಟಿ ಇದೆ.‌ ಈ ಮೂಲಕ 150 ಕೋಟಿ ಹೆಚ್ಚಳವಾಗಿದೆ. ಶಕ್ತಿ ಯೋಜನೆ ಜಾರಿಯಾದ ಮೇಲೆ 150 ಕೋಟಿ ಹಣ ಹೆಚ್ಚಿನದಾಗಿ ಹರಿದು ಬಂದಿದೆ.

Advertisement
Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ ವರ್ಷ 74 ಕೋಟಿ ಬಂದಿತ್ತು. ಆದರೆ ಈ ವರ್ಷ 123 ಕೋಟಿ ಬಂದಿದೆ. ಕೊಲ್ಲೂರು ಮೂಕಂಬಿಕಾ ದೇವಸ್ಥಾನದಲ್ಲಿ ಕಳೆದ ವರ್ಷದ ಆದಾಯ 31.36 ಕೋಟಿಯಾದರೆ, ಈ ವರ್ಷದ ಆದಾಯ 59.47 ಕೋಟಿ ಬಂದಿದೆ.‌ ಚಾಮುಂಡೇಶ್ವರಿ ದೇಗುಲದಲ್ಲಿ ಕಳೆದ ವರ್ಷದ ಆದಾಯ 21.92ಕೋಟಿಯಾದರೆ, ಈ ವರ್ಷದ ಆದಾಯ 52.40 ಕೋಟಿ ಬಂದಿದೆ.

ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ವರ್ಷದ ಆದಾಯ 31.74 ಕೋಟಿ, ಈ ವರ್ಷದ ಆದಾಯ 36.48 ಕೋಟಿಯಾಗಿದೆ. ಇನ್ನು ಕಟೀಲು ದುರ್ಗಾಪರಮೇಶ್ವರಿಯಲ್ಲಿ ಕಳೆದ ವರ್ಷದ ಆದಾಯ 19.57 ಕೋಟಿಯಾದರೆ ಈ ವರ್ಷದ ಆದಾಯ 32.1೦ ಕೋಟಿಯಾಗಿದೆ. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಕಳೆದ ವರ್ಷದ ಆದಾಯ 18.49ಕೋಟಿಯಾದರೆ ಈ ವರ್ಷದ ಆದಾಯ 26.71ಕೋಟಿಯಾಗಿದೆ. ಸವದತ್ತಿ ಯಲಮ್ಮನ ದೇವಸ್ಥಾನದಲ್ಲಿ ಕಳೆದ ವರ್ಷದ ಆದಾಯ 10.99ಕೋಟಿಯಾಗಿದ್ದು, ಈ ವರ್ಷದ ಆದಾಯ 22.52 ಕೋಟಿಯಾಗಿದೆ. ಮಂದಾರ್ತಿ ದುರ್ಗಾಪರಮೇಶ್ವರಿಯಲ್ಲಿ ಕಳೆದ ವರ್ಷದ ಆದಾಯ 31.36 ಕೋಟಿಯಾದರೆ ಈ ವರ್ಷದ ಆದಾಯ 59.47 ಕೋಟಿಯಾಗಿದೆ.

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ ವರ್ಷದ ಆದಾಯ 7.89ಕೋಟಿಯಾದರೆ ಈ ವರ್ಷದ ಆದಾಯ 12.25 ಕೋಟಿಯಾಗಿದೆ. ಬೆಂಗಳೂರು ಬನಶಂಕರಿ ದೇವಸ್ಥಾನದಲ್ಲಿ ಕಳೆದ ವರ್ಷದ ಆದಾಯ 5.95 ಕೋಟಿ, ಈ ವರ್ಷದ ಆದಾಯ 10.58 ಕೋಟಿ ಬಂದಿದೆ. ಈ ಮೂಲಕ ಶಕ್ತಿ ಯೋಜನೆಯಿಂದ ಮುಜರಾಯಿ ಇಲಾಖೆ ಶ್ರೀಮಂತವಾಗಿದೆ.

Advertisement
Tags :
Advertisement